ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಟೆಸ್ಟ್‌ ಸರಣಿ: ವೆಸ್ಟ್‌ ಇಂಡೀಸ್‌ನ ಬೌಲರ್‌ ಕೆಮರ್‌ ರೋಚ್‌ ಇಲ್ಲ

Last Updated 2 ಅಕ್ಟೋಬರ್ 2018, 15:57 IST
ಅಕ್ಷರ ಗಾತ್ರ

ರಾಜ್‌ಕೋಟ್‌: ವೆಸ್ಟ್‌ ಇಂಡೀಸ್‌ ತಂಡದ ವೇಗದ ಬೌಲರ್‌ ಕೆಮರ್‌ ರೋಚ್‌, ಭಾರತದ ಎದುರಿನ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

‘ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಬಾರ್ಬಡೀಸ್‌ಗೆ ತೆರಳಿರುವ ಕೆಮರ್‌, ಇನ್ನೂ ಹಿಂತಿರುಗಿಲ್ಲ. ಮುಂದಿನ ವಾರದ ವೇಳೆಗೆ ಅವರು ತಂಡ ಸೇರಿಕೊಳ್ಳಲಿದ್ದಾರೆ’ ಎಂದು ವೆಸ್ಟ್‌ ಇಂಡೀಸ್‌ ತಂಡದ ಕೋಚ್‌ ಸ್ಟುವರ್ಟ್‌ ಲಾ ತಿಳಿಸಿದ್ದಾರೆ.

‘ಕೆಮರ್‌, ಅನುಭವಿ ವೇಗದ ಬೌಲರ್‌. ಮೊದಲ ಟೆಸ್ಟ್‌ನಲ್ಲಿ ಅವರ ಅನುಪಸ್ಥಿತಿ ಖಂಡಿತವಾಗಿಯೂ ಕಾಡಲಿದೆ. ಶಾನನ್‌ ಗೇಬ್ರಿಯಲ್‌, ನಾಯಕ ಜೇಸನ್‌ ಹೋಲ್ಡರ್‌, ಕೀಮೊ ಪಾಲೊ ಮತ್ತು ಶೆರ್ಮನ್‌ ಲೂಯಿಸ್‌ ಅವರು ತಂಡದ ವೇಗದ ಬೌಲಿಂಗ್‌ನ ಅಸ್ತ್ರವಾಗಿದ್ದಾರೆ. ಇವರು ಉತ್ತಮ ಸಾಮರ್ಥ್ಯ ತೋರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ವಿಂಡೀಸ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಗುರುವಾರದಿಂದ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT