ಪ್ರಶಸ್ತಿಗಾಗಿ ಗುಜರಾತ್‌–ಉತ್ತರ ಪ್ರದೇಶ ಪೈಪೋಟಿ

7
ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿ

ಪ್ರಶಸ್ತಿಗಾಗಿ ಗುಜರಾತ್‌–ಉತ್ತರ ಪ್ರದೇಶ ಪೈಪೋಟಿ

Published:
Updated:

ಬೆಂಗಳೂರು: ಗುಜರಾತ್‌ ಮತ್ತು ಉತ್ತರ ಪ್ರದೇಶ ಸಂಸ್ಥೆ ತಂಡಗಳು ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಆಲೂರಿನ ಮೂರನೆ ಮೈದಾನದಲ್ಲಿ ಬುಧವಾರ ಮುಕ್ತಾಯವಾದ ಛತ್ತೀಸಗಡ ಕ್ರಿಕೆಟ್‌ ಸಂಘ ಎದುರಿನ ಎರಡನೆ ಸೆಮಿಫೈನಲ್‌ನಲ್ಲಿ ಗುಜರಾತ್‌ ತಂಡ ಇನಿಂಗ್ಸ್‌ ಮುನ್ನಡೆ ಪಡೆದು ಫೈನಲ್‌ಗೆ ಲಗ್ಗೆ ಇಟ್ಟಿತು. ಮೊದಲ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ತಂಡ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ಎದುರು ಗೆದ್ದಿತ್ತು.

5 ವಿಕೆಟ್‌ಗೆ 158ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ನ ಆಟ ಮುಂದುವರಿಸಿದ ಛತ್ತೀಸಗಡ ತಂಡ 66 ಓವರ್‌ಗಳಲ್ಲಿ 7 ವಿಕೆಟ್‌ಗೆ 251ರನ್‌ ಗಳಿಸಿತು. ಈ ವೇಳೆ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಛತ್ತೀಸಗಡ ತಂಡದ ವಿಶಾಲ್‌ ಖುಸ್ವಾಸ್‌ ಅಜೇಯ ಶತಕ ಸಿಡಿಸಿ ಗಮನ ಸೆಳೆದರು. 96 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಮತ್ತು 8 ಸಿಕ್ಸರ್‌ ಸಹಿತ 102ರನ್‌ ಬಾರಿಸಿದರು.

ಗುಜರಾತ್‌ ತಂಡದ ಕರಣ್‌ ಪಟೇಲ್‌ ಐದು ವಿಕೆಟ್‌ ಉರುಳಿಸಿದರು.

ಫೈನಲ್‌ ಹೋರಾಟ ಆಗಸ್ಟ್‌ 10ರಿಂದ 13ರವರೆಗೆ ಆಲೂರಿನ ಎರಡನೆ ಮೈದಾನದಲ್ಲಿ ಜರುಗಲಿದೆ.

ಸಂಕ್ಷಿಪ್ತ ಸ್ಕೋರ್‌: ಛತ್ತೀಸಗಡ ಕ್ರಿಕೆಟ್‌ ಸಂಘ: ಮೊದಲ ಇನಿಂಗ್ಸ್‌, 70.1 ಓವರ್‌ಗಳಲ್ಲಿ 241 ಮತ್ತು ಎರಡನೆ ಇನಿಂಗ್ಸ್‌: 66 ಓವರ್‌ಗಳಲ್ಲಿ 7 ವಿಕೆಟ್‌ಗೆ 251 (ವಿಕ್ರಾಂತ್‌ ಸಿಂಗ್‌ ರಜಪೂತ್‌ 40, ಅಜಯ್‌ ಮಂಡಲ್‌ 26, ಅಮನ್‌ದೀಪ್‌ ಖರೆ 29, ಮನೋಜ್‌ ಸಿಂಗ್‌ 24, ವಿಶಾಲ್‌ ಖುಸ್ವಾಸ್‌ ಔಟಾಗದೆ 102; ಕರಣ್‌ ಪಟೇಲ್‌ 95ಕ್ಕೆ5).

ಗುಜರಾತ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌, 150 ಓವರ್‌ಗಳಲ್ಲಿ 527.

ಫಲಿತಾಂಶ: ಡ್ರಾ. ಇನಿಂಗ್ಸ್‌ ಮುನ್ನಡೆ ಗಳಿಸಿದ ಗುಜರಾತ್‌ ಫೈನಲ್‌ಗೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !