ಶುಕ್ರವಾರ, ಜುಲೈ 30, 2021
28 °C
ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿ

ವೆಸ್ಟ್‌ ಇಂಡೀಸ್‌ ತಂಡದಲ್ಲಿ ಶಾನನ್‌ ಗೇಬ್ರಿಯಲ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್‌: ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅನುಭವಿ ವೇಗದ ಬೌಲರ್‌ ಶಾನನ್‌ ಗೇಬ್ರಿಯಲ್‌ ಅವರು ವೆಸ್ಟ್‌ ಇಂಡೀಸ್‌‌ ತಂಡಕ್ಕೆ ಮರಳಿದ್ದಾರೆ. ಇದೇ 8ರಿಂದ ಇಂಗ್ಲೆಂಡ್‌ ಎದುರು ನಡೆಯುವ ಟೆಸ್ಟ್‌ ಸರಣಿಗೆ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಗೇಬ್ರಿಯಲ್‌ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೆಸ್ಟ್‌ ಇಂಡೀಸ್‌ ತಂಡ ಇಂಗ್ಲೆಂಡ್‌ಗೆ ಬಂದಿಳಿದಾಗ ಗೇಬ್ರಿಯಲ್‌ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿದ್ದರು. ಆದರೆ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಫಿಟ್‌ನೆಸ್‌ ಸಾಬೀತುಪಡಿಸಿದ್ದರು. 

ತಂಡದ ನಾಯಕ ಜೇಸನ್‌ ಹೋಲ್ಡರ್‌, ಕೆಮರ್ ರೋಚ್‌, ಕೇಮರ್‌ ಹೋಲ್ಡರ್‌, ಅಲ್ಜರಿ ಜೋಸೆಫ್‌ ಹಾಗೂ ರೇಮನ್‌ ರೀಫರ್‌ ಅವರನ್ನೊಳಗೊಂಡ ವೇಗದ ಬೌಲಿಂಗ್ ವಿಭಾಗಕ್ಕೆ ಗೇಬ್ರಿಯಲ್‌ ಸಾಥ್‌ ನೀಡಲಿದ್ದಾರೆ.

ಅಭ್ಯಾಸ ಪಂದ್ಯಗಳ ಮೂರು ಇನಿಂಗ್ಸ್‌ಗಳಲ್ಲಿ ಗೇಬ್ರಿಯಲ್‌ ಅವರು 122 ರನ್‌ ನೀಡಿ ಎಂಟು ವಿಕೆಟ್‌ ಗಳಿಸಿದ್ದರು.

2012ರ ಮೇ ತಿಂಗಳಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿರುವ ಅವರು 45 ಟೆಸ್ಟ್‌ ಪಂದ್ಯಗಳನ್ನು ಆಡಿ 133 ವಿಕೆಟ್‌ ಗಳಿಸಿದ್ದಾರೆ.

ಆತಿಥೇಯ ತಂಡದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಬುಧವಾರ ಸೌತಾಂಪ್ಟನ್‌ನ ಏಜಿಸ್‌ ಬೌಲ್‌ನಲ್ಲಿ ಆರಂಭವಾಗಲಿದೆ. ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಈ ಪಂದ್ಯದ ಮೂಲಕ ಮರುಚಾಲನೆ ಸಿಗಲಿದೆ.

ವೆಸ್ಟ್‌ ಇಂಡೀಸ್‌ ತಂಡ: ಜೇಸನ್‌ ಹೋಲ್ಡರ್‌ (ನಾಯಕ), ಜರ್ಮೈನ್‌ ಬ್ಲ್ಯಾಕ್‌ವುಡ್‌, ಕ್ರೂಮಾ ಬಾನರ್‌, ಕ್ರೆಗ್ ಬ್ರಾಥ್‌ವೆಟ್‌, ಶೆಮ್ರಾ ಬ್ರೂಕ್ಸ್, ಜಾನ್ ಕ್ಯಾಂಪ್‌ಬೆಲ್, ರಾಸ್ಟನ್ ಚೇಸ್, ರಖೀಮ್ ಕಾರ್ನ್‌ವಾಲ್, ಶೇನ್ ಡೌರಿಚ್, ಶಾನನ್‌ ಗೇಬ್ರಿಯಲ್‌, ಕೇಮರ್‌ ಹೋಲ್ಡರ್‌, ಶಾಯಿ ಹೋಪ್, ಅಲ್ಜರಿ ಜೋಸೆಫ್, ರೇಮನ್ ರೀಫರ್ ಮತ್ತು ಕೆಮರ್ ರೋಚ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು