ಗುರುವಾರ , ಫೆಬ್ರವರಿ 25, 2021
29 °C
ಮೊದಲ ಇನಿಂಗ್ಸ್‌ನಲ್ಲಿ ಎಳು ರನ್‌ಗಳ ಹಿನ್ನಡೆ ಅನುಭವಿಸಿದ ವೆಸ್ಟ್‌ ಇಂಡೀಸ್ ’ಎ’

ಗೌತಮ್‌ಗೆ ಆರು ವಿಕೆಟ್ ಭಾರತ ‘ಎ’ ಅಲ್ಪ ಮುನ್ನಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತರೋಬಾ, ವೆಸ್ಟ್ ಇಂಡೀಸ್ (ಪಿಟಿಐ): ಕನ್ನಡಿಗ ಕೃಷ್ಣಪ್ಪ ಗೌತಮ್ ಅವರ ಸ್ಪಿನ್ ಮೋಡಿಯಿಂದಾಗಿ ವೆಸ್ಟ್ ಇಂಡೀಸ್ ‘ಎ’ ತಂಡಕ್ಕೆ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ. ಆದರೆ ಭಾರತ ‘ಎ’ ತಂಡವು ಏಳು ರನ್‌ ಗಳ ಪುಟ್ಟ ಮುನ್ನಡೆ ಗಳಿಸಿತು.

ಜೆಮರ್ ಹ್ಯಾಮಿಲ್ಟನ್ ನಾಯಕತ್ವದ ಆತಿಥೇಯ ಬಳಗವು ಏಳು ರನ್‌ಗಳ ಅತ್ಯಲ್ಪ ಮೊತ್ತದ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್‌ ಆರಂಭದಲ್ಲಿಯೇ  ಭಾರತ ‘ಎ’ ತಂಡವು ಆಘಾತ ಅನುಭವಿಸಿತು. ದಿನದಾಟದ ಅಂತ್ಯಕ್ಕೆ 9 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 23 ರನ್‌ ಗಳಿಸಿತು.

ಚೇಮರ್ ರೋಚ್ ಅವರ ದಾಳಿಗೆ ಆರಂಭಿಕ ಆಟಗಾರರಾದ ಪ್ರಿಯಾಂಕ್ ಪಾಂಚಾಲ್ ಮತ್ತು ಅಭಿಮನ್ಯು ಈಶ್ವರನ್ ಪೆವಿಲಿಯನ್ ದಾರಿ ಹಿಡಿದರು. ಮಯಂಕ್ ಅಗರವಾಲ್ ಕೂಡ ಕೇವಲ ಐದು ರನ್‌ ಗಳಿಸಿ ಮಿಗೆಲ್ ಕಮಿನ್ಸ್‌ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಇದರಿಂದಾಗಿ ತಂಡವು ಸಂಕಷ್ಟಕ್ಕೀಡಾಗಿದೆ.

ಭಾರತ ‘ಎ’ ತಂಡವು ಮೊದಲ ಇನಿಂಗ್ಸ್‌ನಲ್ಲಿ 201 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ವಿಂಡೀಸ್ ಬಳಗವನ್ನು ಆಫ್‌ಸ್ಪಿನ್ನರ್ ಕೆ.ಗೌತಮ್ ಅವರು 194 ರನ್‌ಗಳಿಗೆ ಕಟ್ಟಿಹಾಕಿದರು. ಆರಂಭಿಕ ಬ್ಯಾಟ್ಸ್‌ಮನ್ ಮಾಂಟ್ಸಿನ್ ಅವರನ್ನು ಕ್ಲೀನ್‌ಬೌಲ್ಡ್‌ ಮಾಡಿದ ಗೌತಮ್ ತಮ್ಮ ಖಾತೆ ತೆರೆದರು.

ಆದರೆ ಇನ್ನೊಂದು ಬದಿಯಲ್ಲಿದ್ದ ಜೆರೆಮಿ ಸೊಲೊಜಾನೊ (ಔಟಾಗದೆ 69; 207ಎಸೆತ, 7ಬೌಂಡರಿ)  ಅಪಾರ ತಾಳ್ಮೆಯಿಂದ ಆಡಿದರು. ಆದರೆ, ಹೊಸದಾಗಿ ಕ್ರೀಸ್‌ಗೆ ಬರುವ ಬ್ಯಾಟ್ಸ್‌ಮನ್‌ಗಳನ್ನು ಕಾಲೂರದಂತೆ ನೋಡಿಕೊಳ್ಳುವಲ್ಲಿ ಭಾರತ ಎ  ಬೌಲಿಂಗ್ ಪಡೆ ಯಶಸ್ವಿಯಾಯಿತು. ಮಧ್ಯಮವೇಗಿ ಉಮೇಶ್ ಯಾದವ್ ಅಕಿಂ ಫ್ರೇಜರ್ ಮತ್ತು ಬ್ರೆಂಡನ್ ಕಿಂಗ್ ಅವರಿಗೆ ಪೆವಿಲಿಯನ್‌ ದಾರಿ ತೋರಿದರು. ಸೊಲೊಜಾನೊ ಜೊತೆಗೆ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದ ಸುನಿಲ್ ಆ್ಯಂಬ್ರಿಸ್ (43; 63ಎಸೆತ) ಅವರ ವಿಕೆಟ್‌ ಅನ್ನು ಶಿವಂ ದುಬೆ ಕಬಳಿಸಿದರು.

ನಂತರ ಮಧ್ಯಮ ಮತ್ತು ಕೆಳಕ್ರಮಾಂಕದ ಬ್ಯಾಟಿಂಗ್‌  ಪಡೆಯನ್ನು ಗೌತಮ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಅವರು ಬ್ಲ್ಯಾಕ್‌ವುಡ್, ರೇಮನ್ ರೀಫರ್, ಚೇಮರ್ ಹೋಲ್ಡರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮಿಗೆಲ್ ಕಮಿನ್ಸ್‌ ಎಲ್‌ಬಿಡಬ್ಲ್ಯು ಆದರು.

 ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಭಾರತ ‘ಎ’: 201. ವೆಸ್ಟ್ ಇಂಡೀಸ್ ‘ಎ’: 194 (ಜೆರೆಮಿ ಸೊಲೊಜಾನೊ ಔಟಾಗದೆ 69, ಸುನಿಲ್ ಆ್ಯಂಬ್ರಿಸ್ 43, ಕೃಷ್ಣಪ್ಪ ಗೌತಮ್ 67ಕ್ಕೆ6) ಎರಡನೇ ಇನಿಂಗ್ಸ್: ಭಾರತ ಎ: 9 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 23 (ಪ್ರಿಯಾಂಕ್ ಪಾಂಚಾಲ್ 3, ಅಭಿಮನ್ಯು ಈಶ್ವರನ್ 6, ಮಯಂಕ್ ಅಗರವಾಲ್ 5, ಶುಭಮನ್ ಗಿಲ್ ಬ್ಯಾಟಿಂಗ್ 5, ಶೆಹಜಾದ್ ನದೀಂ ಬ್ಯಾಟಿಂಗ್ 2, ಚೆಮರ್ ಹೋಲ್ಡರ್ 14ಕ್ಕೆ2, ಮಿಗೆಲ್ ಕಮಿನ್ಸ್ 7ಕ್ಕೆ1) 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು