ದಿ ಹೇಗ್, ನೆದರ್ಲೆಂಡ್ಸ್: ಇಟಲಿ ಕ್ರಿಕೆಟ್ ತಂಡವು ಇದೇ ಮೊದಲ ಸಲ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವತ್ತ ದಾಪುಗಾಲಿಟ್ಟಿದೆ.

ಬುಧವಾರ ಇಲ್ಲಿ ನಡೆದ ಟಿ20 ವಿಶ್ವಕಪ್ ಯುರೋಪ್ ವಲಯ ಕ್ವಾಲಿಫಿಕೇಷನ್ ಟೂರ್ನಿಯ ಪಂದ್ಯದಲ್ಲಿ 12 ರನ್ಗಳಿಂದ ಸ್ಕಾಟ್ಲೆಂಡ್ ವಿರುದ್ಧ ಜಯಿಸಿತು. ಇದರೊಂದಿಗೆ ತಂಡವು ಪಾಯಿಂಟ್ ಪಟ್ಟಿಯಲ್ಲಿ ಒಟ್ಟು 5 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಒಟ್ಟು 3 ಪಂದ್ಯಗಳನ್ನು ಆಡಿ 2ರಲ್ಲಿ ಜಯಿಸಿದೆ. ಇನ್ನೊಂದರಲ್ಲಿ ಫಲಿತಾಂಶ ಬಂದಿಲ್ಲ.

ಈ ಗುಂಪಿನಲ್ಲಿ ಇಟಲಿ, ಜರ್ಸಿ, ಸ್ಕಾಟ್ಲೆಂಡ್, ನೆದರ್ಲೆಂಡ್ಸ್ ಹಾಗೂ ಗರ್ನೆಸಿಯಾ ತಂಡಗಳು ಇವೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಇಟಲಿ ತಂಡವು ಬ್ಯಾಟಿಂಗ್ ಮಾಡಿತು. 20 ಓವರ್ಗಳಲ್ಲಿ 6ಕ್ಕೆ 167 ರನ್ ಗಳಿಸಿತು. ತಂಡದ ಆರಂಭಿಕ ಬ್ಯಾಟರ್ ಎಮಿಲೊ ಗೇ (50; 21ಎ) ಅರ್ಧಶತಕ ಗಳಿಸಿದರು. ಹ್ಯಾರಿ ಮೆನೆಟಿ (38; 38ಎ) ಹಾಗೂ ಗ್ರ್ಯಾಂಡ್ ಸ್ಟುವರ್ಟ್ (ಔಟಾಗದೇ 44) ಉತ್ತಮ ಕಾಣಿಕೆ ನೀಡಿದರು. ಸ್ಕಾಟ್ಲೆಂಡ್ನ ಮೈಕೆಲ್ ಲೀಸ್ಕ್ (18ಕ್ಕೆ3) ಉತ್ತಮ ಬೌಲಿಂಗ್ ಮಾಡಿದರು.

ಗುರಿ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡಕ್ಕೆ 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 155 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಜಾರ್ಜಮ್ ಮುನ್ಸಿ (72; 61ಎ) ಅರ್ಧಶತಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.