ಶುಕ್ರವಾರ, ಫೆಬ್ರವರಿ 26, 2021
19 °C

ಕಿವೀಸ್ ಬೌಲರ್ ಟಾಡ್ ಆ್ಯಸ್ಟ್ಲ್ ನಿವೃತ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ಟಾಡ್ ಆ್ಯಸ್ಟ್ಲ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸೀಮಿತ ಓವರ್‌ಗಳಲ್ಲಿ ಅವರು ಮುಂದುವರಿಯಲಿದ್ದಾರೆ.

33 ವರ್ಷದ ಟಾಡ್ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 98 ರನ್‌ ಗಳಿಸಿದ್ದು ಏಳು ವಿಕೆಟ್‌ಗಳನ್ನು ಗಳಿಸಿದ್ದಾರೆ. ಲೆಗ್‌ಸ್ಪಿನ್ನರ್ ಟಾಡ್ ಅವರು ದೇಶಿ ಕ್ರಿಕೆಟ್‌ನಲ್ಲಿ ಕ್ಯಾಂಟರ್‌ಬರಿ ತಂಡವನ್ನು ಪ್ರತಿನಿಧಿಸುತ್ತಿದ್ದರು. ಒಟ್ಟು 119 ಪಂದ್ಯಗಳಲ್ಲಿ  ಆಡಿ, 334 ವಿಕೆಟ್‌ಗಳನ್ನು ಗಳಿಸಿದ್ದಾರೆ. ನಾಲ್ಕು ಸಾವಿರ ರನ್‌ ಕೂಡ ಗಳಿಸಿದ್ದಾರೆ.

‘ಟೆಸ್ಟ್ ಕ್ರಿಕೆಟ್ ಆಡುವುದು ನನ್ನ ಬಹಳ ಕಾಲದ ಕನಸಾಗಿತ್ತು. ಅದು ನ್ಯೂಜಿಲೆಂಡ್‌ ತಂಡಕ್ಕೆ ಆಡುವ ಮೂಲಕ ನನಸಾಗಿದೆ. ಆದರೆ ಈ ಹಂತದಲ್ಲಿ ಎಲ್ಲ ಮಾದರಿಗಳಲ್ಲಿಯೂ ಉತ್ತಮವಾಗಿ ಆಡುವುದು ಸವಾಲಿನ ಕೆಲಸ. ಆದ್ದರಿಂದ ದೀರ್ಘ ಮಾದರಿಗೆ ವಿದಾಯ ಹೇಳಿ. ಸೀಮಿತ ಓವರ್‌ಗಳ ಕ್ರಿಕೆಟ್‌ ಮೇಲೆ ಗಮನ ಹರಿಸುತ್ತೇನೆ’ ಎಂದು ಟಾಡ್ ಹೇಳಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು