ಬ್ಯಾಸ್ಕೆಟ್‌ಬಾಲ್‌: ನ್ಯೂ ಹೊರೈಜನ್‌ಗೆ ಜಯ

7

ಬ್ಯಾಸ್ಕೆಟ್‌ಬಾಲ್‌: ನ್ಯೂ ಹೊರೈಜನ್‌ಗೆ ಜಯ

Published:
Updated:

ಬೆಂಗಳೂರು: ನ್ಯೂ ಹೊರೈಜನ್‌ ಪಬ್ಲಿಕ್‌ ಶಾಲೆಯ ‘ಎ’ ತಂಡದವರು ನ್ಯೂ ಹೊರೈಜನ್‌ ಕಪ್‌ಗಾಗಿ ನಡೆಯುತ್ತಿರುವ ರಾಜ್ಯಮಟ್ಟದ ಅಂತರ ಶಾಲಾ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದ್ದಾರೆ.

12 ವರ್ಷದೊಳಗಿನ ಬಾಲಕರ ವಿಭಾಗದ ಪಂದ್ಯದಲ್ಲಿ ಹೊರೈಜನ್‌ ಶಾಲೆ 41–4ರಿಂದ ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆ ಎದುರು ಗೆದ್ದಿತು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಕ್ರೈಸ್ಟ್‌ ಅಕಾಡೆಮಿ 24–14ರಲ್ಲಿ ದೆಹಲಿ ಪಬ್ಲಿಕ್‌ ಶಾಲೆ ಎದುರೂ, ನ್ಯೂ ಹೊರೈಜನ್‌ ‘ಬಿ’ ತಂಡ 6–2ರಲ್ಲಿ ಕೆ.ಎಲ್‌.ಇ ವಿರುದ್ಧವೂ, ಹೆಡ್‌ಸ್ಟಾರ್ಟ್‌ ಅಕಾಡೆಮಿ 23–9ರಲ್ಲಿ ನ್ಯಾಷನಲ್‌ ಪಬ್ಲಿಕ್‌ ಶಾಲೆ ಮೇಲೂ, ಬಿ.ಜಿ.ಎಸ್‌. ನ್ಯಾಷನಲ್‌ ಪಬ್ಲಿಕ್‌ ಶಾಲೆ 10–4ರಲ್ಲಿ ಸೌಂದರ್ಯ ಶಾಲೆ ಎದುರೂ, ನ್ಯೂ ಹೊರೈಜನ್‌ ‘ಸಿ’ ತಂಡ 10–3ರಲ್ಲಿ ನ್ಯಾಷನಲ್‌ ಪಬ್ಲಿಕ್‌ ಶಾಲೆ ಮೇಲೂ, ಕ್ರೈಸಲಿಸ್‌ ಹೈ 10–2ರಲ್ಲಿ ನ್ಯೂ ಹೊರೈಜನ್‌ ‘ಡಿ’ ಎದುರೂ, ಸೇಂಟ್‌ ಜೋಸೆಫ್ಸ್‌ ತಂಡ 11–9ರಲ್ಲಿ ಅಮರ್‌ ಜ್ಯೋತಿ ವಿರುದ್ಧವೂ ವಿಜಯಿಯಾದವು.

ಬಾಲಕಿಯರ ವಿಭಾಗದಲ್ಲಿ ವಿಬ್ಗಯಾರ್‌ 8–5ರಲ್ಲಿ ನ್ಯೂ ಹೊರೈಜನ್‌ ‘ಎ’ ಎದುರೂ, ನ್ಯಾಷನಲ್‌ ಪಬ್ಲಿಕ್‌ ಶಾಲೆ 13–7ರಲ್ಲಿ ದೆಹಲಿ ಪಬ್ಲಿಕ್‌ ಶಾಲೆ ಮೇಲೂ, ಮಲ್ಯ ಅದಿತಿ ಶಾಲೆ 22–9ರಲ್ಲಿ ದೆಹಲಿ ಪಬ್ಲಿಕ್‌ ಶಾಲೆ ವಿರುದ್ಧವೂ, ಕ್ರೈಸಲಿಸ್‌ ಹೈ 10–0 ಕೆ.ಎಲ್‌.ಇ ಎದುರೂ, ಹೆಡ್‌ ಸ್ಟಾರ್ಟ್‌ ಅಕಾಡೆಮಿ 12–0ರಲ್ಲಿ ಚಿನ್ಮಯ ಶಾಲೆ ಮೇಲೂ, ವಿಬ್ಗಯಾರ್‌ (ಎಲೆಕ್ಟ್ರಾನಿಕ್‌ ಸಿಟಿ) 23–3ರಲ್ಲಿ ನ್ಯೂ ಹೊರೈಜನ್‌ ಗುರುಕುಲ್‌ ಎದುರೂ, ಸೌಂದರ್ಯ ಶಾಲೆ 7–0ರಲ್ಲಿ ನ್ಯಾಷನಲ್‌ ಪಬ್ಲಿಕ್‌ ಶಾಲೆ ಮೇಲೂ, ಸೇಕ್ರೆಡ್‌ ಹಾರ್ಟ್ಸ್‌ ಶಾಲೆ 22–1ರಲ್ಲಿ ನ್ಯೂ ಹೊರೈಜನ್‌ ‘ಬಿ’ ತಂಡದ ಮೇಲೂ ಗೆದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !