ಸೋಮವಾರ, ಆಗಸ್ಟ್ 26, 2019
21 °C

ಪಂದ್ಯ ಆರಂಭಿಸಿ ಸ್ಥಗಿತಗೊಳಿಸುವುದು ಸರಿಯಲ್ಲ: ಕೊಹ್ಲಿ

Published:
Updated:
Prajavani

ಪ್ರಾವಿಡೆನ್ಸ್, ಗಯಾನ: ಪಂದ್ಯಗಳನ್ನು ಆರಂಭಿಸಿದ ನಂತರ ಸ್ಥಗಿತಗೊಳಿಸುವುದು ಕ್ರಿಕೆಟ್‌ನಲ್ಲಿ ಅತ್ಯಂತ ಬೇಸರದ ವಿಷಯ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಗುರುವಾರ ಇಲ್ಲಿ ನಡೆದ ಪಂದ್ಯವನ್ನು ಮಳೆಯ ಕಾರಣದಿಂದ ಅರ್ಧಕ್ಕೇ ಸ್ಥಗಿತಗೊಳಿಸಲಾಗಿತ್ತು. ಒಂದೂವರೆ ತಾಸು ತಡವಾಗಿ ಆರಂಭಗೊಂಡ ಪಂದ್ಯವನ್ನು ಮೊದಲು 43 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ನಂತರ 34 ಓವರ್‌ಗಳಿಗೆ ಇಳಿಸಲಾಯಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆತಿಥೇಯರು 13 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 54 ರನ್‌ ಗಳಿಸಿದ್ದಾಗ ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೊಹ್ಲಿ ಹೀಗೆ ಮಾಡುವುದರಿಂದ ಆಟಗಾರರಿಗೆ ಗಾಯಗಳಾಗುವ ಸಾಧ್ಯತೆಗಳು ಇವೆ. ಹೆಚ್ಚು ಬಾರಿ ಪಂದ್ಯ ಸ್ಥಗಿತಗೊಳಿಸಿದರೆ ಹೆಚ್ಚು ಗಾಯಗಳಾಗುವ ಸಂಭವ ಇದೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದರು.

Post Comments (+)