ಗುರುವಾರ , ಆಗಸ್ಟ್ 11, 2022
22 °C

ಐಪಿಎಲ್‌ ಟೂರ್ನಿಯಲ್ಲಿ ಆಡಲು ಅಬುಧಾಬಿಗೆ ಬಂದಿಳಿದ ಪೊಲಾರ್ಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌‌ಮನ್‌ ಕೀರನ್‌ ಪೊಲಾರ್ಡ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಆಡಲು ಶನಿವಾರ ಇಲ್ಲಿಗೆ ಬಂದಿಳಿದಿದ್ದು, ಮುಂಬೈ ಇಂಡಿಯನ್ಸ್ ತಂಡದ ಶಿಬಿರವನ್ನು ಸೇರಿಕೊಂಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಕೆರಿಬಿಯನ್‌ ಪ್ರೀಮಿಯರ್‌ ಲೀಗ್ (ಸಿಪಿಎಲ್‌)‌ ಟೂರ್ನಿಯಲ್ಲಿ ಅವರು ಪ್ರತಿನಿಧಿಸಿದ್ದ ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್‌ ತಂಡ ಚಾಂಪಿಯನ್‌ ಆಗಿತ್ತು.

ಪೊಲಾರ್ಡ್‌ ಅಷ್ಟೇ ಅಲ್ಲದೆ ಸಿಪಿಎಲ್‌ ಟೂರ್ನಿಯಲ್ಲಿ ಆಡಿದ ವೆಸ್ಟ್‌ ಇಂಡೀಸ್‌ ಹಾಗೂ ಇತರ ದೇಶಗಳ ಆಟಗಾರರು ತಮ್ಮ ತಂಡಗಳ ಶಿಬಿರಗಳನ್ನು ತಲುಪಿದ್ದಾರೆ.

ಈ ಬಾರಿಯ ಐಪಿಎಲ್‌ ಟೂರ್ನಿಯು ಯುನೈಟೆಡ್‌ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್‌ 19ರಿಂದ ನಿಗದಿಯಾಗಿದೆ. 

‘ಕೆರಿಬಿಯನ್‌ ದ್ವೀಪಪ‍್ರದೇಶದಿಂದ ಕೀರನ್‌ ಪೊಲಾರ್ಡ್ ಕುಟುಂಬ‌ ಹಾಗೂ ರುದರ್‌ಫೋರ್ಡ್‌ ಮುಂಬೈ ಇಂಡಿಯನ್ಸ್ ಕುಟುಂಬವನ್ನು ಬಂದು ಸೇರಿದ್ದಾರೆ‘ ಎಂದು ಮುಂಬೈ ಇಂಡಿಯನ್ಸ್‌ ಫ್ರ್ಯಾಂಚೈಸ್‌ ಟ್ವೀಟ್‌ ಮಾಡಿದೆ. ಪೊಲಾರ್ಡ್‌ ಅವರ ಜೊತೆಗೆ ವೆಸ್ಟ್‌ ಇಂಡೀಸ್‌ನ ಶೆರ್ಫಾನೆ ರುದರ್‌ಫೋರ್ಡ್‌ ಕೂಡ ತಂಡವನ್ನು ಸೇರಿದ್ದಾರೆ.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ರನ್ನರ್ಸ್‌ ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ಅನ್ನು ಎದುರಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು