ಕ್ರಿಕೆಟ್‌: ಸೈಯದ್‌ ಕ್ರಿಕೆಟರ್ಸ್‌ಗೆ ಪ್ರಶಸ್ತಿ

7

ಕ್ರಿಕೆಟ್‌: ಸೈಯದ್‌ ಕ್ರಿಕೆಟರ್ಸ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಲವನೀತ್‌ ಸಿಸೋಡಿಯಾ (66 ರನ್‌) ಅರ್ಧಶತಕ ಮತ್ತು ಮನೋಜ್‌ ಭಾಂಡಗೆ (16ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಸರ್‌ ಸೈಯದ್‌ ಕ್ರಿಕೆಟರ್ಸ್‌ ತಂಡದವರು ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಗುರುವಾರ ನಡೆದ ಫೈನಲ್‌ನಲ್ಲಿ ಸೈಯದ್‌ ಕ್ರಿಕೆಟರ್ಸ್‌ 8 ವಿಕೆಟ್‌ಗಳಿಂದ ಸೋಷಿಯಲ್‌ ಕ್ರಿಕೆಟರ್ಸ್ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಸೋಷಿಯಲ್‌ ಕ್ರಿಕೆಟರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131ರನ್‌ ದಾಖಲಿಸಿತು. ಈ ತಂಡದ ವಿಜಯಕುಮಾರ್‌ ಪಾಟೀಲ ಮತ್ತು ಎಸ್‌.ರಕ್ಷಿತ್‌ ಉತ್ತಮ ಆಟ ಆಡಿದರು.

132ರನ್‌ಗಳ ಗುರಿಯನ್ನು ಸೈಯದ್‌ ಕ್ರಿಕೆಟರ್ಸ್‌ 16.2 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು. ವಿಕೆಟ್‌ ಕೀಪರ್‌ ಲವನೀತ್‌ ಮಿಂಚಿನ ಬ್ಯಾಟಿಂಗ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಸೋಷಿಯಲ್‌ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 131 (ವಿಜಯಕುಮಾರ್‌ ಪಾಟೀಲ 31, ಎಸ್‌.ರಕ್ಷಿತ್‌ 45; ಮನೋಜ್‌ ಭಾಂಡಗೆ 16ಕ್ಕೆ4). ಸರ್‌ ಸೈಯದ್‌ ಕ್ರಿಕೆಟರ್ಸ್‌: 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 132 (ಲವನೀತ್‌ ಸಿಸೋಡಿಯಾ 66, ಪರೀಕ್ಷಿತ್‌ ಶೆಟ್ಟಿ 38, ಮೇಲು ಕ್ರಾಂತಿಕುಮಾರ್‌ ಔಟಾಗದೆ 21). ಫಲಿತಾಂಶ: ಸೈಯದ್‌ ಕ್ರಿಕೆಟರ್ಸ್‌ಗೆ 8 ವಿಕೆಟ್‌ ಗೆಲುವು ಹಾಗೂ ಪ್ರಶಸ್ತಿ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !