ದುಬೈ: ಐತಿಹಾಸಿಕ ನಿರ್ಣಯವೊಂದರಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಗಳಿಗೆ ಸಮಾನ ಬಹುಮಾನದ ಮೊತ್ತವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು(ಐಸಿಸಿ) ಘೋಷಿಸಿದೆ.

ಮುಂದಿನ ತಿಂಗಳು ಮಹಿಳಾ ಟಿ–20 ವಿಶ್ವಕಪ್ ಟೂರ್ನಿಯು ಆರಂಭವಾಗಲಿದ್ದು, ಅದರ ಬಹುಮಾನ ಮೊತ್ತವನ್ನು ಶೇ 225ರಷ್ಟು ಏರಿಕೆ ಮಾಡಲಾಗಿದೆ. ಅಂದರೆ ಒಟ್ಟು ಬಹುಮಾನದ ಮೊತ್ತ 7.95 ಮಿಲಿಯನ್ ಡಾಲರ್ಗೆ(₹66.58 ಕೋಟಿ) ಏರಿಕೆ ಮಾಡಲಾಗಿದೆ.

ಮಹಿಳಾ ಟಿ–20 ವಿಶ್ವಕಪ್ ಗೆದ್ದ ತಂಡ ಸುಮಾರು 2.34 ಮಿಲಿಯನ್ ಡಾಲರ್(₹19.59 ಕೋಟಿ) ಬಹುಮಾನ ಪಡೆಯಲಿದೆ. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಟಿ–20 ವಿಶ್ವಕಪ್ ಗೆದ್ದಿದ್ದ ಆಸ್ಟ್ರೇಲಿಯಾ ತಂಡ 1 ಮಿಲಿಯನ್ ಡಾಲರ್(₹8.37 ಕೋಟಿ) ಬಹುಮಾನ ಪಡೆದಿತ್ತು. ಈಗ ಬಹುಮಾನದ ಮೊತ್ತೆ ಶೇ 134ರಷ್ಟು ಹೆಚ್ಚಳವಾಗಿದೆ.

ಈ ವರ್ಷ ಟಿ–20 ವಿಶ್ವಕಪ್ ಗೆದ್ದ ಭಾರತ ಪುರುಷರ ತಂಡವು 2.45 ಮಿಲಿಯನ್ ಡಾಲರ್(₹20 ಕೋಟಿ) ಬಹುಮಾನ ಜೇಬಿಗಿಳಿಸಿತ್ತು.

‘ಮಹಿಳಾ ತಂಡವು ಸಹ ಪುರುಷರಿಗೆ ಸಮಾನವಾಗಿ ಬಹುಮಾನದ ಮೊತ್ತವನ್ನು ಸ್ವೀಕರಿಸುತ್ತಿರುವ ಮೊದಲ ಕ್ರೀಡಾಕೂಟ ಐಸಿಸಿ ಮಹಿಳಾ ಟಿ–20 ವಿಶ್ವಕಪ್ ಆಗಿರಲಿದೆ.ಇದು ಕ್ರೀಡಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ’ಎಂದು ಐಸಿಸಿ ಹೇಳಿದೆ.

ಐಸಿಸಿ ಮಹಿಳಾ ಟಿ–20 ವಿಶ್ವಕಪ್ ಟೂರ್ನಿಯ ರನ್ನರ್ ಅಪ್ ತಂಡವು 1.17 ಮಿಲಿಯನ್ ಡಾಲರ್(ಸುಮಾರು ₹9.8 ಕೋಟಿ) ಬಹುಮಾನ ಪಡೆಯಲಿದೆ. ಅಂದರೆ, ಕಳೆದ ವರ್ಷ ದಕ್ಷಿಣ ಆಫ್ರಿಕಾದ ಟಿ–20 ಟೂರ್ನಿಯಲ್ಲಿ ಪಡೆದಿದ್ದ 5 ಲಕ್ಷ ಡಾಲರ್(₹4.1ಕೋಟಿ) ಗಿಂತ ಶೇ 134 ರಷ್ಟು ಹೆಚ್ಚಾಗಿದೆ.

ಸೆಮಿಫೈನಲ್ನಲ್ಲಿ ಸೋಲುವ ಎರಡು ತಂಡಗಳು ತಲಾ 6.75 ಲಕ್ಷ ಡಾಲರ್( ₹5.65 ಕೋಟಿ) ಬಹುಮಾನ ಪಡೆಯಲಿವೆ. ಇದು ಶೇ 225ರಷ್ಟು ಏರಿಕೆಯಾಗಿದೆ.

ಗುಂಪು ಹಂತದಲ್ಲಿ ಗೆಲ್ಲುವ ಪ್ರತಿ ತಂಡಕ್ಕೆ 31 ಸಾವಿರ ಡಾಲರ್(₹26 ಲಕ್ಷ) ಬಹುಮಾನ ಸಿಗಲಿದೆ. ಸೆಮಿಫೈನಲ್ಗೇರಲು ವಿಫಲವಾಗುವ ತಂಡಗಳಿಗೆ ಅವುಗಳ ಸ್ಥಾನ ಆಧಾರದ ಮೇಲೆ 1.35 ಮಿಲಿಯನ್ ಡಾಲರ್(₹11.3 ಕೋಟಿ) ಹಂಚಿಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.