ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯ ಕೋಚ್ ಸ್ಥಾನ ದೇಶಸೇವೆಗೆ ದೊರೆತ ಗೌರವ: ಗಂಭೀರ್‌

Published 9 ಜುಲೈ 2024, 16:38 IST
Last Updated 9 ಜುಲೈ 2024, 16:38 IST
ಅಕ್ಷರ ಗಾತ್ರ

ನವದೆಹಲಿ: ಇದು ದೇಶ ಸೇವೆಗೆ ತಮಗೆ ದೊರೆತ ಅತಿ ದೊಡ್ಡ ಗೌರವ ಎಂದು ಭಾರತ ತಂಡದ ನೂತನ ಮುಖ್ಯ ಕೋಚ್‌ ಆಗಿ ಆಯ್ಕೆಯಾದ ಗೌತಮ್‌ ಗಂಭೀರ್ ಹೇಳಿದರು.

ತಂಡ ಉತ್ತಮ ಫಲಿತಾಂಶ ನೀಡಲು ತಮ್ಮಿಂದಾದ ಎಲ್ಲವನ್ನೂ ಮಾಡುವುದಾಗಿ ಅವರು ಹೇಳಿದರು. ‘ಭಾರತ ನನ್ನ ಅಸ್ಮಿತೆ. ದೇಶದ ಸೇವೆ ನನಗೆ ದೊರೆತ ಅತಿ ದೊಡ್ಡ ಅವಕಾಶ. ಪಾತ್ರ ಬೇರೆ ಇರಬಹುದು. ಆದರೆ ಎಂದಿಗೂ ನನ್ನ ಗುರಿ ಒಂದೇ. ದೇಶ ಹೆಮ್ಮೆ ಪಡುವಂತೆ ಮಾಡುವುದು’ ಎಂದು ಗಂಭೀರ್ ‘ಎಕ್ಸ್‌’ನಲ್ಲಿ ಬರೆದಿದ್ದಾರೆ. ‘ಕ್ರಿಕೆಟ್‌ ನನ್ನ ಪ್ಯಾಷನ್‌. ಬಿಸಿಸಿಐ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ವಿವಿಎಸ್‌ ಲಕ್ಷ್ಮಣ್ ನೆರವು ಸಿಬ್ಬಂದಿ ಎಲ್ಲಕ್ಕಿಂತ ಮುಖ್ಯವಾಗಿ ಆಟಗಾರರ ಜೊತೆಯಾಗಿ ಕೆಲಸ ಮಾಡಲು ಎದುರುನೋಡುತ್ತಿದ್ದೇನೆ. ಮುಂಬರುವ ಟೂರ್ನಿಗಳಲ್ಲಿ ಯಶಸ್ಸಿಗಾಗಿ ಒಟ್ಟಾಗಿ ಶ್ರಮವಹಿಸುತ್ತೇವೆ’ ಎಂದು ಬಿಸಿಸಿಐ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT