ಲಂಡನ್: ಓವಲ್ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯವಾದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡದ ಆಟಗಾರರು ದೊಡ್ಡಮಟ್ಟದ ಸಂಭ್ರಮಾಚರಣೆ ಮಾಡಲಿಲ್ಲ. ಸರಳವಾಗಿ ಸಂಭ್ರಮ ಆಚರಿಸಿಕೊಂಡ ಆಟಗಾರರು ಮಂಗಳವಾರ ಬೆಳಿಗ್ಗೆ ಸ್ವದೇಶಕ್ಕೆ ಪಯಣ ಆರಂಭಿಸಿದರು.

ವೇಗಿ ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲವು ಆಟಗಾರರು ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣ ಆರಂಭಿಸಿದರು. ಮಂಗಳವಾರ ಸಂಜೆ ದುಬೈಗೆ ತಲುಪಿದ ಆಟಗಾರರು ಅಲ್ಲಿಂದ ತಮ್ಮ ತವರೂರುಗಳಿಗೆ ಪ್ರಯಾಣಿಸಿದರು. ಸಿರಾಜ್ ಅವರು ದುಬೈನಿಂದ ನೇರವಾಗಿ ಹೈದರಾಬಾದಿಗೆ, ಅರ್ಷದೀಪ್ ಸಿಂಗ್ ಮತ್ತು ಶಾರ್ದೂಲ್ ಠಾಕೂರ್ ಅವರು ತಮ್ಮ ತವರೂರುಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು.

ತಂಡದ ಇನ್ನೂ ಕೆಲವು ಆಟಗಾರರು ಕೆಲವು ದಿನ ಗಳನ್ನು ಇಂಗ್ಲೆಂಡ್ನಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ. ಬಿಡುವಿನ ದಿನಗಳನ್ನು ಕಳೆಯಲಿದ್ದಾರೆ. ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್ ಅವರು ಮಾಜಿ ಆಟಗಾರ ಪಿಯೂಷ್ ಚಾವ್ಲಾ ಅವರೊಂದಿಗೆ, ಪ್ರಸಿದ್ಧ ಕೃಷ್ಣ ಸೇರಿದಂತೆ ಕೆಲವು ಆಟಗಾರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಲಂಡನ್ನಲ್ಲಿ ವಿಹಾರ ಮಾಡಿದರು.

‘ಕಳೆದ ರಾತ್ರಿ ಯಾವುದೇ ವಿಜಯೋತ್ಸವವನ್ನು ಆಚರಿಸಿಲ್ಲ. ಇದೊಂದು ದೀರ್ಘ ಹಾಗೂ ಪ್ರಯಾಸದ ಸರಣಿಯಾಗಿತ್ತು. ಅದರಿಂದಾಗಿ ಆಟಗಾರರು ವಿಶ್ರಾಂತಿಗೆ ಒತ್ತು ನೀಡಿದರು. ಕೆಲವರು ತಮ್ಮ ಕುಟುಂಬದೊಂದಿಗೆ ಕಾಲ ಕಳೆದರು. ಬಹುತೇಕ ಆಟಗಾರರು ಭಾರತಕ್ಕೆ ಮರಳಲು ಪ್ರಯಾಣ ಆರಂಭಿಸಿದರು’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.