IND v AUS 4th Test: ಸುಂದರ್, ಠಾಕೂರ್ ಅಬ್ಬರ: ಆಸ್ಟ್ರೇಲಿಯಾ 369ಕ್ಕೆ ಆಲೌಟ್

ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 369 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.
ನಿನ್ನೆ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದ್ದ ಆಸ್ಟ್ರೇಲಿಯಾ, ಇಂದು ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಬಳಿಕ, ಮೊದಲ ಟೆಸ್ಟ್ ಆಡುತ್ತಿರುವ ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿದ ಕಾಂಗರೂ ಬ್ಯಾಟಿಂಗ್ ಪಡೆ ಧೂಳೀಪಟವಾಯಿತು.
ನಾಯಕ ಟಿಮ್ ಪೇನ್ ಗಟ್ಟಿಯಾಗಿ ನಿಂತು 104 ಎಸೆತಗಳಲ್ಲಿ 50 ರನ್ ಗಳಿಸಿದರು, ಕೆಮರೂನ್ ಗ್ರೀನ್ 47, ಅಂತ್ಯದಲ್ಲಿ ಅಬ್ಬರಿಸಿದ ನಥನ್ ಲಯೋನ್ 22, ಸ್ಟಾರ್ಕ್ 22 ರನ್ ಗಳಿಸಿದ್ದು, ಇಂದಿನ ಬ್ಯಟಿಂಗ್ ಹೈಲೆಟ್.
ಅನನುಭವಿ ಬೌಲಿಂಗ್ ಪಡೆ ಜೊತೆಗೆ ಮೈದಾನಕ್ಕಿಳಿದಿದ್ದ ಭಾರತ ಉತ್ತಮ ಪ್ರದರ್ಶನ ನೀಡಿತು. ಮೊದಲ ಪಂದ್ಯ ಆಡುತ್ತಿರುವ ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್ ತಲಾ 3 ವಿಕೆಟ್ ಪಡೆದರೆ, ಟಿ ನಟರಾಜನ್ 3 ವಿಕೆಟ್ ಪಡೆದಿದ್ದಾರೆ.
ಭೋಜನ ವಿರಾಮದ ಬಳಿಕ ಭಾರತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.