ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ನಾಯಿಯಿಂದ ಕಚ್ಚಿಸಿಕೊಂಡಿದ್ದ ಮ್ಯಾಟ್‌!

ನ್ಯೂಜಿಲೆಂಡ್‌ನ ಹಿರಿಯ ಕ್ರಿಕೆಟಿಗ ಪೂರ್‌ ನಿಧನ
Last Updated 13 ಜೂನ್ 2020, 8:52 IST
ಅಕ್ಷರ ಗಾತ್ರ

ಆಕ್ಲಂಡ್‌: ಬೆಂಗಳೂರಿನಲ್ಲಿ 1955ರಲ್ಲಿ ನಡೆದ ಅಭ್ಯಾಸ ಪಂದ್ಯದ ವೇಳೆ ಮೈದಾನದೊಳಕ್ಕೆ ಓಡಿಬಂದಿದ್ದ ಬೀದಿನಾಯಿಯನ್ನು ಎತ್ತಿಕೊಂಡು ಪಿಚ್‌ನಿಂದ ಆಚೆ ಬಿಟ್ಟು ಸುದ್ದಿಯಾಗಿದ್ದ ನ್ಯೂಜಿಲೆಂಡ್‌ನ ಕ್ರಿಕೆಟಿಗ ಮ್ಯಾಟ್‌ ಪೂರ್‌ ಗುರುವಾರ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.

‘ಪೂರ್ ಅವರು ಶ್ವಾನಪ್ರೇಮಿಯಾಗಿದ್ದರು.‌ ಆ ಘಟನೆಯ ವೇಳೆ ನಾಯಿ ಅವರಿಗೆ ಕಚ್ಚಿದ್ದ ಕಾರಣ ತಂಡದಲ್ಲಿ ರೇಬಿಸ್‌ ಆತಂಕ ಉಂಟಾಗಿತ್ತು’ ಎಂದು ನ್ಯೂಜಿಲೆಂಡ್‌ನ ಸ್ಟಫ್‌ ವೆಬ್‌ಸೈಟ್‌ ವರದಿ ಮಾಡಿದೆ.

ಆ ಟೆಸ್ಟ್‌ ಸರಣಿಯಲ್ಲಿ ಬೆಂಗಳೂರಿನಲ್ಲಿ ಯಾವುದೇ ಟೆಸ್ಟ್‌ ಪಂದ್ಯಗಳಿರಲಿಲ್ಲ. ಅಭ್ಯಾಸ ಪಂದ್ಯವೊಂದರಲ್ಲಿ ಈ ಘಟನೆ ಸಂಭವಿಸಿತ್ತು. ನಾಲ್ಕು ಟೆಸ್ಟ್‌ ಪಂದ್ಯಗಳು ಹೈದರಾಬಾದ್‌, ದೆಹಲಿ, ಮುಂಬೈ ಹಾಗೂ ಚೆನ್ನೈನಲ್ಲಿ ನಡೆದಿದ್ದವು.

ನಾಯಿ ಕಡಿತದಿಂದಾಗಿ ಎರಡು ವಾರಗಳ ಕಾಲ ಹೊಟ್ಟೆಯ ಭಾಗದಲ್ಲಿ ಇಂಜಕ್ಷನ್‌ ಚುಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಬೇಕಾಯಿತು.

‘ನಮ್ಮ ತಂದೆ 12 ದಿನಗಳ ಅವಧಿಯಲ್ಲಿ 12 ಚುಚ್ಚುಮದ್ದು ತೆಗೆದುಕೊಂಡಿದ್ದಿರಬೇಕು. ಆಗ ತಂಡದಲ್ಲಿ ವೈದ್ಯರು ಇರದ ಕಾರಣ ತಂಡದ ಕೆಲ ಆಟಗಾರರೂ ಇಂಜಕ್ಷನ್‌ ಕೊಡಲು ನೆರವಾಗಿದ್ದರು’ ಎಂದು ಅವರ ಪುತ್ರ ರಿಚರ್ಡ್‌ ತಿಳಿಸಿದ್ದಾರೆ.

‘ನಮ್ಮ ಇಡೀ ಕುಟುಂಬಕ್ಕೆ ಶ್ವಾನಗಳೆಂದರೆ ಪ್ರೀತಿ. ಬೆಂಗಳೂರಿನಲ್ಲಿ ಇದೇ ಭಾವದಿಂದ ನಾಯಿಯನ್ನು ಹಿಡಿದು ಒಯ್ಯುವ ಅದು ತಂದೆಗೆ ಕಚ್ಚಿದ್ದಿರಬೇಕು’ ಎಂದು ರಿಚರ್ಡ್‌ ಹೇಳಿದ್ದಾರೆ.

ಆಲ್‌ರೌಂಡರ್‌ ಆಗಿದ್ದ ಪೂರ್‌, 1953–56ರ ಅವಧಿಯಲ್ಲಿ 14 ಟೆಸ್ಟ್‌ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ ತಂಡವನ್ನು ಪ್ರತಿನಿಧಿಸಿದ್ದರು. ಆಗಿನ ಕಾಲದ ಅತ್ಯುತ್ತಮ ಆಟಗಾರರೆನಿಸಿದ್ದ ಬರ್ಟ್‌ ಸಟ್‌ಕ್ಲಿಫ್‌ ಮತ್ತು ಜಾನ್‌ ರೀಡ್‌ ಅವರ ಸಮಕಾಲೀನರಾಗಿದ್ದರು. 15.43ರ ಸರಾಸರಿಯಲ್ಲಿ 355 ರನ್‌ ಕಲೆಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT