ಮುಂಬೈ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ಅಜಿತ್ ವಾಡೇಕರ್ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರ ಹೆಸರುಗಳನ್ನು ವಾಂಖೆಡೆ ಕ್ರೀಡಾಂಗಣದ ಸ್ಟ್ಯಾಂಡ್ಗಳಿಗೆ ಇಡಲು ನಿರ್ಧರಿಸಲಾಗಿದೆ.

ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ರೋಹಿತ್ ಶರ್ಮಾ ಅವರ ಹೆಸರನ್ನು ಕ್ರೀಡಾಂಗಣದ ದಿವೇಚಾ ಪೆವಿಲಿಯನ್ (ಲೆವೆಲ್ 3) ಸ್ಟ್ಯಾಂಡ್ಗೆ ನೀಡಲಾಗುವುದು. ಗ್ರ್ಯಾಂಡ್ ಸ್ಟ್ಯಾಂಡ್ಗೆ (ಲೆವೆಲ್ 3) ಪವಾರ್ ಹಾಗೂ ಗ್ರ್ಯಾಂಡ್ ಸ್ಟ್ಯಾಂಡ್ಗೆ (ಲೆವೆಲ್ 4) ವಾಡೇಕರ್ ಅವರ ಹೆಸರುಗಳನ್ನು ಇಡಲಾಗುವುದು.

ವಾಡೇಕರ್ ಅವರು 1966–1974ರ ಅವಧಿಯಲ್ಲಿ ಭಾರತ ತಂಡದಲ್ಲಿ 37 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದರು. 2018ರ ಆಗಸ್ಟ್ನಲ್ಲಿ ಅವರು ನಿಧನರಾದರು.

‘ಮುಂಬೈ ಕ್ರಿಕೆಟ್ನ ಆಧಾರಸ್ತಂಭದಂತಿರುವ ಈ ಮಹನೀಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಭವಿಷ್ಯದ ಪೀಳಿಗೆಗೆ ಇವರು ಪ್ರೇರಣೆಯಾಗುತ್ತಾರೆ’ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.