ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಶ್ರೀಲಂಕಾ ಟಿ20 ಕ್ರಿಕೆಟ್ ಸರಣಿ: ಪಿಚ್‌ ಒಣಗಿಸಲು ಹೇರ್ ಡ್ರೈಯರ್ ಬಳಕೆ!

Last Updated 6 ಜನವರಿ 2020, 2:10 IST
ಅಕ್ಷರ ಗಾತ್ರ

ಗುವಾಹಟಿ: ಭಾನುವಾರ ಸಂಜೆ ಮಳೆ ಸುರಿದ ಕಾರಣ ಇಲ್ಲಿನ ಬರ್ಸಾಪರದಲ್ಲಿ ಆಯೋಜಿಸಲಾಗಿದ್ದ ಭಾರತ ಮತ್ತು ಶ್ರೀಲಂಕಾ ನಡುವಣ ಮೊದಲ ಟಿ20 ಪಂದ್ಯವು ರದ್ದಾಯಿತು.

ರಾತ್ರಿ ಏಳು ಗಂಟೆಗೆ ಪಂದ್ಯ ಶುರುವಾಗಬೇಕಿತ್ತು. ಅದಕ್ಕೂ ಮುನ್ನ ಟಾಸ್‌ ಗೆದ್ದ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು.

ಗಾಯದಿಂದ ಚೇತರಿಸಿಕೊಂಡು ಮರಳಿರುವ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ನಾಲ್ಕು ತಿಂಗಳನಂತರ ಕಣಕ್ಕಿಳಿಯಲು ಸಿದ್ಧರಾಗಿದ್ದರು. ಅವರ ಬೌಲಿಂಗ್ ನೋಡಲು ಪ್ರೇಕ್ಷಕರು ಕಾದಿದ್ದರು.

ಆದರೆ ಧಾರಾಕಾರವಾಗಿ ಮಳೆ ಸುರಿಯಿತು. ನಿಂತ ಮೇಲೆ ಪಿಚ್ ತೇವ ಇದ್ದ ಕಾರಣ ಹೇರ್‌ ಡ್ರೈಯರ್ ಸೇರಿದಂತೆ ವಿವಿಧ ಯಂತ್ರಗಳಿಂದ ಒಣಗಿಸಲು ಪ್ರಯತ್ನಿಸಲಾಯಿತು.

ಆದರೆ ರಾತ್ರಿ 9.50ರ ಸುಮಾರಿಗೆ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT