ದುಬೈ: ಭಾರತದ ಉಪನಾಯಕಿ ಸ್ಮೃತಿ ಮಂದಾನಾ, ಐಸಿಸಿ ಮಹಿಳಾ ಏಕದಿನ ಮತ್ತು ಟಿ20 ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡೀಸ್ ಎದುರಿನ ಸರಣಿಗಳಲ್ಲಿ ಸೊಗಸಾದ ಆಟವಾಡಿದ ಫಲವಾಗಿ ಅವರಿಗೆ ಬಡ್ತಿ ಲಭಿಸಿದೆ.

ಎಡಗೈ ಬ್ಯಾಟರ್ ಮಂದಾನಾ ಇತ್ತೀಚೆಗೆ ಪರ್ತ್ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ 105 ರನ್ ಮತ್ತು ತವರಿನಲ್ಲಿ ನಡೆಯುತ್ತಿರುವ ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 54 ರನ್ ಕಲೆ ಹಾಕಿದ್ದರು.

ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಬ್ಯಾಟರ್ ಅವರಾಗಿದ್ದಾರೆ. ನಾಯಕಿ ಹರ್ಮನ್ಪ್ರೀತ್ 13ನೇ ಸ್ಥಾನ ಪಡೆದಿದ್ದಾರೆ. ಜೆಮಿಮಾ ರಾಡ್ರಿಗಸ್ ಆರು ಸ್ಥಾನ ಏರಿಕೆ ಕಂಡು 15ನೇ ಸ್ಥಾನ ಮತ್ತು ಹರ್ಲಿನ್ ಡಿಯೊಲ್ ಶ್ರೇಯಾಂಕದಲ್ಲಿ ಏರಿಕೆ ಕಂಡು 64ನೇ ಸ್ಥಾನ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ದೀಪ್ತಿ ಶರ್ಮಾ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಧ್ಯಮವೇಗಿ ಅರುಂಧತಿ ರೆಡ್ಡಿ 48ನೇ ಸ್ಥಾನದಿಂದ 51ನೇ ಸ್ಥಾನಕ್ಕಿಳಿದಿದ್ದಾರೆ. ರೇಣುಕಾ ಠಾಕೂರ್ 28ನೇ ಸ್ಥಾನದಿಂದ 26ನೇ ಸ್ಥಾನಕ್ಕೆರಿದ್ದಾರೆ.

ಟಿ20 ರ್ಯಾಂಕಿಂಗ್ ವಿಭಾಗದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ ವಿಂಡೀಸ್ ವಿರುದ್ಧ 73 ರನ್ ಬಾರಿಸಿ ಆರು ಸ್ಥಾನ ಜಿಗಿದು 15ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ದೀಪ್ತಿ ಶರ್ಮಾ ಎರಡು ಸ್ಥಾನ ಏರಿಕೆ ಕಂಡು ಎರಡನೇ ಸ್ಥಾನ ಪಡೆದಿದ್ದಾರೆ. ಮಧ್ಯಮವೇಗಿ ತಿತಾಸ್ ಸಾಧು 52ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.