ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಲಂಕಾ ಕ್ರಿಕೆಟಿಗ ಧನುಷ್ಕಗೆ ಷರತ್ತುಬದ್ಧ ಜಾಮೀನು

Last Updated 17 ನವೆಂಬರ್ 2022, 9:40 IST
ಅಕ್ಷರ ಗಾತ್ರ

ಸಿಡ್ನಿ: ಟಿ–20 ವಿಶ್ವಕಪ್ ಟೂರ್ನಿ ಸಂದರ್ಭ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಶ್ರೀಲಂಕಾ ಕ್ರಿಕೆಟಿಗ ಧನುಷ್ಕ ಗುಣತಿಲಕ ಅವರಿಗೆ ಜಾಮೀನು ದೊರೆತಿದೆ. ಆದರೆ, ಸಾಮಾಜಿಕ ಮಾಧ್ಯಮಗಳನ್ನು ಬಳಸದಂತೆ ನಿರ್ಬಂಧ ಹೇರಲಾಗಿದೆ.

ಇಎಸ್‌‍ಪಿಎನ್‌ ಕ್ರಿಕ್ ಇನ್ಫೋ ವರದಿ ಪ್ರಕಾರ, ಅಮಾನತುಗೊಂಡಿರುವ ಶ್ರೀಲಂಕಾ ಬ್ಯಾಟರ್ ಪರ್ಕ್ಲಿಯಾ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸಿಡ್ನಿಯ ಡೌನಿಂಗ್ ಸೆಂಟರ್ ಕೋರ್ಟ್ ವಿಚಾರಣೆಗೆ ಹಾಜರಾದರು.

ನವೆಂಬರ್ 2ರಂದು ಡೇಟಿಂಗ್‌ಗೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ನವೆಂಬರ್ 6ರಂದು ಬೆಳಗಿನ ಜಾವ ಸಿಡ್ನಿ ಹೋಟೆಲ್‌ನಲ್ಲಿ ಅವರನ್ನು ಬಂಧಿಸಲಾಗಿತ್ತು.

‘ಸಿಡ್ನಿಯ ಡೌನಿಂಗ್ ಸೆಂಟರ್‌ನ ನ್ಯಾಯಾಧೀಶ ಜನೆತ್, ಪರ್ಕ್ಲಿಯಾ ಜೈಲಿನಿಂದ ವಿಡಿಯೊ ಮೂಲಕ ಹಾಜರಾದ ಗುಣತಿಲಕ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ’ ಎಂದು ವರದಿ ತಿಳಿಸಿದೆ.

‘ತನಿಖಾಧಿಕಾರಿ ಕೆರಿ ಅನ್ ಮ್ಯಾಕ್‌ಕಿನೊನ್ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದರು. ಸಂತ್ರಸ್ತೆಗೆ ಆರೋಪಿಯಿಂದ ಅಪಾಯ ಎದುರಾಗಬಹುದು ಮತ್ತು ಅವರು ದೇಶಬಿಟ್ಟು ತೆರಳಬಹುದು’ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಹಿಳೆಯ ಒ‍ಪ್ಪಿಗೆ ಇಲ್ಲದೆ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಗುಣತಿಲಕ ಮೇಲಿದೆ.

ಸಾಮಾಜಿಕ ಮಾಧ್ಯಮ, ಡೇಟಿಂಗ್ ಆ್ಯಪ್‌ಗಳ ಬಳಕೆ ನಿಷೇಧ, 1,00,620 ಅಮೆರಿಕನ್ ಡಾಲರ್ ಶೂರಿಟಿ, ಕೋರ್ಟ್ ಸುಪರ್ದಿಗೆ ಪಾಸ್‌ಪೋರ್ಟ್, ದಿನಕ್ಕೆ ಎರಡು ಬಾರಿ ಪೊಲೀಸರಿಗೆ ರಿಪೋರ್ಟ್ ಮಾಡಬೇಕು, ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಹೊರಗಡೆ ಸಂಚರಿಸುವಂತಿಲ್ಲ ಮತ್ತು ಸಂತ್ರಸ್ತೆಯನ್ನು ಸಂಪರ್ಕಿಸದಂತೆ ಜಾಮೀನಿಗೆ ಷರತ್ತು ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT