ಬುಧವಾರ, ಆಗಸ್ಟ್ 21, 2019
28 °C
ಮೊಯಿನ್‌ ಅಲಿಗೆ ಕೊಕ್‌

ಆ್ಯಷಸ್‌ ಸರಣಿಯ 2ನೇ ಟೆಸ್ಟ್‌: ಆರ್ಚರ್‌ ಪ‍ದಾರ್ಪಣೆ  ಸಾಧ್ಯತೆ

Published:
Updated:

ಲಂಡನ್‌: ಟೆಸ್ಟ್‌ ಪದಾರ್ಪಣೆಗೆ ಕುತೂಹಲದಿಂದ ಕಾಯುತ್ತಿರುವ ವೇಗಿ ಜೋಫ್ರಾ ಆರ್ಚರ್‌, ಆ್ಯಷಸ್‌ ಸರಣಿಯ ಎರಡನೇ ಪಂದ್ಯಕ್ಕೆ ಶುಕ್ರವಾರ ಪ್ರಕಟಿಸಿರುವ 12 ಸದಸ್ಯರ ಇಂಗ್ಲೆಂಡ್‌ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ತಂಡದಿಂದ ಮೊಯಿನ್‌ ಅಲಿ ಅವರನ್ನು ಕೈಬಿಡಲಾಗಿದೆ.

ಆಸ್ಟ್ರೇಲಿಯಾ ಮೊದಲ ಟೆಸ್ಟ್‌ ಪಂದ್ಯವನ್ನು 251 ರನ್‌ಗಳಿಂದ ಗೆದ್ದುಕೊಂಡಿತ್ತು. ಪಕ್ಕೆಲುಬು ನೋವಿನಿಂದ ಮೊದಲ ಟೆಸ್ಟ್‌ನಲ್ಲಿ ಆಡಿರಲಿಲ್ಲ. ಆದರೆ ಗ್ಲಾಸ್ಟರ್‌ಷೈರ್ ವಿರುದ್ಧ ಪಂದ್ಯದಲ್ಲಿ ಅವರು ಸಸೆಕ್ಸ್‌ ಪರ 27 ರನ್ನಿಗೆ 6 ವಿಕೆಟ್‌ ಪಡೆದರಲ್ಲದೇ, ಬಿರುಸಿನ ಅರ್ಧ ಶತಕ ಬಾರಿಸಿದ್ದರು.

ತಂಡ ಇಂತಿದೆ: ಜೋ ರೂಟ್‌ (ನಾಯಕ), ರೋರಿ ಬರ್ನ್ಸ್‌, ಜೇಸನ್‌ ರಾಯ್‌, ಜೋ ಡೆನ್ಲಿ, ಜೋಸ್‌ ಬಟ್ಲರ್‌, ಜಾನಿ ಬೇಸ್ಟೊ, ಬೆಸ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌, ಜೊಫ್ರಾ ಆರ್ಚರ್‌, ಸ್ಟುವರ್ಟ್‌ ಬ್ರಾಡ್‌, ಜಾಕ್‌ ಲೀಚ್‌ ಮತ್ತು ಸ್ಯಾಮ್‌ ಕರನ್‌.

Post Comments (+)