ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಮತ್ತೆ ಅರ್ಜಿ?

Last Updated 15 ಜುಲೈ 2019, 17:40 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ತಂಡದ ನೆರವು ಸಿಬ್ಬಂದಿಯ ನೇಮಕಕ್ಕೆ ಬಿಸಿಸಿಐ ಹೊಸ ಅರ್ಜಿಗಳನ್ನು ಕರೆಯಲಿದೆ.

ಮುಂದಿನ ತಿಂಗಳು ವೆಸ್ಟ್ ಇಂಡೀಸ್‌ ವಿರುದ್ಧ ನಡೆಯಲಿರುವ ಸರಣಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿರುವುದರಿಂದ ಅವರು ಹೊಸದಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ರವಿಶಾಸ್ತ್ರಿ, ಬೌಲಿಂಗ್ ಕೋಚ್‌ ಭರತ್ ಅರುಣ್‌, ಬ್ಯಾಟಿಂಗ್ ಕೋಚ್ ಸಂಜಯ್‌ ಬಂಗಾರ್‌ ಮತ್ತು ಫೀಲ್ಡಿಂಗ್ ಕೋಚ್‌ ಆರ್.ಶ್ರೀಧರ್ ಅವರ ಅವಧಿಯನ್ನು ವಿಶ್ವಕಪ್ ಹಿನ್ನೆಲೆಯಲ್ಲಿ 45 ದಿನಗಳಿಗೆ ವಿಸ್ತರಿಸಲಾಗಿತ್ತು. ಆಗಸ್ಟ್ 3ರಿಂದ ಸೆಪ್ಟೆಂಬರ್ 3ರ ವರೆಗೆ ನಡೆಯಲಿರುವ ವೆಸ್ಟ್ ಇಂಡೀಸ್‌ ಎದುರಿನ ಸರಣಿಯ ವರೆಗೆ ಈ ಅವಧಿ ಇರುತ್ತದೆ.

ಭಾರತ ತಂಡ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಲ್ಲೇ ಹೊರಬಿದ್ದ ನಂತರ ಟ್ರೇನರ್ ಶಂಕರ್‌ ಬಸು ಮತ್ತು ಫಿಸಿಯೊ ಪ್ಯಾಟ್ರಿಕ್ ಫರ್ಹಾತ್‌ ಅವರನ್ನು ಕೈಬಿಡಲು ಬಿಸಿಸಿಐ ನಿರ್ಧರಿಸಿತ್ತು. ಈ ಹುದ್ದೆಗಳನ್ನು ಕೂಡ ತುಂಬಬೇಕಾಗಿದೆ.

ಅನಿಲ್ ಕುಂಬ್ಳೆ ಅವಧಿ ಮುಗಿದ ನಂತರ 2017ರಲ್ಲಿ ರವಿಶಾಸ್ತ್ರಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದದ್ದು ಹೊರತುಪಡಿಸಿದರೆ ರವಿಶಾಸ್ತ್ರಿ ಅವಧಿಯಲ್ಲಿ ಭಾರತ ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT