ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸ್ನಾಯು ನೋವು: ತವರಿಗೆ ಮರಳಿದ ಮಾರ್ಷ್‌, ಡೆಲ್ಲಿ ತಂಡಕ್ಕೆ ಹಿನ್ನಡೆ

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್‌ ಮಾರ್ಷ್‌ ಮೊಣಕಾಲಿನ ಸ್ನಾಯು ನೋವಿಗೆ ಚಿಕಿತ್ಸೆ ಪಡೆಯಲು ತವರಿಗೆ ಮರಳಿದ್ದಾರೆ. ಇದರಿಂದ ಡೆಲ್ಲಿ ತಂಡಕ್ಕೆ ಹಿನ್ನಡೆಯಾಗಿದೆ.

ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಅವರು ಆಸ್ಟ್ರೇಲಿಯಾ ತಂಡದ ನಾಯಕರಾಗುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಆಡಳಿತ ಮಂಡಳಿ ಜೊತೆ ಸಮಾಲೋಚನೆಯ ನಂತರ ಅವರು ಸ್ವದೇಶಕ್ಕೆ ಮರಳಿದ್ದಾರೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ.ಐಪಿಎಲ್‌ನ ಉಳಿದ ಕೆಲವು ಪಂದ್ಯಗಳಿಗೆ ಅವರು ಲಭ್ಯರಾಗಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಏಪ್ರಿಲ್ 3ರಂದು ಕೋಲ್ಕತ್ತ ನೈಟ್‌ ರೈಡರ್ಸ್ ವಿರುದ್ಧ ಅವರು ಕೊನೆಯ ಪಂದ್ಯ ಆಡಿದ್ದರು. ನಂತರ ಎರಡು ಪಂದ್ಯಗಳನ್ನು ಗಾಯಾಳಾಗಿ ಆಡಿರಲಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಗಳಿಸಿದ್ದ 23 ಅವರ ಅತ್ಯಧಿಕ ಮೊತ್ತ ಎನಿಸಿತ್ತು.

ಡೇವಿಡ್‌ ವಾರ್ನರ್‌ ಅವರ ಲಭ್ಯತೆ ಬಗ್ಗೆಯೂ ಡೆಲ್ಲಿ ತಂಡಕ್ಕೆ ಕಳವಳ ಆರಂಭವಾಗಿದೆ. ಶುಕ್ರವಾರ ಲಖನೌ ವಿರುದ್ಧ ಆಡುವಾಗ ಕ್ಯಾಚ್‌ ಪಡೆಯುವ ಯತ್ನದಲ್ಲಿ ಅವರ ಬೆರಳಿಗೆ ಗಾಯವಾಗಿದ್ದು, ಅದು ಊದಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT