ಕ್ರಿಕೆಟ್‌: ಪ್ಯಾಲೇಸ್‌ ಆರ್ಕರ್ಡ್ಸ್‌ ಕ್ಲಬ್‌ಗೆ ಪ್ರಶಸ್ತಿ

7
ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ ಕ್ರಿಕೆಟ್‌ ಟೂರ್ನಿ

ಕ್ರಿಕೆಟ್‌: ಪ್ಯಾಲೇಸ್‌ ಆರ್ಕರ್ಡ್ಸ್‌ ಕ್ಲಬ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಕೋಟೇಶ್ವರ ರಾವ್‌ (71ಕ್ಕೆ5) ಮತ್ತು (25ಕ್ಕೆ5) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಪ್ಯಾಲೇಸ್‌ ಆರ್ಕರ್ಡ್ಸ್‌ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆದ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ.

ಆರ್‌ಎಸ್‌ಐ ಮೈದಾನದಲ್ಲಿ ನಡೆದ ಎರಡು ದಿನಗಳ (ಮಂಗಳವಾರ ಮತ್ತು ಬುಧವಾರ) ಫೈನಲ್‌ ಹಣಾಹಣಿಯಲ್ಲಿ ಪ್ಯಾಲೇಸ್‌ ಆರ್ಕರ್ಡ್ಸ್‌ ತಂಡ 8 ವಿಕೆಟ್‌ಗಳಿಂದ ಜಯನಗರ ಕ್ರಿಕೆಟರ್ಸ್‌ ತಂಡವನ್ನು ಪರಾಭವಗೊಳಿಸಿತು.

ಸಂಕ್ಷಿಪ್ತ ಸ್ಕೋರ್‌: ಜಯನಗರ ಕ್ರಿಕೆಟರ್ಸ್‌: ಮೊದಲ ಇನಿಂಗ್ಸ್‌, 55 ಓವರ್‌ಗಳಲ್ಲಿ 9 ವಿಕೆಟ್‌ಗೆ 240 (ರಕ್ಷಿತ್‌ 42, ಧ್ರುವ 31, ಟಿ.ಎಸ್‌.ಶರತ್‌ 52, ಗುರುಪ್ರಸಾದ್‌ 23, ಚಂದನ್‌ ಔಟಾಗದೆ 45; ಕೋಟೇಶ್ವರ ರಾವ್ 71ಕ್ಕೆ5, ವಿನಯ್‌ ಕುಮಾರ್‌ 45ಕ್ಕೆ2). ಎರಡನೇ ಇನಿಂಗ್ಸ್‌: 29.1 ಓವರ್‌ಗಳಲ್ಲಿ 119 (ರಕ್ಷಿತ್‌ 34; ಸುಮೀತ್‌ ಸಂಗ್ವಾನ್‌ 21ಕ್ಕೆ2, ಕೋಟೇಶ್ವರ ರಾವ್‌ 25ಕ್ಕೆ5, ಪೆಂಟಾ ರಾವ್‌ 40ಕ್ಕೆ2).

ಪ್ಯಾಲೇಸ್‌ ಆರ್ಕರ್ಡ್ಸ್‌ ಕ್ಲಬ್‌: ಪ್ರಥಮ ಇನಿಂಗ್ಸ್‌, 50.3 ಓವರ್‌ಗಳಲ್ಲಿ 248 (ಗಿರೀಶ್‌ 24, ಸಿರೀಶ್‌ 72, ಕಮಲ್‌ 30, ಸೋಮಶೇಖರ್‌ 40, ರಾಜು ಭುಕಿಯಾ 37; ರಮಣ 99ಕ್ಕೆ5, ಮೋಹನ್‌ ಕುಮಾರ್‌ 90ಕ್ಕೆ3, ಅರುಣ್ ಕುಮಾರ್‌ 15ಕ್ಕೆ2). ಎರಡನೇ ಇನಿಂಗ್ಸ್‌: 14.4 ಓವರ್‌ಗಳಲ್ಲಿ 2 ವಿಕೆಟ್‌ಗೆ 112 (ಗಿರೀಶ್‌ 41, ಉನ್ನತ್‌ ಔಟಾಗದೆ 22, ಸುಮೀತ್‌ ಸಂಗ್ವಾನ್‌ ಔಟಾಗದೆ 27). ಫಲಿತಾಂಶ: ಪ್ಯಾಲೇಸ್‌ ಆರ್ಕರ್ಡ್ಸ್‌ ಕ್ಲಬ್‌ಗೆ 8 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !