ಬೆಂಗಳೂರು: ‘ಶ್ರೀಪತಿ ಕಂಚನಾಳೆ ಅವರೆಂದರೆ ಅಪರೂಪದ ಕುಸ್ತಿಪಟು. ಅಜಾನುಬಾಹು ವ್ಯಕ್ತಿ. ತಿಂಗಳಿಗೆ ಸುಮಾರು 45 ಕೆ.ಜಿ ತುಪ್ಪ ತಿಂದು ಜೀರ್ಣಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ ನಾಲ್ಕು ತಾಸು ಹಾಗೂ ಸಂಜೆ ಮೂರ್ನಾಲ್ಕು ತಾಸು ವ್ಯಾಯಾಮ ಮಾಡುತ್ತಿದ್ದರು’

ಸೋಮವಾರ ನಿಧನರಾದ ಮಾಜಿ ಕುಸ್ತಿಪಟು ಶ್ರೀಪತಿ ಕಂಚನಾಳೆ ಅವರ ಬಗ್ಗೆ ಬೆಳಗಾವಿಯಲ್ಲಿರುವ ಪೈಲ್ವಾನ್ ರತನಕುಮಾರ ಮಠಪತಿ ಅವರ ನುಡಿ ಗಳಿವು.

‘ಶ್ರೀಪತಿಯವರು ನಮ್ಮ ತಂದೆಯ ವಯಸ್ಸಿನವರು. ನಮಗೆಲ್ಲ ಬಹಳ ಆತ್ಮೀಯವಾಗಿದ್ದವರು. ಬೆಳಗಾವಿಯ ಯಕ್ಸಂಬಾದಲ್ಲಿ ಜನಿಸಿ, ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ಬೆಳೆದವರು. 1959ರಲ್ಲಿ ಹಿಂದ್ ಕೇಸರಿ ಪ್ರಶಸ್ತಿಯನ್ನು ಗೆದ್ದವರು. ರಾಷ್ಟ್ರೀಯ, ಅಂತರರಾಷ್ಟ್ರೀಯ ಕುಸ್ತಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದವರು. ಬಹಳಷ್ಟು ಯುವಕರಿಗೆ ಸ್ಫೂರ್ತಿಯಾದವರು‘ ಎಂದು ಮಠಪತಿ ನೆನಪಿಸಿಕೊಂಡರು

’ಅವರು ಅಖಾಡದಲ್ಲಿ ತಾಲೀಮು ಮಾಡುವುದನ್ನು ನೋಡುವದೇ ರೋಮಾಂಚನ. 130 ಕೆ.ಜಿ. ದೇಹತೂಕ ಅವರದ್ದು. ನಾವೆಲ್ಲ ಯುವ ಪೈಲ್ವಾನರಾಗಿದ್ದಾಗ 25–26 ಕೆಜಿ ತುಪ್ಪವನ್ನು ಪ್ರತಿ ತಿಂಗಳು ಸೇವಿಸಿ, ವ್ಯಾಯಾಮ ಮಾಡುತ್ತಿದ್ದೆವು. ಆದರೆ, ಅವರು ಮಾತ್ರ 45 ಕೆ.ಜಿ. ತುಪ್ಪವನ್ನು ಕರಗಿಸುತ್ತಿದ್ದರು. ಬಹಳ ಶಿಸ್ತಿನ ಪೈಲ್ವಾನರಾಗಿದ್ದರು‘ ಎಂದು ಹೇಳಿದರು.

’ಕೋಲ್ಹಾಪುರದ ಹವಾಗುಣವು ಕುಸ್ತಿಪಟುಗಳ ಬೆಳವಣಿಗೆಗೆ ಪೂರ ಕವಾಗಿದೆ. ಈಗಲೂ ಹರಿಯಾಣ ಮತ್ತು ಪಂಜಾಬ್ನಲ್ಲಿ ಬೇಸಿಗೆ ಕಾಲದಲ್ಲಿ ವಿಪರೀತ ತಾಪಮಾನವಿದ್ದಾಗ. ಅ ಲ್ಲಿಯ ಪೈಲ್ವಾನರು ಬರುವುದೇ ಕೋಲ್ಹಾ ಪುರಕ್ಕೆ. ಶ್ರೀಪತಿಯವರು ಸೇರಿದಂತೆ ಕರ್ನಾಟಕದ ಹಲವು ಕುಸ್ತಿಪಟುಗಳು ಕೋಲ್ಹಾಪುರದಲ್ಲಿ ತರಬೇತಿ ಪಡೆದಿದ್ದಾರೆ‘ ಎಂದು ಮಠಪತಿ ಹೇಳಿದರು.

1959ರಲ್ಲಿ ಶ್ರೀಪತಿ ಅವರು ರುಸ್ತುಂ ಎ ಪಂಜಾಬ್ ಬಟ್ಟಾಸಿಂಗ್ ಅವರನ್ನು ದೆಹಲಿಯ ನ್ಯೂ ರೈಲ್ವೆ ಕ್ರೀಡಾಂಗಣದಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಸಿದ್ದರು. ದೇಶದ ಪ್ರತಿಷ್ಠಿತ ಹಿಂದ್ ಕೇಸರಿ ಪ್ರಶಸ್ತಿ ಗೆದ್ದಿದ್ದರು.

ಹಿಂದ್ ಕೇಸರಿ ಶ್ರೀಪತಿ ನಿಧನ
ಪುಣೆ (ಪಿಟಿಐ): ಬೆಳಗಾವಿ ಮೂಲದ ಪೈಲ್ವಾನ್ ಶ್ರೀಪತಿ ಕಂಚನಾಳ್ (86) ಕೋಲ್ಹಾಪುರದ ಆಸ್ಪತ್ರೆಯೊಂದರಲ್ಲಿ ಸೋಮವಾರ ನಿಧನರಾದರು.

ಪ್ರತಿಷ್ಠಿತ ಹಿಂದ್ ಕೇಸರಿ ಪ್ರಶಸ್ತಿ ವಿಜೇತರಾಗಿದ್ದರು. ಅವರು ಕುಸ್ತಿ ಕಲಿಕೆ ಮತ್ತು ವೃತ್ತಿಗಾಗಿ ಕೋಲ್ಹಾಪುರದ ನೆಲೆಸಿದ್ದರು.

’ನನ್ನ ತಂದೆಗೆ ಕೆಲವು ಕಾಲದಿಂದ ಅನಾರೋಗ್ಯವಿತ್ತು. ಕೋಲ್ಹಾಪುರದ ಡೈಮಂಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ‘ ಎಂದು ರೋಹಿತ್ ಕಂಚನಾಳ ತಿಳಿಸಿದ್ದಾರೆ.

1959ರಲ್ಲಿ ಶ್ರೀಪತಿ ಅವರು ರುಸ್ತುಂ ಎ ಪಂಜಾಬ್ ಬಟ್ಟಾಸಿಂಗ್ ಅವರನ್ನು ದೆಹಲಿಯ ನ್ಯೂ ರೈಲ್ವೆ ಕ್ರೀಡಾಂಗಣದಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯಲ್ಲಿ ಸೋಲಿಸಿದ್ದರು. ದೇಶದ ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಂದ್ ಕೇಸರಿಯನ್ನು ಗೆದ್ದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.