ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಿಮಾನ್ ಸಹಾ ಹೇಳಿಕೆಯಿಂದ ಬೇಸರವಾಗಿಲ್ಲ: ರಾಹುಲ್ ದ್ರಾವಿಡ್

Last Updated 21 ಫೆಬ್ರುವರಿ 2022, 7:35 IST
ಅಕ್ಷರ ಗಾತ್ರ

ಕೋಲ್ಕತ್ತ: ಸಹಾ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ನಾನು ಅವರ ಜೊತೆ ನಡೆಸಿದ ‘ಕಠಿಣ’ಮಾತುಕತೆ ಬಗ್ಗೆ ಬಹಿರಂಗಪಡಿಸಿದ ವೃದ್ಧಿಮಾನ್ ಸಹಾ ವರ್ತನೆಯಿಂದ ನನಗೆ ಬೇಸರವಾಗಿಲ್ಲ. ಅವರು ಪ್ರಾಮಾಣಿಕತೆ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಕಳೆದ ತಿಂಗಳು ನಡೆದ ದಕ್ಷಿಣ ಆಫ್ರಿಕಾ ಸರಣಿಯ ನಂತರ ಖಾಸಗಿ ಸಂಭಾಷಣೆಯ ವೇಳೆ ದ್ರಾವಿಡ್ ನಿವೃತ್ತಿಯನ್ನು ಪರಿಗಣಿಸುವಂತೆ ಹೇಳಿದ್ದರು ಎಂದು ಸಹಾ ಇತ್ತೀಚೆಗೆ ಮಾಧ್ಯಮಗಳಿಗೆ ತಿಳಿಸಿದ್ದರು.

ಸಹಾ ಅವರೊಂದಿಗೆ ನಡೆಸಿದ ಸಂಭಾಷಣೆ ಹಿಂದಿನ ಉದ್ದೇಶವೆಂದರೆ, ಅವರ ಸ್ಥಾನದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವುದೇ ಆಗಿತ್ತು. ಹಾಗಾಗಿ, ಅದರ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದು ದ್ರಾವಿಡ್ ಹೇಳಿದರು.

‘ನಿಜವಾಗಿಯೂ ಸಹಾ ಹೇಳಿಕೆಯಿಂದ ನನಗೆ ಘಾಸಿಯಾಗಿಲ್ಲ, ವೃದ್ಧಿಮಾನ್ ಸಹಾ, ಅವರ ಸಾಧನೆ ಮತ್ತು ಭಾರತ ಕ್ರಿಕೆಟ್‌ಗೆ ಅವರ ಕೊಡುಗೆ ಬಗ್ಗೆ ಅಪಾರ ಗೌರವವಿದೆ. ಅವರು ಪ್ರಾಮಾಣಿಕತೆ ಮತ್ತು ಸ್ಪಷ್ಟತೆಗೆ ಅರ್ಹರು’ ಎಂದು ವೆಸ್ಟ್ ಇಂಡೀಸ್ ವಿರುದ್ಧ ನಡೆದ 3ನೇ ಟಿ–20 ಪಂದ್ಯದ ಬಳಿಕ ದ್ರಾವಿಡ್ ಸುದ್ದಿಗಾರರಿಗೆ ತಿಳಿಸಿದರು.

40 ಟೆಸ್ಟ್ ಪಂದ್ಯಗಳನ್ನು ಆಡಿರುವ 37 ವರ್ಷದ ಸಹಾ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಿಲ್ಲ. ಇದೇ ಸಂದರ್ಭ, ರಣಜಿಯಿಂದಲೂ ಅವರನ್ನು ಹೊರಗಿಡಲಾಗಿದೆ.

‘ಆಟಗಾರರು ಇಷ್ಟಪಡಲಿ ಅಥವಾ ಬಿಡಲಿ, ಭವಿಷ್ಯದಲ್ಲಿ ಅಂತಹ ಸಂಭಾಷಣೆಗಳನ್ನು ಮುಂದುವರಿಸುತ್ತೇನೆ. ನಾನು ಆಟಗಾರರೊಂದಿಗೆ ನಿರಂತರವಾಗಿ ಸಂಭಾಷಣೆಗಳನ್ನು ನಡೆಸುತ್ತಿರುತ್ತೇನೆ. ಅವುಗಳೆಲ್ಲವನ್ನೂ ಆಟಗಾರರು ಯಾವಾಗಲೂ ಒಪ್ಪುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ’ಎಂದು ದ್ರಾವಿಡ್ ಹೇಳಿದ್ದಾರೆ.

ಅಂತಿಮ 11ರ ಬಳಗ ಆಯ್ಕೆಗೂ ಮುನ್ನ ಪ್ರತಿಯೊಬ್ಬ ಆಟಗಾರನ ಜೊತೆ ಚರ್ಚಿಸುವುದು ನನ್ನ ಸಿದ್ಧಾಂತ ಎಂದು ಅವರು ಹೇಳಿದ್ದಾರೆ.

‘ಮೈದಾನಕ್ಕಿಳಿಯುವ 11 ಸದಸ್ಯರ ತಂಡ ಆಯ್ಕೆಯಾಗುವ ಮೊದಲು ಅವರ ಜೊತೆ ಸಂಭಾಷಣೆ ನಡೆಸಬೇಕೆಂದು ನಾನು ಯಾವಾಗಲೂ ನಂಬುತ್ತೇನೆ ಮತ್ತು ಅವರು ಏಕೆ ಆಡುತ್ತಿಲ್ಲ ಎಂಬಂತಹ ಪ್ರಶ್ನೆಗಳಿಗೆ ಮುಕ್ತವಾಗಿರುತ್ತೇನೆ. ಆಟಗಾರರು ಅಸಮಾಧಾನಗೊಳ್ಳುವುದು ಮತ್ತು ನೊಂದುಕೊಳ್ಳುವುದು ಸಹಜ’ಎಂದು ಅವರು ಹೇಳಿದ್ದಾರೆ.

ಸಹಾ ಅವರೊಂದಿಗೆ ನಡೆಸಿದ ಸಂಭಾಷಣೆಯ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ದ್ರಾವಿಡ್, ‘ನಮ್ಮ ನಂ.1 ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ರಿಷಬ್ ಪಂತ್ ತನ್ನನ್ನು ತಾನು ಗುರಿತಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸಲು ನಾನು ಪ್ರಯತ್ನಿಸುತ್ತಿದ್ದೆ, ನಾವು ಯುವ ವಿಕೆಟ್‌ ಕೀಪರ್ ಅನ್ನು ಪರಿಗಣಿಸಲು ನೋಡುತ್ತಿದ್ದೇವೆ ಎಂದು ತಿಳಿಸಲು ಬಯಸಿದ್ದೆ’ಎಂದು ದ್ರಾವಿಡ್ ಹೇಳಿದ್ದಾರೆ..

‘ಆಟಗಾರರ ಜೊತೆ ಸಂಭಾಷಣೆಗಳನ್ನು ನಡೆಸದಿರುವುದು ಮತ್ತು ಅವರ ಭವಿಷ್ಯದ ಬಗ್ಗೆ ತಿಳಿಸದಿರುವುದು ಸುಲಭ. ಆದರೆ, ನಾನು ಅದನ್ನು ಮಾಡಲು ಹೋಗುತ್ತಿಲ್ಲ. ಸಂಭಾಷಣೆಯನ್ನು ಸಂಪೂರ್ಣವಾಗಿ ತಪ್ಪಿಸುವುದಕ್ಕಿಂತ ಕಟುವಾದ ಸತ್ಯವನ್ನು ಹೇಳುವುದು ಉತ್ತಮ’ಎಂದು ದ್ರಾವಿಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT