ಅ. 4ರಿಂದ ಭಾರತ–ವಿಂಡೀಸ್‌ ಕ್ರಿಕೆಟ್‌ ಸರಣಿ

7

ಅ. 4ರಿಂದ ಭಾರತ–ವಿಂಡೀಸ್‌ ಕ್ರಿಕೆಟ್‌ ಸರಣಿ

Published:
Updated:

ನವದೆಹಲಿ: ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿ ಅಕ್ಟೋಬರ್‌ 4ರಿಂದ ನಡೆಯಲಿದೆ.

ಟೆಸ್ಟ್‌ ಸರಣಿಯ ಮೊದಲ ಪಂದ್ಯ ರಾಜ್‌ಕೋಟ್‌ನಲ್ಲಿ (ಅಕ್ಟೋಬರ್‌ 4 ರಿಂದ 8) ನಡೆಯಲಿದೆ. ಎರಡನೇ ಮತ್ತು ಅಂತಿಮ ಹಣಾಹಣಿಯಲ್ಲಿ ಅಕ್ಟೋಬರ್‌ 12ರಿಂದ 16ರವರೆಗೆ ಹೈದರಾಬಾದ್‌ನಲ್ಲಿ ಆಯೋಜನೆಯಾಗಿದೆ.

ಏಕದಿನ ಸರಣಿಯ ಪಂದ್ಯಗಳು ಕ್ರಮವಾಗಿ ಗುವಾಹಟಿ (ಅಕ್ಟೋಬರ್‌ 21), ಇಂದೋರ್‌ (ಅಕ್ಟೋಬರ್‌ 24), ಪುಣೆ (ಅಕ್ಟೋಬರ್‌ 27), ಮುಂಬೈ (ಅಕ್ಟೋಬರ್‌ 29) ಮತ್ತು ತಿರುವನಂತಪುರಂ (ನವೆಂಬರ್‌ 1) ನಲ್ಲಿ ಜರುಗಲಿವೆ.

ಟ್ವೆಂಟಿ–20 ಸರಣಿಯ ಪಂದ್ಯಗಳು ಕ್ರಮವಾಗಿ ಕೋಲ್ಕತ್ತ (ನವೆಂಬರ್‌ 4), ಲಖನೌ (ನವೆಂಬರ್‌ 6) ಮತ್ತು ಚೆನ್ನೈನಲ್ಲಿ (ನವೆಂಬರ್‌ 11) ಆಯೋಜನೆಯಾಗಿವೆ.

2014ರಲ್ಲಿ ವಿಂಡೀಸ್‌ ತಂಡ ಐದು ಪಂದ್ಯಗಳ ಏಕದಿನ, ಏಕೈಕ ಟ್ವೆಂಟಿ–20 ಮತ್ತು ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಭಾರತಕ್ಕೆ ಬಂದಿತ್ತು. ಆಗ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದ ಡ್ವೇನ್‌ ಬ್ರಾವೊ ಪಡೆ, ವೇತನ ಬಿಕ್ಕಟ್ಟು ಉಲ್ಬಣಿಸಿದ್ದರಿಂದ ಸರಣಿಯನ್ನು ಮೊಟಕುಗೊಳಿಸಿ ತವರಿಗೆ ಮರಳಿತ್ತು.

ಭಾರತ ತಂಡ ಟೆಸ್ಟ್ ಮತ್ತು ಏಕದಿನ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನಗಳಲ್ಲಿದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !