ಶುಭಾರಂಭದ ನಿರೀಕ್ಷೆಯಲ್ಲಿ ಮನೀಷ್‌ ಪಡೆ

7

ಶುಭಾರಂಭದ ನಿರೀಕ್ಷೆಯಲ್ಲಿ ಮನೀಷ್‌ ಪಡೆ

Published:
Updated:
Deccan Herald

ವಿಜಯವಾಡ: ಮನೀಷ್‌ ಪಾಂಡೆ ಸಾರಥ್ಯದ ಭಾರತ ‘ಬಿ’ ತಂಡ ಚತುಷ್ಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಶುಕ್ರವಾರ ನಡೆಯುವ ತನ್ನ ಮೊದಲ ಹಣಾಹಣಿಯಲ್ಲಿ ಮನೀಷ್‌ ಬಳಗ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಸೆಣಸಲಿದೆ.

ಭಾರತ ‘ಬಿ’ ತಂಡದಲ್ಲಿ ಕರ್ನಾಟಕದ ಮನೀಷ್‌, ಮಯಂಕ್‌ ಅಗರವಾಲ್‌, ಶ್ರೇಯಸ್‌ ಗೋಪಾಲ್‌ ಮತ್ತು ಪ್ರಸಿದ್ಧ ಎಂ ಕೃಷ್ಣ ಆಡಲಿದ್ದಾರೆ.

ರಿಕಿ ಭುಯಿ, ಅಭಿಮನ್ಯು ಈಶ್ವರನ್‌, ದೀಪಕ್‌ ಹೂಡಾ, ಇಶಾನ್‌ ಕಿಶನ್‌ ಮತ್ತು ಸಿದ್ದಾರ್ಥ್‌ ಕೌಲ್‌ ಅವರೂ ಈ ತಂಡದ ಶಕ್ತಿಯಾಗಿದ್ದಾರೆ.

ಖಾಯಾ ಜೊಂಡೊ ಸಾರಥ್ಯದ ದಕ್ಷಿಣ ಆಫ್ರಿಕಾ ‘ಎ’ ಕೂಡಾ ಗೆಲುವಿನ ಹುಮ್ಮಸ್ಸಿನಲ್ಲಿದೆ. ತೆಂಬಾ ಬವುಮಾ, ಫರ್ಹಾನ್‌ ಬೆಹಾರ್ಡೀನ್‌, ತೆವುನಿಶ್‌ ಡಿ ಬ್ರ್ಯೂನ್‌ ಮತ್ತು ಪೀಟರ್‌ ಮಲಾನ್‌ ಅವರಂತಹ ಪ್ರತಿಭಾನ್ವಿತರು ಈ ತಂಡದಲ್ಲಿದ್ದಾರೆ.

ಇಂಡಿಯಾ ‘ಎ’ಗೆ ಆಸ್ಟ್ರೇಲಿಯಾ ಸವಾಲು: ಮುಲಾಪಾಡಿನ ದೇವಿನೇನಿ ವೆಂಕಟರಮಣ ಪ್ರಣೀತಾ ಮೈದಾನದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಭಾರತ ‘ಎ’ ತಂಡ ಆಸ್ಟ್ರೇಲಿಯಾ ‘ಎ’ ಸವಾಲು ಎದುರಿಸಲಿದೆ.

ಶ್ರೇಯಸ್‌ ಅಯ್ಯರ್‌ ಸಾರಥ್ಯದ ಭಾರತ ‘ಎ’ ತಂಡದಲ್ಲಿ  ಕರ್ನಾಟಕದ ಕೆ.ಗೌತಮ್‌ ಮತ್ತು ಆರ್‌.ಸಮರ್ಥ್‌, ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಹನುಮವಿಹಾರಿ ಹಾಗೂ ಕೃಣಾಲ್‌ ಪಾಂಡ್ಯ ಅವರು ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !