ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL: ಕಳಪೆ ಸ್ಟ್ರೈಕ್‌ರೇಟ್ ಆರೋಪ; ಕೊಹ್ಲಿ ಬೆಂಬಲಕ್ಕೆ ನಿಂತ ವಿಲಿಯರ್ಸ್

Published 2 ಮೇ 2024, 12:32 IST
Last Updated 2 ಮೇ 2024, 12:32 IST
ಅಕ್ಷರ ಗಾತ್ರ

ನವದೆಹಲಿ: ಚುಟುಕು ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್‌ರೇಟ್ ಬಗ್ಗೆ ತಗಾದೆ ಎತ್ತಿದವರ ವಿರುದ್ಧ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಆಪ್ತ ಸ್ನೇಹಿತ ವಿರಾಟ್ ಬೆಂಬಲಕ್ಕೆ ನಿಂತಿರುವ ವಿಲಿಯರ್ಸ್, ಅಂಕಿಅಂಶ ಮುಂದಿಟ್ಟುಕೊಂಡು ಟೀಕೆ ಮಾಡುವ ಕ್ರಿಕೆಟ್ ಪಂಡಿತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊಹ್ಲಿ ಸಾಬೀತು ಮಾಡಬೇಕಿರುವುದು ಏನೂ ಇಲ್ಲ ಎಂದು ಹೇಳಿದ್ದಾರೆ.

'ಕೊಹ್ಲಿ ಅವರ ಸ್ಟ್ರೇಕ್‌ರೇಟ್ ಬಗ್ಗೆ ಟೀಕೆಗಳಿಂದ ಬೇಸತ್ತಿದ್ದು, ಬೇಸರವನ್ನು ಉಂಟು ಮಾಡಿದೆ. ವಿರಾಟ್ ಕೊಹ್ಲಿ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಐಪಿಎಲ್‌ನಲ್ಲೂ ಅದ್ಭುತವಾಗಿ ಆಡುತ್ತಿದ್ದಾರೆ. ಆರ್‌ಸಿಬಿ ತಂಡದ ಪರ ಒಂದು ನಿರ್ದಿಷ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ' ಎಂದು ವಿಲಿಯರ್ಸ್ ಹೇಳಿದ್ದಾರೆ.

ಕ್ರಿಕೆಟ್ ಕುರಿತು ಜ್ಞಾನವಿಲ್ಲದ ಕ್ರಿಕೆಟ್ ಪಂಡಿತರು ನಮ್ಮ ಮುಂದಿದ್ದಾರೆ. ನೀವು ಎಷ್ಟು ಪಂದ್ಯಗಳನ್ನು ಆಡಿದ್ದೀರಿ? ಎಷ್ಟು ಶತಕಗಳನ್ನು ಗಳಿಸಿದ್ದೀರಿ ಎಂದು ವಿಲಿಯರ್ಸ್ ಪ್ರಶ್ನಿಸಿದ್ದಾರೆ.

ವಿರಾಟ್ ಅವರ ಸ್ಟ್ರೈಕ್‌ರೇಟ್ ಕಡಿಮೆಯಾಗಿದ್ದು, ಸ್ಪಿನ್‌ ಬೌಲಿಂಗ್ ವಿರುದ್ಧ ಚೆನ್ನಾಗಿ ಆಡುತ್ತಿಲ್ಲ ಎಂದು ಕ್ರಿಕೆಟ್ ಪಂಡಿತರು ವಾದ ಮಾಡುತ್ತಾರೆ. ಆದರೆ ತಂಡಕ್ಕಾಗಿ ಪಂದ್ಯ ಗೆಲ್ಲುವುದು ಮುಖ್ಯ ಎಂದು ವಿಲಿಯರ್ಸ್ ಉಲ್ಲೇಖಿಸಿದ್ದಾರೆ.

ಕಳೆದ 15 ವರ್ಷಗಳಿಂದ ಇದನ್ನೇ ಮಾಡಿರುವುದಕ್ಕೆ ಕಾರಣ ಇದೆ. ಪ್ರತಿ ದಿನವೂ ಪ್ರತಿ ಪಂದ್ಯದಲ್ಲೂ ತಂಡಕ್ಕಾಗಿ ಪಂದ್ಯ ಗೆಲ್ಲಿಸಲು ಪ್ರಯತ್ನಿಸುತ್ತಾರೆ ಎಂದು ಕೊಹ್ಲಿ ಅವರನ್ನು ಬೆಂಬಲಿಸಿದ್ದಾರೆ.

ಅಂದ ಹಾಗೆ ಈ ಋತುವಿನಲ್ಲಿ ಅವರ ಸ್ಟೈಕ್‌ರೇಟ್ ಕಡಿಮೆಯಾಗಿಲ್ಲ. ದಾಖಲೆ ಬರೆದ 2016ರ ಆವೃತ್ತಿಗಿಂತಲೂ ಉತ್ತಮವಾಗಿದೆ. ಹಾಗಾಗಿ ಟೀಕೆ ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ. ಸದ್ಯ ವಿರಾಟ್ ಕನಸಿನಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ವಿಲಿಯರ್ಸ್ ತಿಳಿಸಿದ್ದಾರೆ.

ಈ ಆವೃತ್ತಿಯಲ್ಲಿ 77ರ ಸರಾಸರಿ ಕಾಪಾಡಿಕೊಂಡಿರುವ ಕೊಹ್ಲಿ, 147ರ ಸ್ಟ್ರೈಕ್‌ರೇಟ್‌‌ನಲ್ಲಿ 500 ರನ್ ಗಳಿಸಿದ್ದಾರೆ.

ಈ ಮುನ್ನ ತಮ್ಮ ಸ್ಟ್ರೈಕ್‌ರೇಟ್ ಕುರಿತು ಟೀಕೆ ಮಾಡುವವರ ವಿರುದ್ಧ ಸ್ವತಃ ವಿರಾಟ್ ಕೊಹ್ಲಿ ಅವರೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. 'ಈ ಟೀಕೆಗಳ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ. ತಂಡಕ್ಕಾಗಿ ಗೆಲುವು ದಾಖಲಿಸುವುದೇ ಮುಖ್ಯ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT