ಜೈಪುರ: ರಾಜಸ್ಥಾನ ರಾಯಲ್ಸ್ ತಂಡವು ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯಿಸಲು ಅಸ್ಸಾಂ ಹುಡುಗ ರಿಯಾನ್ ಪರಾಗ್ ಬ್ಯಾಟಿಂಗ್ ಕಾರಣವಾಗಿತ್ತು.

ಆದರೆ ಈ ಪಂದ್ಯಕ್ಕೂ ಮುನ್ನ ಮೂರು ದಿವಸ ಅವರು ಹಾಸಿಗೆ ಬಿಟ್ಟು ಏಳದಂತಹ ಪರಿಸ್ಥಿತಿಯಲ್ಲಿದ್ದರಂತೆ. ಚೇತರಿಸಿಕೊಳ್ಳಲು ನೋವುನಿವಾರಕ ಮಾತ್ರೆಗಳನ್ನು ಸೇವಿಸಿದ್ದರಂತೆ.

‘ಈ ಪಂದ್ಯಕ್ಕೆ ಮರಳಲು ಬಹಳಷ್ಟು ಶ್ರಮಪಟ್ಟೆ. ಮೂರು ದಿನಗಳ ಕಾಲ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದೆ. ಮಾತ್ರೆಗಳು ಹಾಗೂ ನಿರಂತರ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡು ಅಭ್ಯಾಸ ಮಾಡಿದೆ. ಕಣಕ್ಕಿಳಿದು ತಂಡದ ಗೆಲುವಿಗೆ ನೆರವಾಗಿದ್ದು ಸಂತಸ ತಂದಿದೆ’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಅಮ್ಮ ಇಲ್ಲಿಯೇ ಇದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನನ್ನ ಏಳಿಗೆಗಾಗಿ ಬಹಳಷ್ಟು ಶ್ರಮಪಟ್ಟಿದ್ದಾರೆ’ ಎಂದರು.

22 ವರ್ಷದ ರಿಯಾನ್ ಹೋದ ವರ್ಷ ಬ್ಯಾಟಿಂಗ್‌ನಲ್ಲಿ ಅಷ್ಟೇನೂ ಚೆನ್ನಾಗಿ ಆಡಿರಲಿಲ್ಲ. ಈ ಬಾರಿ ಎರಡೂ ಪಂದ್ಯಗಳಲ್ಲಿ ಉತ್ತಮ ಅಟವಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸ್ಕೋರ್ (ಅಜೇಯ 84) ದಾಖಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.