ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | RCB vs SRH: ಆರ್‌ಸಿಬಿಗೆ ಆಘಾತ; ಹೈದರಾಬಾದ್‌ಗೆ 4 ರನ್ ಗೆಲುವು
LIVE

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ನಾಲ್ಕು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ವಿರಾಟ್ ಕೊಹ್ಲಿ ಪಡೆ ಸೋಲಿನ ಆಘಾತಕ್ಕೊಳಗಾಗಿದೆ.
Last Updated 6 ಅಕ್ಟೋಬರ್ 2021, 18:23 IST
ಅಕ್ಷರ ಗಾತ್ರ
18:2206 Oct 2021

ವಿಲಿಯರ್ಸ್ ಔಟಾಗದೆ ಉಳಿದರೂ ಆರ್‌ಸಿಬಿಗೆ ಪಂದ್ಯ ಗೆಲ್ಲಲಾಗಲಿಲ್ಲ.

18:2006 Oct 2021

ಹೈದರಾಬಾದ್‌ಗೆ ರೋಚಕ ಗೆಲುವು

17:4906 Oct 2021

ಹೈದರಾಬಾದ್‌ಗೆ ನಾಲ್ಕು ರನ್ ಅಂತರದ ರೋಚಕ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ರನ್ ಅಂತರದ ಸೋಲಿಗೆ ಶರಣಾಗಿದೆ. 

ಹರ್ಷಲ್ ಪಟೇಲ್ (33ಕ್ಕೆ 3) ಹಾಗೂ ಡೇನಿಯಲ್ ಕ್ರಿಸ್ಟಿಯನ್ (14ಕ್ಕೆ 2) ಪ್ರಭಾವಿ ದಾಳಿಗೆ ಸಿಲುಕಿದ ಹೈದರಾಬಾದ್ ಏಳು ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು.

ಬಳಿಕ ದೇವದತ್ತ ಪಡಿಕ್ಕಲ್ (41) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ (40) ಉಪಯುಕ್ತ ಬ್ಯಾಟಿಂಗ್ ಹೊರತಾಗಿಯೂ ಆರ್‌ಸಿಬಿ ಆರು ವಿಕೆಟ್ ನಷ್ಟಕ್ಕೆ  137 ರನ್ ಗಳಿಸಲಷ್ಟೇ ಸಮರ್ಥಾಯಿತು.  

ಕೊನೆಯ ಹಂತದಲ್ಲಿ ಎಬಿ ಡಿವಿಲಿಯರ್ಸ್ (19*) ಹಾಗೂ ಶಾಬಾಜ್ ಅಹಮದ್ (14) ಶಕ್ತಿಮೀರಿ ಪ್ರಯತ್ನಿಸಿದರೂ ಆರ್‌ಸಿಬಿಗೆ ಗೆಲುವು ದಾಖಲಿಸಲಾಗಿಲ್ಲ. 

17:3006 Oct 2021

ಪಡಿಕ್ಕಲ್ 41 ರನ್ ಗಳಿಸಿ ಔಟ್

ಅಂತಿಮ 3 ಓವರ್‌ಗಳಲ್ಲಿ ಆರ್‌ಸಿಬಿ ಗೆಲುವಿಗೆ 29 ರನ್ ಬೇಕಿದೆ. ಎಬಿ ಡಿವಿಲಿಯರ್ಸ್ ಕ್ರೀಸಿನಲ್ಲಿದ್ದಾರೆ. 

17:1906 Oct 2021

ಅದ್ಭುತ ಫೀಲ್ಡಿಂಗ್; ಮ್ಯಾಕ್ಸ್‌ವೆಲ್ ರನೌಟ್ ಮಾಡಿದ ವಿಲಿಯಮ್ಸನ್

17:1306 Oct 2021

ಮ್ಯಾಕ್ಸ್‌ವೆಲ್-ಪಡಿಕ್ಕಲ್ ಫಿಫ್ಟಿ ಜೊತಯಾಟ

16:5706 Oct 2021

ಮ್ಯಾಕ್ಸ್‌ವೆಲ್-ಪಡಿಕ್ಕಲ್ ಆಸರೆ

ಈ ಹಂತದಲ್ಲಿ ಜೂತೆಗೂಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದೇವದತ್ತ ಪಡಿಕ್ಕಲ್ ತಂಡಕ್ಕೆ ಆಸರೆಯಾದರು. 11 ಓವರ್ ಅಂತ್ಯಕ್ಕೆ ಆರ್‌ಸಿಬಿ ಮೂರು ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿತ್ತು. 

16:4806 Oct 2021
16:3606 Oct 2021

ಉಮ್ರಾನ್ ಮಲಿಕ್‌ಗೆ ಚೊಚ್ಚಲ ಐಪಿಎಲ್ ವಿಕೆಟ್

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆರ್‌ಸಿಬಿ ಆರಂಭ ಉತ್ತಮವಾಗಿರಲಿಲ್ಲ. 6.5 ಓವರ್‌ಗಳಲ್ಲಿ 38 ರನ್ ಗಳಿಸುವುದರೆಡೆಗೆ ಮೂರು ವಿಕೆ್ಟ ನಷ್ಟವಾಯಿತು. ನಾಯಕ ವಿರಾಟ್ ಕೊಹ್ಲಿ (5), ಡೇನಿಯಲ್ ಕ್ರಿಸ್ಟಿಯನ್ (1), ಶ್ರೀಕರ್ ಭರತ್ (10) ನಿರಾಸೆ ಮೂಡಿಸಿದರು.  
 

16:3406 Oct 2021

ಕೊಹ್ಲಿ, ಕ್ರಿಸ್ಟಿಯನ್ ವಿಕೆಟ್ ಪತನ