ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್: ಶ್ರೀಲಂಕಾ ವಿರುದ್ಧ ಗೆದ್ದ ಭಾರತ 'ಎ' ತಂಡಕ್ಕೆ ಪ್ರಶಸ್ತಿ 

Last Updated 3 ಜೂನ್ 2019, 5:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನರಾಜನಗರ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಟೆಸ್ಟ್‌ ಕ್ರಿಕೆಟ್ ಪಂದ್ಯದಲ್ಲಿ ಭಾರತ ಎ ತಂಡವು ಪ್ರವಾಸಿ ಶ್ರೀಲಂಕಾ ವಿರುದ್ಧ 152 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 2-0 ಅಂತರದಿಂದ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

430 ರನ್ ಗಳ ಕಠಿಣ ಸವಾಲು‌ ಪಡೆದಿದ್ದ ಶ್ರೀಲಂಕಾ ಎ ತಂಡವು ಪಂದ್ಯದ 4ನೇ ಹಾಗೂ ಕೊನೆಯ ದಿನವಾದ ಸೋಮವಾರ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 277ರನ್ ಗಳಿಸುವಷ್ಟಕ್ಕೆ ಆಲೌಟ್ ಆಯಿತು.

ನಿನ್ನೆ ಆಟ ಮುಗಿದಾಗ ಶ್ರೀಲಂಕಾ 51 ಓವರ್ ಗಳಲ್ಲಿ 7 ವಿಕೆಟ್ ಗೆ 210 ರನ್ ಗಳಿಸಿತ್ತು.

ಭಾರತದ ಪರವಾಗಿ ಲೆಗ್ ಸ್ಪಿನ್ನರ್ ರಾಹುಲ್ ಚಹರ್ 112 ರನ್ ನೀಡಿ 5 ವಿಕೆಟ್ ಪಡೆದರು.

3 ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಬನುಕಾ ರಾಜಪಕ್ಷ ಶತಕ (110) ರನ್ )ದ ಹೊರತಾಗಿಯೂ ಶ್ರೀಲಂಕಾ ಸೋಲಿನ ಸುಳಿಗೆ ಸಿಲುಕಿತು. ಕಮಿಂದು ಮೆಂಡಿಸ್ 46 ರನ್, ವಿಶ್ವಾ ಫರ್ನಾಂಡೊ 32 ರನ್ ಗಳಿಸಿದರು.

ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೆ.ಎಸ್. ಭರತ್ ಪಡೆದುಕೊಂಡರು.
ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೆ.ಎಸ್. ಭರತ್ ಪಡೆದುಕೊಂಡರು.

ಭಾರತ ಎ ಮೊದಲ ಇನ್ನಿಂಗ್ಸ್ ನಲ್ಲಿ 269 ರನ್ ಗಳಿಸಿತ್ತು. ಶ್ರೀಲಂಕಾ ಎ ಮೊದಲ ಇನ್ನಿಂಗ್ಸ್ ನಲ್ಲಿ 212 ರನ್ ಗಳಿಸಿ ಆತಿಥೇಯರಿಗೆ 56 ರನ್ ಗಳ ಮುನ್ನಡೆ ಬಿಟ್ಟು ಕೊಟ್ಟಿತ್ತು. ಭಾರತ ಎ ದ್ವಿತೀಯ ಇನ್ನಿಂಗ್ಸ್‌ನಲ್ಲಿ 372 ರನ್ ಗಳಸಿ ಶ್ರೀಲಂಕಾ ಗೆ 430ರನ್ ಗಳ ಕಠಿಣ ಗುರಿ ನೀಡಿತ್ತು.

2 ಪಂದ್ಯಗಳ ಟೆಸ್ಟ್‌ ಸರಣಿ ಯಲ್ಲಿ ಭಾರತ ಎ ತಂಡವು ಬೆಳಗಾವಿಯಲ್ಲಿ ನಡೆದ ಮೊದಲ ಚತುರ್ದಿನ ಪಂದ್ಯವನ್ನು ಭಾರತ ಎ ಇನ್ನಿಂಗ್ಸ್ ಹಾಗೂ‌ 205 ರನ್ ಗಳ ಅಂತರದಿಂದ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT