ಬುಧವಾರ, ಅಕ್ಟೋಬರ್ 21, 2020
24 °C

IPL 2020 | KXIP vs MI: ಮುಂಬೈಗೆ 49 ರನ್‌ ಗೆಲುವು; ಪಂಜಾಬ್‌ಗೆ ಮೂರನೇ ಸೋಲು

Published:
Updated:
ಜಯದ ಸನಿಹ ಎಡವಿ ನಿರಾಸೆ ಕಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಗುರುವಾರ ಅಬುಧಾಬಿಯಲ್ಲಿ ಮುಖಾಮುಖಿಯಾಗಲಿದ್ದು ಜಯದ ಹಾದಿಗೆ ಮರಳಲು ಪ್ರಯತ್ನಿಸಲಿವೆ. ಎರಡೂ ತಂಡಗಳಲ್ಲಿ ಬ್ಯಾಟಿಂಗ್ ದಿಗ್ಗಜರು ಇರುವ ಕಾರಣ ಈ ಪಂದ್ಯದಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ.
 • 11:23 pm

  ಮುಂಬೈಗೆ 49 ರನ್‌ ಗೆಲುವು

  ಮುಂಬೈ ಇಂಡಿಯನ್ಸ್‌ ನೀಡಿದ 192 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ 48 ರನ್‌ ಅಂತರದ ಸೋಲೊಪ್ಪಿಕೊಂಡಿತು.

  ರಾಹುಲ್‌ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 143 ರನ್‌ ಗಳಿಸಲಷ್ಟೇ ಶಕ್ತವಾಯಿತು.

 • 11:14 pm

  18ನೇ ಓವರ್ ಮುಕ್ತಾಯ: 7 ವಿಕೆಟ್‌ಗೆ 123 ರನ್

  18 ಓವರ್‌ಗಳ ಆಟ ಮುಗಿದಿದ್ದು, ಪಂಜಾಬ್‌ ತಂಡ 123 ರನ್‌ಗೆ ಮೂರು ವಿಕೆಟ್‌ ಕಳೆದುಕೊಂಡಿದೆ.

  ಉಳಿದಿರುವ 12 ಎಸೆತಗಳಲ್ಲಿ 69 ರನ್‌ ಗಳಿಸಬೇಕಿದೆ.

 • 11:08 pm

  17ನೇ ಓವರ್‌ ಮುಕ್ತಾಯ:6 ವಿಕೆಟ್‌ಗೆ 121 ರನ್‌

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಪಂಜಾಬ್‌ 6 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಿದೆ.

  ಸರ್ಫರಾಜ್‌ ಖಾನ್‌ (7) ಮತ್ತು ಕೆ. ಗೌತಮ್‌ (3) ಕ್ರೀಸ್‌ನಲ್ಲಿದ್ದಾರೆ.

 • 11:01 pm

  16ನೇ ಓವರ್ ಮುಕ್ತಾಯ; ಮತ್ತೊಂದು ವಿಕೆಟ್ ಪತನ

  16ನೇ ಓವರ್‌ನ ಕೊನೆಯ ಎಸೆತದಲ್ಲಿ ಆಲ್ರೌಂಡರ್‌ ಜಿಮ್ಮಿ ನೀಶಮ್‌ ವಿಕೆಟ್‌ ಒಪ್ಪಿಸಿದ್ದಾರೆ.

  ಇದರೊಂದಿಗೆ ಪಂಜಾಬ್‌ 6 ವಿಕೆಟ್‌ ಕಳೆದುಕೊಂಡು 112 ರನ್‌ ಗಳಿಸಿದೆ.

  ಕೊನೆಯ ನಾಲ್ಕು ಓವರ್‌ನಲ್ಲಿ ಪಂಜಾಬ್‌ ಕೇವಲ 18 ರನ್‌ ಗಳಿಸಿ 3 ವಿಕೆಟ್‌ ಕಳೆದುಕೊಂಡಿದೆ.

 • 10:58 pm

  15ನೇ ಓವರ್ ಮುಕ್ತಾಯ: 5 ವಿಕೆಟ್‌ಗೆ 109ರನ್

  ಪಂಜಾಬ್‌ ತಂಡ 15 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ಕಳೆದುಕೊಂಡು 109 ರನ್‌ ಗಳಿಸಿದೆ. ಜಿಮ್ಮಿ ನೀಶಮ್‌ (6) ಮತ್ತು ಸರ್ಫರಾಜ್‌ ಖಾನ್‌ (0) ಕ್ರೀಸ್‌ನಲ್ಲಿದ್ದಾರೆ.

 • 10:50 pm

  14ನೇ ಓವರ್ ಮುಕ್ತಾಯ: 4 ವಿಕೆಟ್‌ಗೆ 105ರನ್

  14 ಓವರ್‌ಗಳ ಆಟ ಮುಗಿದಿದೆ. ಪಂಜಾಬ್‌ ತಂಡ 4 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿದೆ. ಈ ಹಂತದಲ್ಲಿ ಮುಂಬೈ 3 ವಿಕೆಟ್‌ಗೆ 87 ರನ್‌ ಗಳಿಸಿತ್ತು.

  ಪಂಜಾಬ್‌ ಗೆಲ್ಲಲು ಉಳಿದಿರುವ 36 ಎಸೆತಗಳಲ್ಲಿ 87 ರನ್‌ ಗಳಿಸಬೇಕಿದೆ.

 • 10:45 pm

  ನಾಲ್ಕನೇ ವಿಕೆಟ್ ಪತನ

  ಉತ್ತಮವಾಗಿ ರನ್‌ ಗಳಿಸುತ್ತಿದ್ದ ನಿಕೋಲಸ್‌ ಪೂರನ್‌ ನಾಲ್ಕನೇ ವಿಕೆಟ್ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ. 27 ಎಸೆತಗಳನ್ನು ಆಡಿದ್ದ ಅವರು ಜೇಮ್ಸ್‌ ಪ್ಯಾಟಿನ್ಸನ್‌ ಎಸೆದ 14ನೇ ಓವರ್‌ 2ನೇ ಎಸೆತದಲ್ಲಿ ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

 • 10:40 pm

  13 ಓವರ್ ಮುಕ್ತಾಯ: 3‌ ನಷ್ಟಕ್ಕೆ 99ರನ್

  ಪೂರನ್ (42)‌ ಮತ್ತು ಮ್ಯಾಕ್ಸ್‌ವೆಲ್ (9) ಕ್ರೀಸ್‌ನಲ್ಲಿದ್ದಾರೆ.

  42 ಎಸೆತಗಳಲ್ಲಿ 93 ರನ್‌ ಬೇಕಾಗಿದೆ.

 • 10:35 pm

  12ನೇ ಓವರ್ ಮುಕ್ತಾಯ: 3 ವಿಕೆಟ್‌ಗೆ 94 ರನ್

  ಪೂರನ್ (38)‌ ಮತ್ತು ಮ್ಯಾಕ್ಸ್‌ವೆಲ್ (8) ಕ್ರೀಸ್‌ನಲ್ಲಿದ್ದಾರೆ.

 • 10:32 pm

  11ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 87 ರನ್‌

  ಪೂರನ್ (32)‌ ಮತ್ತು ಮ್ಯಾಕ್ಸ್‌ವೆಲ್ (7) ಕ್ರೀಸ್‌ನಲ್ಲಿದ್ದಾರೆ.

 • 10:25 pm

  10ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 104 ರನ್‌

  ಹತ್ತು ಓವರ್‌ಗಳ ಆಟ ಮುಕ್ತಾಯವಾಗಿದ್ದು ಪಂಜಾಬ್‌ 3 ವಿಕೆಟ್‌ಗೆ 72 ರನ್‌ ಗಳಿಸಿದೆ.  ಉಳಿದಿರುವ 10 ಓವರ್‌ಗಳಲ್ಲಿ 127 ಬೇಕಾಗಿದೆ.

  ಪೂರನ್‌ ಮತ್ತು ಮ್ಯಾಕ್ಸ್‌ವೆಲ್ ಕ್ರೀಸ್‌ನಲ್ಲಿದ್ದಾರೆ.

  ಈ ಹಂತದಲ್ಲಿ ಮುಂಬೈ 2 ವಿಕೆಟ್‌ ಕಳೆದುಕೊಂಡು 62 ರನ್‌ ಗಳಿಸಿತ್ತು.

 • 10:20 pm

  ರಾಹುಲ್ ವಿಕೆಟ್ ಪತನ

  ನಾಯಕ ಕೆಎಲ್‌ ರಾಹುಲ್‌ ರಾಹುಲ್‌ ಚಾಹರ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದರೆ. ಔಟಾಗಿರುವ ಮೂವರೂ ಬೌಲ್ಡ್‌ ಅಗಿದ್ದು ವಿಶೇಷ.

  ಸದ್ಯ 9 ಓವರ್‌ಗಳ ಆಟ ಮುಗಿದಿದ್ದು, ಪಂಜಾಬ್‌ 64ಕ್ಕೆ 3 ವಿಕೆಟ್‌ ಕಳೆದುಕೊಂಡಿದೆ.

  ಪೂರನ್‌ ಜೊತೆಗೆ ಗ್ಲೇನ್‌ ಮ್ಯಾಕ್ಸ್‌ವೆಲ್‌ ಕ್ರೀಸ್‌ನಲ್ಲಿದ್ದಾರೆ.

 • 10:09 pm

  7 ಓವರ್ ಮುಕ್ತಾಯ: 2 ವಿಕೆಟ್ ನಷ್ಟಕ್ಕೆ 42

  ರಾಹುಲ್‌ (16) ಮತ್ತು ನಿಕೋಲಸ್‌ ಪೂರನ್‌ (3) ಕ್ರೀಸ್‌ನಲ್ಲಿದ್ದಾರೆ.

 • 10:03 pm

  2ನೇ ವಿಕೆಟ್‌ ಪತನ

  ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಕರುಣ್‌ ನಾಯರ್ ನಿರಾಸೆ ಮೂಡಿಸಿದರು. ಅವರು ಖಾತೆ ತೆರೆಯುವ ಮುನ್ನವೇ ಕೃಣಾಲ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದರು.

  ನಿಕೋಲಸ್‌ ಪೂರನ್‌ ನಾಯಕನ ಜೊತೆಗೆ ಕ್ರೀಸ್‌ನಲ್ಲಿದ್ದಾರೆ.

  ಸದ್ಯ ಪವರ್‌ಪ್ಲೇ ಮುಗಿದಿದ್ದು, ಪಂಜಾಬ್‌ 2 ವಿಕೆಟ್‌ ನಷ್ಟಕ್ಕೆ 42 ರನ್‌ ಗಳಿಸಿದೆ. ಈ ಹಂತದಲ್ಲಿ ಮುಂಬೈ 2 ವಿಕೆಟ್‌ ನಷ್ಟಕ್ಕೆ 34 ರನ್‌ ಗಳಿಸಿತ್ತು.

 • 09:58 pm

  ಮೊದಲ ವಿಕೆಟ್ ಪತನ

  ಮುಂಬೈ ಇಂಡಿಯನ್ಸ್‌ಗೆ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಮಯಂಕ್‌ ಅಗರವಾಲ್‌ ಅವರನ್ನು ವೇಗಿ ಜಸ್‌ಪ್ರೀತ್‌ ಬೂಮ್ರಾ ಕ್ಲೀನ್‌ ಬೌಲ್ಡ್‌ ಮಾಡಿದರು.

  ಮಯಂಕ್‌ 18 ಎಸತಗಳಲ್ಲಿ 3 ಬೌಂಡರಿ ಸಹಿತ 25 ರನ್‌ ಗಳಿಸಿದ್ದರು.

  ಮಯಂಕ್‌ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಕರುಣ್‌ ನಾಯರ್‌ ಕ್ರೀಸ್‌ಗಿಳಿದಿದ್ದಾರೆ.

  ಸದ್ಯ 5 ಓವರ್‌ಗಳ ಆಟ ಮುಗಿದಿದ್ದು, ಪಂಜಾಬ್‌ 1 ವಿಕೆಟ್‌ಗೆ 38 ರನ್‌ ಗಳಿಸಿದೆ.

 • 09:54 pm

  4ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 37 ರನ್‌

  ರಾಹುಲ್‌ 11 ಮತ್ತು ಮಯಂಕ್‌ 25 ರನ್ ಗಳಿಸಿ ಆಡುತ್ತಿದ್ದಾರೆ.

 • 10:01 pm

  ಮಯಂಕ್‌ 1500 ರನ್‌

  ಕನ್ನಡಿಗ ಮಯಂಕ್‌ ಅಗರವಾಲ್‌ ಐಪಿಎಲ್‌ನಲ್ಲಿ 1500 ರನ್‌ ಪೂರೈಸಿದರು.

  ಅವರು 76ನೇ ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.

 • 09:50 pm

  3 ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 33ರನ್‌

  ಮೂರು ಓವರ್‌ಗಳ ಅಂತ್ಯಕ್ಕೆ ಪಂಜಾಬ್‌ 33 ರನ್‌ ಗಳಿಸಿದೆ. ರಾಹುಲ್‌ 9 ಮತ್ತು ಮಯಂಕ್‌ 23 ರನ್ ಗಳಿಸಿ ಆಡುತ್ತಿದ್ದಾರೆ.

 • 09:44 pm

  ಇನಿಂಗ್ಸ್ ಆರಂಭಿಸಿದ ಪಂಜಾಬ್‌

  ಪಂಜಾಬ್‌ ಪರ ನಾಯಕ ಕೆಎಲ್‌ ರಾಹುಲ್‌ ಮತ್ತು ಮಯಂಕ್‌ ಅಗರವಾಲ್‌ ಇನಿಂಗ್ಸ್‌ ಆರಂಭಿಸಿದ್ದಾರೆ.

  ಎರಡು ಓವರ್‌ಗಳ ಆಟ ಮುಕ್ತಾಯವಾಗಿದ್ದು, ರಾಹುಲ್‌ 8 ಮತ್ತು ಮಯಂಕ್‌ 15 ರನ್ ಗಳಿಸಿದ್ದಾರೆ.

  ಮೊದಲ ಓವರ್‌ ಎಸೆದ ಟ್ರೆಂಟ್‌ ಬೌಲ್ಟ್‌ 12 ರನ್‌ ನೀಡಿದರೆ, ಎರಡನೇ ಓವರ್‌ನಲ್ಲಿ ಜೇಮ್ಸ್‌ ಪ್ಯಾಟಿನ್ಸನ್‌ ಅವರೂ ಇಷ್ಟೇ ರನ್‌ ಬಿಟ್ಟುಕೊಟ್ಟರು.

 • 09:21 pm

  ಪಂಜಾಬ್‌ಗೆ 192 ರನ್‌ ಗುರಿ

  ಕಿಂಗ್ಸ್ ಇಲವೆನ್‌ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 191 ರನ್‌ ಗಳಿಸಿದೆ.

  ಕೆ.ಗೌತಮ್‌ ಎಸೆದ ಕೊನೆಯ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ಕೀರನ್‌ ಪೊಲಾರ್ಡ್ 4 ಸಿಕ್ಸರ್‌ ಸಹಿತ 25 ರನ್‌ ಚಚ್ಚಿದರು.

 • 09:18 pm

  19ನೇ ಓವರ್ ಮುಕ್ತಾಯ; 4 ವಿಕೆಟ್‌ಗೆ 166ರನ್

  ಕೊನೆಯ ಓವರ್‌ ಆಟ ಬಾಕಿ ಉಳಿದಿದ್ದು, ಮುಂಬೈ 4 ವಿಕೆಟ್‌ಗೆ 166 ರನ್‌ ಗಳಿಸಿದೆ.

  ಹಾರ್ದಿಕ್‌ (23) ಮತ್ತು ಪೊಲಾರ್ಡ್ (29)‌ ಕ್ರೀಸ್‌ನಲ್ಲಿದ್ದಾರೆ.

 • 09:10 pm

  18ನೇ ಓವರ್ ಮುಕ್ತಾಯ: 4 ವಿಕೆಟ್‌ಗೆ 147ರನ್

  ಹಾರ್ದಿಕ್‌ ಪಾಂಡ್ಯ 18 ರನ್‌ ಗಳಿಸಿದ್ದು, ಇನ್ನೊಂದು ತುದಿಯಲ್ಲಿ ಪೊಲಾರ್ಡ್ (16)‌ ಕ್ರೀಸ್‌ನಲ್ಲಿದ್ದಾರೆ.

 • 09:04 pm

  17ನೇ ಓವರ್‌ ಮುಕ್ತಾಯ: 5 ವಿಕೆಟ್‌ಗೆ 1ರನ್‌

  17 ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ ಇಂಡಿಯನ್ಸ್‌ ತಂಡ 4 ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಿದೆ.

 • 09:00 pm

  ರೋಹಿತ್ ವಿಕೆಟ್‌ ಪತನ

  ಅಪಾಯಕಾರಿಯಾಗುವ ಸೂಚನೆ ನೀಡಿದ್ದ ರೋಹಿತ್‌ ಶರ್ಮಾ 17ನೇ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ಮೊಹಮ್ಮದ್‌ ಶಮಿ ಬೌಲಿಂಗ್‌ನಲ್ಲಿ ರೋಹಿತ್‌ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಗ್ಲೇನ್ ಮ್ಯಾಕ್ಸ್‌ವೆಲ್‌ ಮತ್ತು ಜಿಮ್ಮಿ ನೀಶಮ್‌ ಅದ್ಭುವಾಗಿ ಹಿಡಿದರು.

  ರೋಹಿತ್‌ ಜಾಗಕ್ಕೆ ಈಗ ಹಾರ್ದಿಕ್‌ ಪಾಂಡ್ಯ ಕ್ರೀಸ್‌ಗೆ ಬಂದಿದ್ದಾರೆ.

 • 08:55 pm

  16ನೇ ಓವರ್‌ನಲ್ಲಿ 22 ರನ್‌

  ಜಿಮ್ಮಿ ನೀಶಮ್‌ ಎಸೆದ 16ನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಮತ್ತು ಕೀರನ್‌ ಪೊಲಾರ್ಡ್‌ 22 ರನ್‌ ಗಳಿಸಿದರು.

  ಮೊದಲ ಎಸೆತದ ಆಡಿದ ಕೀರನ್‌ 1 ರನ್‌ ಗಳಿಸಿದರು. ಉಳಿದ ಐದು ಎಸೆತಗಳಲ್ಲಿ ರೋಹಿತ್‌ ತಲಾ ಎರಡು ಬೌಂಡರಿ ಮತ್ತು ಎರಡು ಬೌಂಡರಿ ಸಿಡಿಸಿ ಕೊನೆ ಎಸೆತದಲ್ಲಿ ಒಂದು ರನ್‌ ಹೊಡೆದರು.

 • 08:45 pm

  ಮುಂಬೈಗೆ ಶತಕ; ರೋಹಿತ್‌ಗೆ ಅರ್ಧಶತಕ

  16 ಓವರ್‌ಗಳ ಆಟ ಮುಗಿದಿದ್ದು, ಮುಂಬೈ ನಾಯಕ ರೋಹಿತ್‌ ಶರ್ಮಾ ಅರ್ಧಶತಕ ಬಾರಿಸಿದ್ದಾರೆ. ತಂಡದ ಮೊತ್ತ ನೂರರ ಗಡಿ ದಾಟಿದೆ.

  ರೋಹಿತ್‌ಗೆ ಇದು ಐಪಿಎಲ್‌ನಲ್ಲಿ 38ನೇ ಅರ್ಧಶತಕವಾಗಿದೆ.

  ರೋಹಿತ್‌ 70 ರನ್‌ ಗಳಿಸಿದ್ದು, ಇನ್ನೊಂದು ತುದಿಯಲ್ಲಿ ಪೊಲಾರ್ಡ್ (12)‌ ಕ್ರೀಸ್‌ನಲ್ಲಿದ್ದಾರೆ.

  ಸದ್ಯ ತಂಡದ ಮೊತ್ತ 3 ವಿಕೆಟ್‌ಗೆ 124 ಆಗಿದೆ.

 • 08:37 pm

  ಕಿಶನ್ ವಿಕೆಟ್ ಪತನ

  ನಾಯಕ ರೋಹಿತ್‌ ಜೊತೆಗೂಡಿ ಮೂರನೇ ವಿಕೆಟ್‌ಗೆ 62 ರನ್‌ ಕಲೆಹಾಕಿದ್ದ ಇಶಾನ್‌ ಕಿಶನ್‌ ಕನ್ನಡಿಗ ಕೆ.ಗೌತಮ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

  ‌ಕಳೆದ ಪಂದ್ಯದಲ್ಲಿ 99 ರನ್‌ ಬಾರಿಸಿದ್ದ ಇಶಾನ್‌ ಈ ಬಾರಿ 28 ರನ್‌ ಗಳಿಸಿ ಔಟಾಗಿದ್ದಾರೆ. ಇಶಾನ್‌ ಬದಲು ಕೀರನ್‌ ಪೊಲಾರ್ಡ್‌ ಕ್ರೀಸ್‌ಗೆ ಬಂದಿದ್ದಾರೆ.

  14 ಓವರ್‌ಗಳ ಆಟ ಮುಗಿದಿದ್ದು, ಮುಂಬೈ 87 ರನ್‌ ಕಲೆಹಾಕಿದೆ.

 • 08:36 pm

  13 ಓವರ್ ಮುಕ್ತಾಯ: 2‌ ನಷ್ಟಕ್ಕೆ 83 ರನ್

  ರೋಹಿತ್‌ (41) ಮತ್ತು ಇಶಾನ್ (28) ಕ್ರೀಸ್‌ನಲ್ಲಿದ್ದಾರೆ.

 • 08:31 pm

  12 ಓವರ್‌ ಮುಕ್ತಾಯ: 2 ವಿಕೆಟ್‌ ನಷ್ಟಕ್ಕೆ 80ರನ್

  ರೋಹಿತ್‌ 40 ರನ್‌ ಗಳಿಸಿದ್ದು, ಇಶಾನ್ 26 ರನ್‌ ಬಾರಿಸಿ ಆಡುತ್ತಿದ್ದಾರೆ.

 • 08:25 pm

  ರೋಹಿತ್‌–ಕಿಶನ್ ಅರ್ಧಶತಕದ ಜೊತೆಯಾಟ

  ಕೇವಲ 21 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ತಂಡಕ್ಕೆ ನಾಯಕ ರೋಹಿತ್‌ ಮತ್ತು ಇಶಾನ್‌ ಆಸರೆಯಾಗಿದ್ದಾರೆ.

  ಈ ಜೋಡಿ 3ನೇ ವಿಕೆಟ್‌ಗೆ 43 ಎಸೆತಗಳಲ್ಲಿ 52 ರನ್‌ ಕಲೆಹಾಕಿದೆ. ರೋಹಿತ್‌ 38 ರನ್‌ ಗಳಿಸಿದ್ದು, ಇಶಾನ್ 23 ರನ್‌ ಬಾರಿಸಿ ಆಡುತ್ತಿದ್ದಾರೆ.

  ಕ್ವಿಂಟನ್‌ ಡಿ ಕಾಕ್‌ (0) ಮತ್ತು ಸೂರ್ಯಕುಮಾರ್ ಯಾದವ್‌ (10) ವಿಕೆಟ್ ಒಪ್ಪಿಸಿದ್ದಾರೆ.

 • 08:19 pm

  10ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 62 ರನ್

  10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ ತಂಡ 6.2 ಸರಾಸರಿಯಲ್ಲಿ 62 ರನ್‌ ಕಲೆಹಾಕಿದೆ.

  ಎರಡು ವಿಕೆಟ್‌ ಉರುಳಿದ್ದು, ರೋಹಿತ್ (36)‌ ಮತ್ತು ಇಶಾನ್ (20)‌ ಕ್ರೀಸ್‌ನಲ್ಲಿದ್ದಾರೆ.

 • 08:13 pm

  9ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 67 ರನ್‌

  ಮುಂಬೈ ತಂಡಕ್ಕೆ ಆಸರೆಯಾಗಿರುವ ನಾಯಕ ರೋಹಿತ್‌ ಶರ್ಮಾ ಯುವ ಪ್ರತಿಭೆ ಇಶಾನ್‌ ಕಿಶಾನ್ ಜೊತೆಗೂಡಿ ತಂಡದ ಮೊತ್ತವನ್ನು ಏರಿಸುತ್ತಿದ್ದಾರೆ.

  ಸದ್ಯ 9 ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ 2 ವಿಕೆಟ್‌ ನಷ್ಟಕ್ಕೆ 58 ರನ್‌ ಗಳಿಸಿದೆ.

 • 08:09 pm

  8ನೇ ಓವರ್‌ ಮುಕ್ತಾಯ: ಅರ್ಧಶತಕದ ಪೂರೈಸಿದ ಮುಂಬೈ

  ಮುಂಬೈ ಇಂಡಿಯನ್ಸ್‌ ತಂಡ 8ನೇ ಓವರ್‌ನಲ್ಲಿ 50 ರನ್‌ ಪೂರೈಸಿದೆ.

  ರೋಹಿತ್‌ ಮತ್ತು ಕಿಶನ್‌ ಆಸರೆಯಾಗಿದ್ದಾರೆ.

 • 08:04 pm

  7 ಓವರ್ ಮುಕ್ತಾಯ: 2 ವಿಕೆಟ್ ನಷ್ಟಕ್ಕೆ 47

  ಆರಂಭಿಕ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಮುಂಬೈ ತಂಡ 7 ಓವರ್‌ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 47 ರನ್‌ ಗಳಿಸಿದೆ.

 • 07:59 pm

  ಪವರ್‌ ಪ್ಲೇ ಮುಕ್ತಾಯ: 2 ವಿಕೆಟ್‌ಗೆ 34 ರನ್‌

  ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ ತಂಡ 2 ವಿಕೆಟ್‌ ಕಳೆದುಕೊಂಡು 41 ರನ್‌ ಗಳಿಸಿದೆ.

  ರೋಹಿತ್‌ ಶರ್ಮಾ (22) ಮತ್ತು ಇಶಾನ್‌ ಕಿಶನ್‌ (7) ಕ್ರೀಸ್‌ನಲ್ಲಿದ್ದಾರೆ.

 • 07:55 pm

  ಎರಡನೇ ವಿಕೆಟ್ ಪತನ

  ಡಿ ಕಾಕ್‌ ವಿಕೆಟ್‌ ಪತನದ ಬಳಿಕ ಬಂದ ಸೂರ್ಯಕುಮಾರ್‌ ಯಾದವ್‌ ರನೌಟ್‌ ಆಗಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

  ಸದ್ಯ 4 ಓವರ್‌ ಮುಕ್ತಾಯವಾಗಿದ್ದು, ಮುಂಬೈ 2 ವಿಕೆಟ್‌ಗೆ 22 ರನ್‌ ಗಳಿಸಿದೆ. ರೋಹಿತ್ (10)‌ ಮತ್ತು ಇಶಾನ್‌ ಕಿಶನ್‌ (1)‌ ಕ್ರೀಸ್‌ನಲ್ಲಿದ್ದಾರೆ.

 • 07:40 pm

  5 ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ

  ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಐಪಿಎಲ್‌ನಲ್ಲಿ ಐದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ ಮೂರನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

  ಸದ್ಯ ಎರಡು ಓವರ್‌ ಮುಕ್ತಾಯವಾಗಿದ್ದು ತಂಡದ ಮೊತ್ತ 8 ಆಗಿದೆ. ರೋಹಿತ್‌ (8) ಮತ್ತು ಸೂರ್ಯಕುಮಾರ್‌ ಯಾದವ್‌ ಕ್ರೀಸ್‌ನಲ್ಲಿದ್ದಾರೆ.

  ಸದ್ಯ ಮೂರು ಓವರ್‌ಗಳ ಮುಕ್ತಾಯವಾಗಿದ್ದು, ಮುಂಬೈ 1 ವಿಕೆಟ್‌ ಕಳೆದುಕೊಂಡು 18 ರನ್‌ ಗಳಿಸಿದೆ. ನಾಯಕ ರೋಹಿತ್‌ (9) ಮತ್ತು ಸೂರ್ಯಕುಮಾರ್‌ ಯಾದವ್ (9)‌ ಕ್ರೀಸ್‌ನಲ್ಲಿದ್ದಾರೆ.

 • 07:33 pm

  ಇನಿಂಗ್ಸ್ ಆರಂಭಿಸಿದ ಮುಂಬೈ; ಮೊದಲ ಓವರ್‌ನಲ್ಲೇ ಆಘಾತ

  ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಕಿಂಗ್ಸ್ ವೇಗಿ ಶೇಲ್ಡನ್‌ ಕಾರ್ಟ್ರೇಲ್‌ ಮೊದಲ ಓವರ್‌ನಲ್ಲೇ ಆಘಾತ ನೀಡಿದ್ದಾರೆ.

  ನಾಯಕ ರೋಹಿತ್ ಶರ್ಮಾ‌ ಜೊತೆ ಕ್ರೀಸ್‌ಗಿಳಿದ ಕ್ವಿಂಟನ್‌ ಡಿ ಕಾಕ್‌ ಐದು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದಾರೆ. ಒಂದು ಓವರ್‌ ಮುಕ್ತಾವಾಗಿದ್ದು ತಂಡ ಇನ್ನೂ ಖಾತೆ ತೆರೆದಿಲ್ಲ. 

 • 07:23 pm

  ತಂಡಗಳ ಸಾಧನೆ

  ಉಭಯ ತಂಡಗಳು ಈ ಬಾರಿಯ ಐಪಿಎಲ್‌ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಒಂದೊಂದು ಜಯ ಸಾಧಿಸಿವೆ. ಹಿಂದಿನ ಪಂದ್ಯದಲ್ಲಿ ಪಂಜಾಬ್‌ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಮತ್ತು ಮುಂಬೈ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸೋಲು ಕಂಡಿತ್ತು.

  ಸದ್ಯ ಅಂಕಪಟ್ಟಿಯಲ್ಲಿ ಪಂಜಾಬ್‌ 5 ಮತ್ತು ಮುಂಬೈ 6ನೇ ಸ್ಥಾನಗಳಲ್ಲಿದೆ.

   

 • 07:08 pm

  ತಂಡಗಳು ಈಗಿವೆ

  ಕಿಂಗ್ಸ್‌ ಇಲವೆನ್‌ ಪಂಜಾಬ್‌: ಕೆ.ಎಲ್‌. ರಾಹುಲ್‌ (ನಾಯಕ/ವಿಕೆಟ್‌ ಕೀಪರ್‌), ಮಯಂಕ್‌ ಅಗರವಾಲ್‌, ನಿಕೋಲಸ್‌ ಪೂರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಕರುಣ್‌ ನಾಯರ್‌, ಜಿಮ್ಮಿ ನೀಶಮ್‌, ಸರ್ಫರಾಜ್‌ ಖಾನ್‌, ಕೃಷ್ಣಪ್ಪ ಗೌತಮ್‌, ಮೊಹಮ್ಮದ್‌ ಶಮಿ, ಶೇಲ್ಡನ್‌ ಕಾರ್ಟ್ರೇಲ್‌, ರವಿ ಬಿಷ್ಣೋಯಿ

  ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌ (ವಿಕೆಟ್‌ ಕೀಪರ್‌), ಸೂರ್ಯಕುಮಾರ್ ಯಾದವ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ಕೀರನ್‌ ಪೊಲಾರ್ಡ್‌, ಕೃಣಾಲ್‌ ಪಾಂಡ್ಯ, ಜೇಮ್ಸ್‌ ಪ್ಯಾಟಿನ್ಸನ್‌, ರಾಹುಲ್‌ ಚಹಾರ್‌, ಟ್ರೆಂಟ್‌ ಬೌಲ್ಟ್‌, ಜಸ್‌ಪ್ರೀತ್‌ ಬೂಮ್ರಾ 

 • 07:06 pm

  ಕಿಂಗ್ಸ್‌ ಇಲವೆನ್‌ನಲ್ಲಿ ಒಂದು ಬದಲಾವಣೆ

  ಮುಂಬೈ ಇಂಡಿಯನ್ಸ್‌ ತಂಡ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಮುನ್ನಡೆಸಿದೆ.

  ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಎಂ.ಅಶ್ವಿನ್‌ ಬದಲು ಕೃಷ್ಣಪ್ಪ ಗೌತಮ್‌ ತಂಡ ಸೇರಿಕೊಂಡಿದ್ದಾರೆ.

 • 07:04 pm

  ಟಾಸ್‌ ಗೆದ್ದ ಪಂಜಾಬ್ ಬೌಲಿಂಗ್‌ ಆಯ್ಕೆ

  ಟಾಸ್‌ ಗೆದ್ದ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ನಾಯಕ ಕೆಎಲ್‌ ರಾಹುಲ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.