ಬುಧವಾರ, ಜನವರಿ 22, 2020
25 °C

ದಾಂಪತ್ಯ ಜೀವನಕ್ಕೆ ಗೌತಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರು ತಮ್ಮ ಬಹುಕಾಲದ ಗೆಳತಿ ಅರ್ಚನಾ ಸುಂದರ್ ಅವರನ್ನು ಮದುವೆಯಾದರು. ಧಣಿಸಂದ್ರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಿತು.

ಉಭಯ ಕುಟುಂಬಗಳ ಸದಸ್ಯರು, ಕೆಎಸ್‌ಸಿಎ ಪದಾಧಿಕಾರಿಗಳು ಮತ್ತು ಕರ್ನಾಟಕ ತಂಡದ ಆಟಗಾರರು ಈ ಸಂದರ್ಭದಲ್ಲಿ ಗೌತಮ್ ದಂಪತಿಗೆ ಶುಭ ಹಾರೈಸಿದರು.

ಹೋದ ಭಾನುವಾರ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಯ ಫೈನಲ್‌ನಲ್ಲಿ ಕೊನೆಯ ಓವರ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಗೌತಮ್ ಕರ್ನಾಟಕ ತಂಡದ ಗೆಲುವಿಗೆ ಮುಖ್ಯ ಕಾರಣರಾಗಿದ್ದರು. ಡಿಸೆಂಬರ್ 9ರಂದು ದಿಂಡಿಗಲ್‌ನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಅವರು ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು