ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಚಿನ್‌ ರವೀಂದ್ರಗೆ ರಿಚರ್ಡ್‌ ಹ್ಯಾಡ್ಲಿ ಪದಕ

ಈ ಗೌರವಕ್ಕೆ ಪಾತ್ರರಾದ ಅತಿ ಕಿರಿಯ ಆಟಗಾರ
Published 13 ಮಾರ್ಚ್ 2024, 13:36 IST
Last Updated 13 ಮಾರ್ಚ್ 2024, 13:36 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌: ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಪರ ಮಿಂಚು ಹರಿಸಿದ್ದ ರಚಿನ್‌ ರವೀಂದ್ರ, ಸರ್‌ ರಿಚರ್ಡ್‌ ಹ್ಯಾಡ್ಲಿ ಪದಕ ಗೆದ್ದ ಅತಿ ಕಿರಿಯ ಆಟಗಾರನೆಂಬ ಗೌರವಕ್ಕೆ ಬುಧವಾರ ಭಾಜನರಾದರು. ನ್ಯೂಜಿಲೆಂಡ್‌ನ ‘ವರ್ಷದ ಶ್ರೇಷ್ಠ ಪುರುಷ ಆಟಗಾರ’ನಿಗೆ ಈ ಗೌರವ ನೀಡಲಾಗುತ್ತದೆ.

ನ್ಯೂಜಿಲೆಂಡ್‌ನ ವಾರ್ಷಿಕ ಕ್ರಿಕೆಟ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಮಹಿಳಾ ಆಟಗಾರ್ತಿಯರಲ್ಲಿ ಮೆಲೀ ಕೆರ್‌ ಪ್ರಮುಖ ಪ್ರಶಸ್ತಿಗಳನ್ನು ಪಡೆದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ನೀಡಿದ ಗಣನೀಯ ಕೊಡುಗೆಗಾಗಿ ಕೇನ್‌ ವಿಲಿಯಮ್ಸನ್ ಅವರಿಗೆ ಎಎನ್‌ಝಡ್‌ ವರ್ಷದ ಟೆಸ್ಟ್‌ ಆಟಗಾರ ಪ್ರಶಸ್ತಿ ಸಂದಿದೆ. ಅವರಿಗೆ ರೆಡ್‌ಪಾತ್‌ ಕಪ್ ಗೌರವವೂ ಪ್ರಾಪ್ತಿಯಾಗಿದೆ.

ರಿಚರ್ಡ್‌ ಹ್ಯಾಡ್ಲಿ ಪದಕದ ಇತಿಹಾಸದಲ್ಲೇ, ಇದನ್ನು ಗೆದ್ದ ಅತಿ ಕಿರಿಯ ಕ್ರಿಕೆಟಿಗ ಎನಿಸಿದ 24 ವರ್ಷದ ರಚಿನ್ ಅವರು ಈ ಸಾಲಿನಲ್ಲಿ ತಂಡದ ಪರ ಟೆಸ್ಟ್ ಮತ್ತು ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ವಿಶ್ವಕಪ್‌ ಟೂರ್ನಿಯಲ್ಲಿ ಅವರು 64ರ ಸರಾಸರಿಯಲ್ಲಿ 578 ರನ್ ಕಲೆಹಾಕಿದ್ದರು. ಮೂರು ಶತಕಗಳು ಮತ್ತು ಎರಡು ಅರ್ಧ ಶತಕಗಳು ಇದರಲ್ಲಿ ಒಳಗೊಂಡಿದ್ದವು. 2023ರಲ್ಲಿ ಐಸಿಸಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನೂ ಪಡೆದಿದ್ದರು. ಅವರು ₹2.89 ಕೋಟಿ ($3,50,000) ಮೊತ್ತಕ್ಕೆ ಚೆನ್ನೈ ಸೂಪರ್‌ ಕಿಂಗ್ಸ್ ಪಾಲಾಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕವಾಗಿ 240 ರನ್ ಹೊಡೆದಿದ್ದರು. ದಕ್ಷಿಣ ಆಫ್ರಿಕಾದಲ್ಲಿ ನ್ಯೂಜಿಲೆಂಡ್‌ನ ಮೊದಲ ಟೆಸ್ಟ್‌ ಸರಣಿ ಗೆಲುವಿನಲ್ಲಿ ಪಾತ್ರ ವಹಿಸಿದ್ದರು.

ಕೆರ್‌ ಮಹಿಳಾ ವಿಭಾಗದಲ್ಲಿ ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡರು. ಟಿ20 ವರ್ಷದ ಆಟಗಾರ್ತಿ ಮತ್ತು ಡ್ರೀಮ್‌ ಇಲೆವೆನ್‌ ವರ್ಷದ ಮಹಿಳಾ ಆಟಗಾರ್ತಿಯಾಗಿ ಡೆಬಿ ಹಾಕ್ಲಿ ಪದಕ ಗೆದ್ದುಕೊಂಡರು. ಕೆರ್‌ ಆಲ್‌ರೌಂಡರ್‌ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT