ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗರ ಧೋರಣೆ ಟೀಕಿಸಿದ ಕಪಿಲ್ ದೇವ್

Published 1 ಆಗಸ್ಟ್ 2023, 5:20 IST
Last Updated 1 ಆಗಸ್ಟ್ 2023, 5:20 IST
ಅಕ್ಷರ ಗಾತ್ರ

ಬೆಂಗಳೂರು: ಈ ಕಾಲದ ಕ್ರಿಕೆಟಿಗರಲ್ಲಿ ಅಪಾರ ಆತ್ಮವಿಶ್ವಾಸವಿದೆ. ಅದು ಉತ್ತಮವಾದ ಗುಣ. ಆದರೆ ತಮಗೆಲ್ಲವೂ ತಿಳಿದಿದೆ ಎಂಬ ನಕಾರಾತ್ಮಕ ಧೋರಣೆ ಇದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

‘ಐಪಿಎಲ್ ಆರಂಭವಾದಾಗಿನಿಂದ ಅಪಾರ ಹಣ, ಹೆಸರು ಗಳಿಸುತ್ತಿರುವ ಕ್ರಿಕೆಟಿಗರಲ್ಲಿ ದುರಹಂಕಾರ ಬೆಳೆಯುತ್ತಿದೆ.  ತಾವೇ  ಎಲ್ಲ ಬಲ್ಲವರು ಎಂಬ ಧೋರಣೆ ಹೊಂದಿದ್ದಾರೆ. ತಾವು ಇನ್ನೂ ಕಲಿಯುವುದಿದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸುನಿಲ್ ಗಾವಸ್ಕರ್ ಅವರಂತಹ ದಿಗ್ಗಜರು ಲಭ್ಯರಿದ್ದರೂ ಅವರಿಂದ ಸಲಹೆ ಪಡೆಯುವ ಸೌಜನ್ಯವೂ ಕೆಲವರಿಗೆ ಇಲ್ಲ. ಗಾವಸ್ಕರ್ 50 ಕ್ರಿಕೆಟ್‌ ಋತುಗಳನ್ನು ಕಂಡಿರುವ ಅನುಭವಿ. ಅವರ ಸಲಹೆಯು ಅಮೂಲ್ಯವಾದದ್ದು‘ ಎಂದು ಕಪಿಲ್   'ದ ವೀಕ್‘ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸಂದರ್ಶನವು ಸೋಮವಾರ ಸಾಮಾಜಿ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಜನರ ಗಮನ ಸೆಳೆದಿದೆ.

ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಅವರು ಹಲವಾರು ಬಾರಿ ತಮ್ಮ ಬ್ಯಾಟಿಂಗ್ ಸುಧಾರಣೆಗೆ ತಮ್ಮ ಬಳಿ ಸಲಹೆ ಪಡೆಯುತ್ತಿದ್ದರು. ಆದರೆ ಈಗಿನವರು ಆ ರೀತಿಯಲ್ಲ ಎಂದು ಇತ್ತೀಚೆಗೆ ಗಾವಸ್ಕರ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT