ಸೋಮವಾರ, ಜೂನ್ 1, 2020
27 °C

ಬೃಹತ್‌‌ ಕ್ರೀಡಾಂಗಣ ನಿರ್ಮಾಣಕ್ಕೆ ಜಯವರ್ಧನೆ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: ದೇಶದಲ್ಲಿ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಚಿಂತನೆ ನಡೆಸಿರುವ ಶ್ರೀಲಂಕಾ ಸರ್ಕಾರದ ಕ್ರಮವನ್ನು ಹಿರಿಯ ಕ್ರಿಕೆಟಿಗ ಮಹೇಲಾ ಜಯವರ್ಧನೆ ವಿರೋಧಿಸಿದ್ದಾರೆ. ‘ಈಗಿರುವ ಅಂಗಣಗಳೇ ಸೂಕ್ತವಾಗಿ ಬಳಕೆಯಾಗುತ್ತಿಲ್ಲ’ ಎಂದು ಅವರು ಕಿಡಿ ಕಾರಿದ್ದಾರೆ.

‘ಶ್ರೀಲಂಕಾ ಕ್ರಿಕೆಟ್‌ ಮಂಡಳಿಯ (ಎಸ್‌ಎಲ್‌ಸಿ) ಸಹಯೋಗದೊಂದಿಗೆ ಹೋಮಗಾಮ ಪಟ್ಟಣದ ದಿಯಾಗಮ ಎಂಬಲ್ಲಿ 26 ಎಕರೆ ಪ್ರದೇಶದಲ್ಲಿ 60,000 ಆಸನ ಸಾಮರ್ಥ್ಯದ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಶ್ರೀಲಂಕಾ ಸರ್ಕಾರ ಭಾನುವಾರ ಪ್ರಕಟಿಸಿತ್ತು.

‘ನಮ್ಮಲ್ಲಿ ಈಗ ಇರುವ ಕ್ರೀಡಾಂಗಣಗಳಲ್ಲೇ ಸಾಕಷ್ಟು ಅಂತರರಾಷ್ಟ್ರೀಯ ಹಾಗೂ ಪ್ರಥಮದರ್ಜೆ ಪಂದ್ಯಗಳು ನಡೆಯುತ್ತಿಲ್ಲ. ಮತ್ತೊಂದು ಅಂಗಣ ಬೇಕಾ?’ ಎಂದು ಜಯವರ್ಧನೆ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಹಾಗೂ ಸರ್ಕಾರದ ಮಾಹಿತಿ ಸಂವಹನ ತಂತ್ರಜ್ಞಾನ ಸಚಿವ ಬಂಡುಲಾ ಗುಣವರ್ಧನೆ ಅವರ ನೇತೃತ್ವದ ಸಮಿತಿಯು ಕ್ರೀಡಾಂಗಣ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿತು.

ಲಂಕಾದಲ್ಲಿ ಸದ್ಯ ಎಂಟು ಅಂತರರಾಷ್ಟ್ರೀಯ ಕ್ರೀಡಾಂಗಣಗಳಿವೆ. ಕ್ಯಾಂಡಿ, ಗಾಲೆ, ಕೊಲಂಬೊ, ಹಂಬಟೋಟ, ಡಂಬುಲಾ, ಪಲ್ಲೆಕೆಲೆ ಹಾಗೂ ಮೊರಾಟುವಾದಲ್ಲಿ ಇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು