ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಗೌತಮ್‌ಗೆ 3 ವಿಕೆಟ್; ಪೃಥ್ವಿ ಮಿಂಚು

Last Updated 18 ನವೆಂಬರ್ 2018, 18:28 IST
ಅಕ್ಷರ ಗಾತ್ರ

ಮೌಂಟ್ ಮಾಂಗನುಯ್, ನ್ಯೂಜಿಲೆಂಡ್: ನ್ಯೂಜಿಲೆಂಡ್ ‘ಎ’ ತಂಡದ ಎದುರಿನ ‘ಟೆಸ್ಟ್‌’ನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ಮಿಂಚಿದರು.

ಭಾರತ ‘ಎ’ ತಂಡವು ಮೊದಲ ಇನಿಂಗ್ಸ್‌ನಲ್ಲಿ ಎಂಟು ವಿಕೆಟ್‌ಗಳಿಗೆ 467 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಆತಿಥೇಯ ತಂಡವು 9 ವಿಕೆಟ್‌ಗಳಿಗೆ 458 ರನ್‌ ಗಳಿಸಿ ಡಿಕ್ಲೆರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ಭಾರತ ‘ಎ’ ತಂಡವು ದಿನದಾಟದ ಕೊನೆಗೆ 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 35 ರನ್‌ ಗಳಿಸಿತು. ಅಬ್ಬರದ ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ 26 ಎಸೆತಗಳಲ್ಲಿ 33 ರನ್‌ ಗಳಿಸಿದ್ದಾರೆ. ಇನ್ನೊಂದು ಬದಿಯಲ್ಲಿರುವ ಮುರಳಿ ವಿಜಯ್ ಎರಡು ರನ್‌ ಗಳಿಸಿದ್ದಾರೆ.

ಪಂದ್ಯದ ಮೂರನೇ ದಿನವಾದ ಭಾನುವಾರ ಕಿವೀಸ್‌ ಯುವಪಡೆಯು 375 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಹತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸೇಥ್ ರೆನ್ಸ್ (ಔಟಾಗದೆ 69, 57 ಎಸೆತ) ಮತ್ತು ಹನ್ನೊಂದನೇ ಆಟಗಾರ ಬ್ಲೇರ್ ಟಿಕ್ನರ್ (ಔಟಾಗದೆ 30) ಅವರು ಮುರಿಯದ ಹತ್ತನೇ ವಿಕೆಟ್‌ ಜೊತೆಯಾಟದಲ್ಲಿ 83 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ ‘ಎ’: 467 ಡಿಕ್ಲೆರ್ಡ್ ಮತ್ತು 8 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 35 (ಪೃಥ್ವಿ ಶಾ ಬ್ಯಾಟಿಂಗ್ 33, ಮುರಳಿ ವಿಜಯ್ ಬ್ಯಾಟಿಂಗ್ 2)

ನ್ಯೂಜಿಲೆಂಡ್ ‘ಎ’: 9 ವಿಕೆಟ್‌ಗಳಿಗೆ 458 ಡಿಕ್ಲೆರ್ಡ್ (ಹ್ಯಾಮಿಷ್ ರುದರ್‌ಫೋರ್ಡ್ 114, ಸೇಥ್ ರಾನ್ಸ್, ಔಟಾಗದೆ 69, ಡ್ಯಾನ್ ಕ್ಲೀವರ್ 53, ಡಫ್ ಬ್ರೇಸ್‌ವೆಲ್ 48, ಕೃಷ್ಣಪ್ಪ ಗೌತಮ್ 107ಕ್ಕೆ3, ನವದೀಪ್ ಸೈನಿ 51ಕ್ಕೆ2, ದೀಪಕ್ ಚಾಹರ್ 51ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT