ದುಬೈ: ಭಾರತದ ಸ್ಮೃತಿ ಮಂದಾನ, ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟ್ಸ್ವುಮನ್ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡಿದ್ದಾರೆ.

23 ವರ್ಷ ವಯಸ್ಸಿನ ಮಂದಾನ ಅವರು ಗಾಯದ ಕಾರಣ ತವರಿನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಆಡಿರಲಿಲ್ಲ. ಹೀಗಾಗಿ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ.

ನ್ಯೂಜಿಲೆಂಡ್ನ ಆ್ಯಮಿ ಸಟ್ಟರ್ಥ್ವೈಟ್ ಅವರು ಅಗ್ರಪಟ್ಟಕ್ಕೆ ಏರಿದ್ದಾರೆ.

ಮಿತಾಲಿ ರಾಜ್ ಏಳನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಹರ್ಮನ್ಪ್ರೀತ್ ಕೌರ್ ಅವರು 17ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ.

ಬೌಲರ್ಗಳ ವಿಭಾಗದಲ್ಲಿ ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ ಮತ್ತು ಪೂನಮ್ ಯಾದವ್ ಅವರು ಕ್ರಮವಾಗಿ ಆರು, ಎಂಟು ಮತ್ತು ಒಂಬತ್ತನೇ ಸ್ಥಾನಗಳಿಗೆ ಇಳಿಕೆ ಕಂಡಿದ್ದಾರೆ.

ಆಸ್ಟ್ರೇಲಿಯಾದ ಜೆಸ್ ಜೊನಾಸನ್ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದ್ದಾರೆ.

ಆಲ್ರೌಂಡರ್ಗಳ ವಿಭಾಗದಲ್ಲಿ ದೀಪ್ತಿ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಶಿಖಾ ಪಾಂಡೆ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಜೂಲನ್ ಗೋಸ್ವಾಮಿ 13ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.