ಮಂಗಳವಾರ, ಆಗಸ್ಟ್ 20, 2019
27 °C
local basketball

ಬ್ಯಾಸ್ಕೆಟ್‌ಬಾಲ್‌: ಸದರ್ನ್‌ ಬ್ಲೂಸ್‌ ಜಯಭೇರಿ

Published:
Updated:

ಬೆಂಗಳೂರು: ದರ್ಶನ್‌ ಅವರ ಅಮೋಘ ಆಟದ ಬಲದಿಂದ ಸದರ್ನ್‌ ಬ್ಲೂಸ್‌ ತಂಡ ರಾಜ್ಯ ಜೂನಿಯರ್‌ (18 ವರ್ಷದೊಳಗಿನವರು) ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಣಾಹಣಿಯಲ್ಲಿ ಸದರ್ನ್‌ ಬ್ಲೂಸ್‌ 73–55 ಪಾಯಿಂಟ್ಸ್‌ನಿಂದ ಡಿಆರ್‌ಡಿಒ ಎದುರು ಗೆದ್ದಿತು.

ಸದರ್ನ್‌ ಬ್ಲೂಸ್‌, ಮೊದಲಾರ್ಧದಲ್ಲಿ 21–19ರಿಂದ ಹಿನ್ನಡೆ ಕಂಡಿತ್ತು. ಹೀಗಿದ್ದರೂ ಈ ತಂಡದ ಆಟಗಾರರು ಎದೆಗುಂದಲಿಲ್ಲ. ದ್ವಿತೀಯಾರ್ಧದಲ್ಲಿ ನಿರಂತರವಾಗಿ ಚೆಂಡನ್ನು ‘ಬ್ಯಾಸ್ಕೆಟ್‌’ ಮಾಡಿ ಪಾಯಿಂಟ್ಸ್‌ ಬೇಟೆಯಾಡಿದರು. ದರ್ಶನ್‌ 32 ಪಾಯಿಂಟ್ಸ್ ಕಲೆಹಾಕಿ ಮಿಂಚಿದರು.

ಡಿಆರ್‌ಡಿಒ ತಂಡದ ಶ್ರೇಯಸ್‌ 18 ಪಾಯಿಂಟ್ಸ್‌ ಗಳಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

ಇನ್ನೊಂದು ಪಂದ್ಯದಲ್ಲಿ ಎನ್‌ಜಿವಿ ಕ್ಲಬ್‌ 67–65ರಲ್ಲಿ ವಿವೇಕ್ಸ್‌ ಕ್ಲಬ್‌ ತಂಡವನ್ನು ಮಣಿಸಿತು.

ಎನ್‌ಜಿವಿ ಕ್ಲಬ್‌ನ ವ್ಯಾಸ್‌ 33 ಪಾಯಿಂಟ್ಸ್‌ ಗಳಿಸಿದರೆ, ವಿವೇಕ್ಸ್‌ ತಂಡದ ಜೆಫೆರ್ಯಾನ್‌ 27 ಪಾಯಿಂಟ್ಸ್‌ ಕಲೆಹಾಕಿದರು.

ಇತರ ಪಂದ್ಯಗಳಲ್ಲಿ ಪಟ್ಟಾಭಿರಾಮ ಕ್ಲಬ್‌ 53–52ರಲ್ಲಿ ಪಿಪಿಸಿ ಎದುರೂ, ಕೋರಮಂಗಲ ಕ್ಲಬ್‌ 68–39ರಲ್ಲಿ ಕನಕ ಕೋಲಾರ ಎದುರೂ, ಯಂಗ್‌ ಬುಲ್ಸ್‌ 38–30ರಲ್ಲಿ ಸಿಜೆಸಿ ವಿರುದ್ಧವೂ, ವಿಮಾನಪುರ ಕ್ಲಬ್‌ 46–32ರಲ್ಲಿ ಮೈಸೂರು ಕ್ಲಬ್‌ ಎದುರೂ, ರಾಜಕುಮಾರ್‌ ಕ್ಲಬ್‌ 52–17ರಲ್ಲಿ ಪಿಣಕಿಣಿ ಕ್ಲಬ್‌ ಮೇಲೂ, ಮಲ್ಲಸಜ್ಜನ ಧಾರವಾಡ 43–17ರಲ್ಲಿ ಮೌಂಟ್ಸ್‌ ಕ್ಲಬ್‌ ವಿರುದ್ಧವೂ, ಸಾಯ್‌ ಧಾರವಾಡ 60–25ರಲ್ಲಿ ಬೆಂಗಳೂರು ಸ್ಪೋರ್ಟಿಂಗ್‌ ಎದುರೂ, ಡಿವೈಇಎಸ್‌ ಬೆಂಗಳೂರು 59–19ರಲ್ಲಿ ಸಹಕಾರನಗರ ಕ್ಲಬ್‌ ಮೇಲೂ ಗೆದ್ದವು.

ಬಾಲಕಿಯರ ವಿಭಾಗದ ಪಂದ್ಯದಲ್ಲಿ ಧಾರವಾಡದ ರೋವರ್ಸ್‌ ಕ್ಲಬ್‌ 48–27ರಲ್ಲಿ ಮೈಸೂರಿನ ನ್ಯಾಷನಲ್ಸ್‌ ಕ್ಲಬ್‌ ತಂಡವನ್ನು ಪರಾಭವಗೊಳಿಸಿತು. ವಿಜಯಿ ತಂಡದ ವೈಷ್ಣವಿ 18 ಪಾಯಿಂಟ್ಸ್‌ ಕಲೆಹಾಕಿದರು. ನ್ಯಾಷನಲ್ಸ್‌ ತಂಡದ ಹರ್ಷಿಣಿ 12 ಪಾಯಿಂಟ್ಸ್‌ ಗಳಿಸಿದರು.

ಇನ್ನೊಂದು ಹೋರಾಟದಲ್ಲಿ ಸದರ್ನ್‌ ಬ್ಲೂಸ್‌ 58–43ರಲ್ಲಿ ಬಳ್ಳಾರಿಯ ವೈಸಿಬಿಸಿ ಎದುರು ಗೆದ್ದಿತು. ಸದರ್ನ್‌ ಬ್ಲೂಸ್ ತಂಡದ ಪಾವನಿ 34 ಪಾಯಿಂಟ್ಸ್‌ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವೈಸಿಬಿಸಿ ತಂಡದ ಅಂಕಿತಾ 18 ಪಾಯಿಂಟ್ಸ್‌ ಕಲೆಹಾಕಿದರು.

Post Comments (+)