ಗುರುವಾರ , ಜೂನ್ 17, 2021
29 °C
ಕ್ವಾರ್ಟರ್‌ಫೈನಲ್‌ ಪಂದ್ಯದ ಸೋಲಿನ ನಂತರದ ಘಟನೆ ನೆನಪಿಸಿಕೊಂಡ ದಕ್ಷಿಣ ಆಫ್ರಿಕಾ ಆಟಗಾರ

ಕ್ರಿಕೆಟ್‌: 2011ರ ವಿಶ್ವಕಪ್‌ನಲ್ಲಿ ಕೊಲೆ ಬೆದರಿಕೆಗಳು ಬಂದಿದ್ದವು: ಡುಪ್ಲೆಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ:  2011ರ ವಿಶ್ವಕಪ್ ಕ್ರಿಕೆಟ್‌ ಕ್ವಾರ್ಟರ್‌ಫೈನಲ್ ಪಂದ್ಯದ ಸೋಲಿನ ಬಳಿಕ ತನಗೆ ಕೊಲೆ ಬೆದರಿಕೆಗಳು ಬಂದಿದ್ದವು ಎಂದು ದಕ್ಷಿಣ ಆಫ್ರಿಕಾ ತಂಡದ ಆಟಗಾರ ಫಪ್‌ ಡುಪ್ಲೆಸಿ ಬಹಿರಂಗಪಡಿಸಿದ್ದಾರೆ.

ಬಾಂಗ್ಲಾದೇಶದ ಢಾಕಾದ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನ್ಯೂಜಿಲೆಂಡ್‌ ಎದುರು 49 ರನ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಸಹ ಆತಿಥ್ಯ ರಾಷ್ಟ್ರವಾಗಿದ್ದ ಭಾರತ ಚಾಂಪಿಯನ್ ಆಗಿತ್ತು.

ಆ ಪಂದ್ಯದಲ್ಲಿ ಡುಪ್ಲೆಸಿ ಅವರು ಒಂಟಿ ರನ್‌ ಕದಿಯುವ ವೇಳೆ ನಾನ್‌ಸ್ಟ್ರೈಕ್ ನಲ್ಲಿದ್ದ ಎಬಿ ಡಿವಿಲಿಯರ್ಸ್‌ ರನೌಟ್ ಆಗಿದ್ದರು.

‘ಆ ಪಂದ್ಯದ ಬಳಿಕ ನನಗೆ ಮತ್ತು ನನ್ನ ಪತ್ನಿಗೆ ಜೀವ ಬೆದರಿಕೆಗಳು ಬರತೊಡಗಿದವು. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಈ ಘಟನೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಲಾಗಿತ್ತು. ಇನ್ನೂ ಕೆಲವು ಅತಿ ಆಕ್ರಮಣಕಾರಿ ಸಂದೇಶಗಳು ಬಂದಿದ್ದವು ಆದರೆ ಅವುಗಳನ್ನು ನಾನು ಬಹಿರಂಗಪಡಿಸಲಾರೆ‘ ಎಂದು ಇಎಸ್‌ಪಿಎನ್‌ಕ್ರಿಕ್‌ಇನ್ಫೊ ವೆಬ್‌ಸೈಟ್‌ಗೆ ಡುಪ್ಲೆಸಿ ಹೇಳಿದ್ದಾರೆ.

‘ಇಂತಹ ಘಟನೆಗಳು ನಮ್ಮನ್ನು ಅಂತರ್ಮುಖಿಯನ್ನಾಗಿ ಮಾಡುತ್ತವೆ. ಇದರಿಂದಾಗಿ ಆಟಗಾರರು ತಮ್ಮದೇ ಆದ ಸಣ್ಣ ಗುಂಪಿನೊಂದಿಗೆ ಮಾತ್ರ ಇರಬೇಕಾಗುತ್ತದೆ‘ ಎಂದೂ ಅವರು ಹೇಳಿದ್ದಾರೆ.

ಎಂಟರಘಟ್ಟದ ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 221 ರನ್‌ ಗಳಿಸಿತ್ತು. ಉತ್ತರವಾಗಿ ದಕ್ಷಿಣ ಆಫ್ರಿಕಾ ಬಳಗ 172 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಆಗ ಕೇವಲ 10ನೇ ಏಕದಿನ ಪಂದ್ಯವಾಡಿದ್ದ ಡುಪ್ಲೆಸಿ 36 ರನ್‌ ಗಳಿಸಿದ್ದರು. ಎದುರಾಳಿ ತಂಡದ 12ನೇ ಆಟಗಾರ ಕೈಲ್ ಮಿಲ್ಸ್ ಅವರನ್ನು ತಳ್ಳಿದ ಕಾರಣಕ್ಕಾಗಿ ಡುಪ್ಲೆಸಿ ಅವರಿಗೆ ಪಂದ್ಯಶುಲ್ಕದ ಶೇಕಡ 50ರಷ್ಟು ದಂಡವನ್ನೂ ವಿಧಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು