ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Match Highlights: ಹೋರಾಡಿ ಸೋತ ಪಂಜಾಬ್‌; ಮುಂಬೈಗೆ ರೋಚಕ ಜಯ

Published 19 ಏಪ್ರಿಲ್ 2024, 5:22 IST
Last Updated 19 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ಮುಲ್ಲನಪುರ: ಸೂರ್ಯಕುಮಾರ್‌ ಯಾದವ್‌ ಅವರ ಮಿಂಚಿನ ಬ್ಯಾಟಿಂಗ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್‌ನ ರೋಚಕ ಹಣಾಹಣಿಯಲ್ಲಿ 9 ರನ್‌ಗಳಿಂದ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮಣಿಸಿತು.

ಮಹಾರಾಜ ಯಾದವೇಂದ್ರಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೂರ್ಯಕುಮಾರ್‌ ಅವರ ಆಟದ ಬಲದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 192 ರನ್ ಕಲೆ ಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್‌ ತಂಡ 9 ರನ್‌ಗಳಿಂದ ಸೋಲು ಕಂಡಿತು.

ಪಂದ್ಯದ ಹೈಲೈಟ್ಸ್‌...

  • ಸೂರ್ಯ ಕುಮಾರ್‌ ಯಾದವ್‌ ಮಿಂಚಿನ ಅರ್ಧಶತಕ ಗಳಿಸಿದರು. ಅವರು 53 ಎಸೆತಗಳಲ್ಲಿ 78 ರನ್‌ ಹೊಡೆದರು.

  • ರೋಹಿತ್ ಮೂರು ಸಿಕ್ಸರ್, ಎರಡು ಬೌಂಡರಿಗಳಿದ್ದ 36 ರನ್ ಗಳಿಸಿದರು.

  • ಪಂಜಾಬ್‌ ಕೇವಲ 14 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

  • ನಾಯಕ ಸ್ಯಾಮ್ ಕರನ್ (6), ಪ್ರಭಸಿಮ್ರನ್ ಸಿಂಗ್ (0), ರಿಲಿ ರುಸೊ (1) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (1) ನಿರಾಸೆ ಮೂಡಿಸಿದರು. ನಂತರ ಬಂದ ಹರಪ್ರೀತ್‌ ಸಿಂಗ್‌ (13) ಮತ್ತು ಜಿತೇಶ್‌ ಶರ್ಮಾ (9) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

  • ಪಂಜಾಬ್‌ ಸಂಕಷ್ಟದಲ್ಲಿದ್ದಾಗ ಶಶಾಂಕ್‌ ಸಿಂಗ್‌, ಅಶುತೋಷ್‌ ಶರ್ಮಾ ಮತ್ತೊಮ್ಮೆ ಪಂಜಾಬ್‌ನ ಹೋರಾಟಕ್ಕೆ ನೆರವಾದರೂ ತಂಡ ಕೊನೆಯ ಹಂತದಲ್ಲಿ ಸೋಲು ಕಂಡಿತು.

  • ಪಂಜಾಬ್‌ ಪರವಾಗಿ ಶಶಾಂಕ್‌ ಸಿಂಗ್‌ 41 ರನ್‌, ಅಶುತೋಷ್‌ ಶರ್ಮಾ 61 ಗಳಿಸಿದರು.

  • ಮುಂಬೈ ಪರ ಜೆರಾಲ್ಡ್‌ ಮತ್ತು ಬೂಮ್ರಾ ತಲಾ ಮೂರು ವಿಕೆಟ್‌ ಪಡೆದರು. ಇವರೊಂದಿಗೆ ಹಾರ್ದಿಕ್‌ ಪಾಂಡ್ಯ, ಶ್ರೇಯಸ್‌ ಗೋಪಾಲ್‌ ಮತ್ತು ಆಕಾಶ್‌ ಮಧ್ವಲ್ ತಲಾ ಒಂದು ವಿಕೆಟ್‌ ಗಳಿಸಿದರು.

  • ಪಂಜಾಬ್‌ ಪರ ಹರ್ಷಲ್ ಪಟೇಲ್ 3, ಸ್ಯಾಮ್ ಕರನ್ 2, ಕಗಿಸೊ ರಬಾಡ 1 ವಿಕೆಟ್‌ ಪಡೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT