19 ವರ್ಷದೊಳಗಿನವರ ಏಷ್ಯಾಕಪ್‌ ಕ್ರಿಕೆಟ್‌: ಸಿದ್ದಾರ್ಥ್‌, ಹರ್ಷ ಬಿಗುವಿನ ಬೌಲಿಂಗ್

7
ಭಾರತದ ಗೆಲುವಿನ ‘ಹ್ಯಾಟ್ರಿಕ್‌’

19 ವರ್ಷದೊಳಗಿನವರ ಏಷ್ಯಾಕಪ್‌ ಕ್ರಿಕೆಟ್‌: ಸಿದ್ದಾರ್ಥ್‌, ಹರ್ಷ ಬಿಗುವಿನ ಬೌಲಿಂಗ್

Published:
Updated:

ಸವರ್‌, ಬಾಂಗ್ಲಾದೇಶ: ಸಿದ್ದಾರ್ಥ್‌ ದೇಸಾಯಿ (37ಕ್ಕೆ4) ಮತ್ತು ಹರ್ಷ ತ್ಯಾಗಿ (40ಕ್ಕೆ3) ಅವರ ಬಿಗುವಿನ ಬೌಲಿಂಗ್‌ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 51ರನ್‌ಗಳಿಂದ ಅಫ್ಗಾನಿಸ್ತಾನವನ್ನು ಮಣಿಸಿದೆ.

ಇದರೊಂದಿಗೆ ಟೂರ್ನಿಯಲ್ಲಿ ಗೆಲುವಿನ ‘ಹ್ಯಾಟ್ರಿಕ್‌’ ಸಾಧನೆ ಮಾಡಿದೆ. ‘ಎ’ ಗುಂಪಿನ ಮೊದಲ ಎರಡು ಪಂದ್ಯಗಳಲ್ಲಿ ಪವನ್‌ ಶಾ ಪಡೆ ನೇಪಾಳ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ತಂಡಗಳನ್ನು ಸೋಲಿಸಿತ್ತು.

ಮಂಗಳವಾರ ಮೊದಲು ಬ್ಯಾಟ್‌ ಮಾಡಿದ ಪವನ್‌ ಬಳಗ 45.3 ಓವರ್‌ಗಳಲ್ಲಿ 221ರನ್‌ಗಳಿಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ರಹಮನ್‌ ಉಲ್ಲಾ ಸಾರಥ್ಯದ ಅಫ್ಗಾನ್‌  45.4 ಓವರ್‌ಗಳಲ್ಲಿ 170ರನ್‌ಗಳಿಗೆ ಹೋರಾಟ ಮುಗಿಸಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ, ಖಾತೆ ತೆರೆಯುವ ಮುನ್ನವೇ ಅನುಜ್‌ ರಾವತ್‌ (0) ವಿಕೆಟ್‌ ಕಳೆದುಕೊಂಡಿತು. ಅಜಮತ್‌ ಉಲ್ಲಾ ಹಾಕಿದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಅನುಜ್‌ ಎಲ್‌ಬಿಡಬ್ಲ್ಯು ಆದರು.

ನಾಯಕ ಪವನ್‌ (12; 9ಎ, 3ಬೌಂ), ನೇಹಲ್‌ ವಧೇರಾ (0) ಮತ್ತು ಪ್ರಭ್‌ಸಿಮ್ರನ್‌ ಸಿಂಗ್‌ (17) ಅವರೂ ಪೆವಿಲಿಯನ್‌ ಪರೇಡ್‌ ನಡೆಸಿದರು.

ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಯಶಸ್ವಿ ಜೈಸ್ವಾಲ್‌ (92; 93ಎ, 13ಬೌಂ, 1ಸಿ) ಎದೆಗುಂದಲಿಲ್ಲ. ಆಯುಷ್‌ ಬದೋನಿ (65; 66ಎ, 8ಬೌಂ, 1ಸಿ) ಜೊತೆಗೂಡಿ ಉತ್ತಮ ಇನಿಂಗ್ಸ್‌ ಕಟ್ಟಿದ ಅವರು  ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನಕ್ಕೆ ರಿಯಾಜ್‌ ಹಸನ್‌ (47; 92ಎ, 5ಬೌಂ, 1ಸಿ) ಮತ್ತು ರಹಮನ್‌ ಉಲ್ಲಾ (37; 30ಎ, 1ಬೌಂ, 3ಸಿ) ಭದ್ರ ಅಡಿಪಾಯ ಹಾಕಿಕೊಟ್ಟರು. ಆದರೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ನೀಡಲು ಅವಸರಿಸಿದ್ದರಿಂದ ತಂಡ ಸೋಲಿನ ಪ್ರಪಾತಕ್ಕೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಭಾರತ: 45.3 ಓವರ್‌ಗಳಲ್ಲಿ 221 (ಯಶಸ್ವಿ ಜೈಸ್ವಾಲ್‌ 92, ಪವನ್‌ ಶಾ 12, ಪ್ರಭ್‌ಸಿಮ್ರನ್‌ ಸಿಂಗ್‌ 17, ಆಯುಷ್‌ ಬದೋನಿ 65, ಹರ್ಷ ತ್ಯಾಗಿ 11; ಅಜಮತ್‌ ಉಲ್ಲಾ 46ಕ್ಕೆ3, ಅಬ್ದುಲ್‌ ರಹಮಾನ್‌ 39ಕ್ಕೆ1, ರಿಯಾಜ್‌ ಹಸನ್‌ 20ಕ್ಕೆ1, ಕ್ವಾಯಿಸ್‌ ಅಹ್ಮದ್‌ 33ಕ್ಕೆ3, ಅಬಿದ್‌ ಮೊಹಮ್ಮದಿ 28ಕ್ಕೆ2).

ಅಫ್ಗಾನಿಸ್ತಾನ: 45.4 ಓವರ್‌ಗಳಲ್ಲಿ 170 (ರಿಯಾಜ್‌ ಹಸನ್‌ 47, ರಹಮನ್‌ ಉಲ್ಲಾ 37, ಸುಲೈಮನ್‌ ಅರಬ್‌ಜಾಯ್‌ 15, ಬಸೀರ್‌ ಖಾನ್‌ 29, ಕ್ವಾಯಿಸ್‌ ಅಹ್ಮದ್‌ 12; ಸಿದ್ದಾರ್ಥ್‌ ದೇಸಾಯಿ 37ಕ್ಕೆ4, ಹರ್ಷ ತ್ಯಾಗಿ 40ಕ್ಕೆ3, ಆಯುಷ್‌ ಬದೋನಿ 28ಕ್ಕೆ1, ಸಮೀರ್‌ ಚೌಧರಿ 18ಕ್ಕೆ2).

ಫಲಿತಾಂಶ: ಭಾರತಕ್ಕೆ 51ರನ್‌ ಗೆಲುವು.

ಪಂದ್ಯಶ್ರೇಷ್ಠ: ಯಶಸ್ವಿ ಜೈಸ್ವಾಲ್‌.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !