ಟೆಸ್ಟ್‌ ಜನಪ್ರಿಯತೆಯಲ್ಲಿ ಭಾರತದ ಪಾತ್ರ ಮಹತ್ವದ್ದು: ಲ್ಯಾನಿಂಗ್‌

ಶನಿವಾರ, ಏಪ್ರಿಲ್ 20, 2019
27 °C
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಅನಿಸಿಕೆ

ಟೆಸ್ಟ್‌ ಜನಪ್ರಿಯತೆಯಲ್ಲಿ ಭಾರತದ ಪಾತ್ರ ಮಹತ್ವದ್ದು: ಲ್ಯಾನಿಂಗ್‌

Published:
Updated:
Prajavani

ಸಿಡ್ನಿ: ‘ಮಹಿಳಾ ಟೆಸ್ಟ್‌ ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚಿಸುವಲ್ಲಿ ಭಾರತ ಮಹತ್ವದ ಪಾತ್ರ ನಿಭಾಯಿಸಬೇಕು’ ಎಂದು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮೆಗ್‌ ಲ್ಯಾನಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

‘ಮಹಿಳಾ ಟೆಸ್ಟ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ಗೆ ಮಾತ್ರ ಸೀಮಿತವಾಗಿದೆ. ಪ್ರತಿ ಬಾರಿಯೂ ನಮ್ಮ ನಡುವೆಯೇ ಪಂದ್ಯಗಳು ನಡೆಯುತ್ತಿವೆ. ಹೆಚ್ಚಿನ ಪಂದ್ಯಗಳನ್ನು ಆಡಲು ನಮಗೆ ಆಸಕ್ತಿ ಇದೆ. ಆದರೆ ಅವಕಾಶ ಸಿಗುತ್ತಿಲ್ಲ’ ಎಂದಿದ್ದಾರೆ.

‘ಟೆಸ್ಟ್‌ ಪಂದ್ಯಗಳನ್ನು ಆಡಲು ಬಹುತೇಕ ರಾಷ್ಟ್ರಗಳಿಗೆ ಆಸಕ್ತಿ ಇದೆ. ಭಾರತ ತಂಡವೂ ಬಲಿಷ್ಠವಾಗಿದೆ. ಆ ರಾಷ್ಟ್ರದಲ್ಲಿ ಕ್ರಿಕೆಟ್‌ ಸಾಕಷ್ಟು ಜನಪ್ರಿಯತೆ ಹೊಂದಿದೆ. ಹೀಗಾಗಿ ಆ ದೇಶವೂ ಟೆಸ್ಟ್‌ ಆಡಲು ಮುಂದೆ ಬರಬೇಕು. ಭಾರತ ಮನಸ್ಸು ಮಾಡಿದರೆ ಮಹಿಳಾ ಟೆಸ್ಟ್‌ ಖಂಡಿತವಾಗಿಯೂ ಜನಪ್ರಿಯವಾಗಲಿದೆ’ ಎಂದು ಲ್ಯಾನಿಂಗ್‌ ಹೇಳಿದ್ದಾರೆ.

ಆಸ್ಟ್ರೇಲಿಯಾ ತಂಡವು ಈ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯರ ವಿರುದ್ಧ ಏಕೈಕ ಟೆಸ್ಟ್‌ ಪಂದ್ಯ ಆಡಲಿದೆ.

2010ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ 27 ವರ್ಷದ ಲ್ಯಾನಿಂಗ್‌, ಕೇವಲ ಮೂರು ಟೆಸ್ಟ್‌ ಆಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !