ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಜಂ ನಾಯಕತ್ವಕ್ಕೆ ‘ಅಮೆರಿಕ’ ಸವಾಲು

ಪಾಕಿಸ್ತಾನ –ಮೊನಾಂಕ್ ಪಟೇಲ್ ಬಳಗ ಮುಖಾಮುಖಿ ಇಂದು
Published 6 ಜೂನ್ 2024, 0:20 IST
Last Updated 6 ಜೂನ್ 2024, 0:20 IST
ಅಕ್ಷರ ಗಾತ್ರ

ಡಲ್ಲಾಸ್: ಬಾಬರ್ ಆಜಂ ನಾಯಕತ್ವದ ಪಾಕಿಸ್ತಾನ  ತಂಡವು ಗುರುವಾರ ಆತಿಥೇಯ ಅಮೆರಿಕ ತಂಡದ ವಿರುದ್ಧ ಕಣಕ್ಕಿಳಿಯಲಿದೆ. 

ಗ್ರ್ಯಾಂಡ್ ಪ್ರಿಯರಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಪಾಕ್ ತಂಡವು ಶುಭಾರಂಭದ ನಿರೀಕ್ಷೆಯಲ್ಲಿದೆ. ಪಾಕ್ ತಂಡಕ್ಕೆ ಇದು ಟೂರ್ನಿಯಲ್ಲಿ ಮೊದಲ ಪಂದ್ಯವಾಗಿದೆ. ಆದರೆ ಅಮೆರಿಕ ತಂಡಕ್ಕೆ ಇದು ಎರಡನೇಯದ್ದು. ತನ್ನ ಮೊದಲ ಪಂದ್ಯದಲ್ಲಿ ಕೆನಡಾ ತಂಡದ ವಿರುದ್ಧ ಜಯಿಸಿತ್ತು. 

ಪಾಕ್ ತಂಡವು ಈಚೆಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 0–2ರಿಂದ ಸೋತಿತ್ತು. ಅದಕ್ಕಿಂತ ಮೊದಲು ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ 2–2ರಿಂದ ಸಮಬಲ ಸಾಧಿಸಿತ್ತು. ಆದರೆ ಆ ತಂಡದಲ್ಲಿ ವಿಶ್ವಕಪ್ ಆಡುವ ಬಳಗದ ಕೆಲವು ಆಟಗಾರರು ಇರಲಿಲ್ಲ. 

ಬಾಬರ್ ಅವರು ಮರಳಿ ನಾಯಕತ್ವ ವಹಿಸಿಕೊಂಡ ನಂತರ ಪಾಕ್ ತಂಡವು ಆಡುತ್ತಿರುವ ವಿಶ್ವಕಪ್ ಟೂರ್ನಿ  ಇದಾಗಿದೆ. ಆದ್ದರಿಂದ ಅವರ ಮೇಲೆ ನಿರೀಕ್ಷೆ ಭಾರ ಹೆಚ್ಚಿದೆ. ಬಾಬರ್ ಹಾಗೂ ಮೊಹಮ್ಮದ್ ರಿಜ್ವಾನ್  ಅವರು ಪಾಕ್ ತಂಡದ ಅನುಭವಿ ಹಾಗೂ ವಿಶ್ವಾಸಾರ್ಹ ಆಟಗಾರರಾಗಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಪರಿಣತ ಬ್ಯಾಟರ್‌ಗಳಾಗಿದ್ದಾರೆ.

ಬೌಲಿಂಗ್ ವಿಭಾಗವು ಉತ್ತಮವಾಗಿದೆ. ಶಾಹೀನ್ ಆಫ್ರಿದಿ, ನಸೀಮ್ ಶಹಾ, ಹ್ಯಾರಿಸ್ ರವೂಫ್ ಮತ್ತು ಮೊಹಮ್ಮದ್ ಅಮೀರ್ ಅವರು ಇರುವ ಬೌಲಿಂಗ್ ಪಡೆಯು ಎದುರಾಳಿಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಸಮರ್ಥರಾಗಿದ್ದಾರೆ. 

ಭಾರತ ಮೂಲದ ಮೊನಾಂಕ್ ಪಟೇಲ್ ನಾಯಕತ್ವದ ಅಮೆರಿಕ ತಂಡದಲ್ಲಿ ಕನ್ನಡಿಗ ನಾಸ್ತುಷ್ ಕೆಂಜಿಗೆ ಅವರೂ ಇದ್ದಾರೆ. ಪಾಕಿಸ್ತಾನ ತಂಡದ ಅಲಿ ಖಾನ್ ತಂಡದಲ್ಲಿದ್ದಾರೆ. 

ಪಂದ್ಯ ಆರಂಭ: ರಾತ್ರಿ 9

ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್  –ಪಿಟಿಐ ಚಿತ್ರ
ಅಮೆರಿಕ ತಂಡದ ನಾಯಕ ಮೊನಾಂಕ್ ಪಟೇಲ್  –ಪಿಟಿಐ ಚಿತ್ರ

ನ್ಯೂಗಿನಿ–ಯುಗಾಂಡ ಹಣಾಹಣಿ

ಗಯಾನ : ಪಾಪುವಾ ನ್ಯೂಗಿನಿ ಮತ್ತು ಯುಗಾಂಡ ತಂಡವು ಸಿ ಗುಂಪಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.  ಗುರುವಾರ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಆಡಲಿವೆ. ನ್ಯೂಗಿನಿ ತಂಡವು ತನ್ನ ಮೊದಲ ಹಣಾಹಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. ಯುಗಾಂಡ ತಂಡವು ಅಫ್ಗಾನಿಸ್ತಾನಕ್ಕೆ ಮಣಿದಿತ್ತು. ಪಂದ್ಯ ಆರಂಭ: ಬೆಳಿಗ್ಗೆ 5

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT