ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕೆಟ್ಟ ದಿನ ಕಂಡಿದ್ದರೂ ಭಾರತ ಸರಣಿಯಲ್ಲಿ ಮುಂದಿದೆ: ಸಿರಾಜ್

Last Updated 27 ಆಗಸ್ಟ್ 2021, 7:18 IST
ಅಕ್ಷರ ಗಾತ್ರ

ಲೀಡ್ಸ್: 3ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಿರಬಹುದು. ಆದರೆ, ಇನ್ನೂ ಎರಡು ಪಂದ್ಯ ಬಾಕಿ ಇದ್ದು ಭಾರತ ತಂಡವು ಟೆಸ್ಟ್ ಸರಣಿ ಗೆಲ್ಲುವ ವಿಶ್ವಾಸವಿದೆ ಎಂದು ವೇಗಿ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

‘ಕೆಲವೊಮ್ಮೆ ನಾವು ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. ಬೇಗ ಆಲೌಟ್ ಆದಾಗ ಹೆಚ್ಚು ಸಮಯ ಫೀಲ್ಡಿಂಗ್ ಮಾಡಬೇಕಾಗುತ್ತದೆ’ ಎಂದು 2ನೇ ದಿನದಾಟದ ಅಂತ್ಯದ ಬಳಿಕ ಸಿರಾಜ್ ಹೇಳಿದ್ದಾರೆ.

3ನೇ ಟೆಸ್ಟ್ ಕ್ರಿಕೆಟ್ ಪಂದ್ಯದ 2ನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿದ್ದು, 345 ರನ್‌ಗಳ ಮುನ್ನಡೆ ಪಡೆದಿತ್ತು.

'ಅದು ನಿಮ್ಮ ಉತ್ಸಾಹವನ್ನು ಬತ್ತಿಸಬೇಕಿಲ್ಲ. ಏಕೆಂದರೆ, ನಮಗೆ ಇನ್ನೂ ಎರಡು ಪಂದ್ಯಗಳು ಉಳಿದಿವ‌ವೆ. ಸರಣಿಯಲ್ಲಿ ನಾವು 1-0 ಮುನ್ನಡೆಯಲ್ಲಿದ್ದೇವೆ. ನಮ್ಮ ಕೌಶಲ್ಯದ ಮೇಲೆ ನಂಬಿಕೆ ಇಡಬೇಕು’ ಎಂದು ಸಿರಾಜ್ ಹೇಳಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಭಾರತವು ಬುಧವಾರ ಆರಂಭಗೊಂಡ 3ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ 78 ರನ್‌ಗಳಿಗೆ ಆಲೌಟ್ ಆಗಿತ್ತು.

ಡೇವಿಡ್ ಮಲನ್ ವಿಕೆಟ್ ಸೇರಿದಂತೆ 86 ರನ್ ನೀಡಿ ಎರಡು ವಿಕೆಟ್ ಪಡೆದ ಸಿರಾಜ್, ಪಿಚ್ ‘ತುಂಬಾ ನಿಧಾನಗತಿಯಲ್ಲಿ ವರ್ತಿಸುತ್ತಿದೆ’. ಬೌಲರ್‌ಗಳಿಗೆ ಅಷ್ಟಾಗಿ ಅನುಕೂಲಕರವಾಗಿಲ್ಲ ಎಂದಿದ್ದಾರೆ.

ಸರಣಿಯಲ್ಲಿ ಹ್ಯಾಟ್ರಿಕ್ ಶತಕ ದಾಖಲಿಸಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್‌ ಅವರ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದರು.

‘ಯಾವುದೇ ಒಬ್ಬ ಬ್ಯಾಟ್ಸ್‌ಮನ್ ಉತ್ತಮ ಫಾರ್ಮ್‌ನಲ್ಲಿರುವಾಗ ರನ್ ಗಳಿಸುತ್ತಾರೆ. ಯಾರೋ ಒಬ್ಬರು ರನ್ ಗಳಿಸುವುದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಬಾರದು. ಅವರು 100 ಅಥವಾ 200 ಸ್ಕೋರ್ ಮಾಡಿದರೂ ನಾವು ಸರಣಿಯಲ್ಲಿ ಮುಂದಿದ್ದೇವೆ’ಎಂದು ಸಿರಾಜ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT