ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ ರಾಯಭಾರಿ ಶಾಹೀದ್ ಅಫ್ರಿದಿ

Published 24 ಮೇ 2024, 15:47 IST
Last Updated 24 ಮೇ 2024, 15:47 IST
ಅಕ್ಷರ ಗಾತ್ರ

ದುಬೈ: ವೆಸ್ಟ್‌ಇಂಡೀಸ್‌ ಮತ್ತು ಅಮೆರಿಕ ಸಹಭಾಗಿತ್ವದಲ್ಲಿ ಜೂನ್ 2ರಿಂದ 29ರವರೆಗೆ ನಡೆಯಲಿರುವ ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ಪಾಕಿಸ್ತಾನ ಮಾಜಿ ಆಲ್‌ರೌಂಡರ್‌ ಶಾಹೀದ್ ಅಫ್ರಿದಿ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ. 2009ರಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರತದ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಮತ್ತು ಸ್ಪ್ರಿಂಟ್‌ ದಂತಕಥೆ ಉಸೇನ್ ಬೋಲ್ಟ್ ಸೇರಿದಂತೆ ಪ್ರಸಿದ್ಧ ರಾಯಭಾರಿಗಳ ಗುಂಪಿಗೆ ಅಫ್ರಿದಿ ಸೇರಿಕೊಂಡರು.

‘ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ. ಈ ಆವೃತ್ತಿಯ ಭಾಗವಾಗಲು (ರಾಯಭಾರಿಯಾಗಿ) ನಾನು ರೋಮಾಂಚನಗೊಂಡಿದ್ದೇನೆ. ಹಿಂದೆಂದಿಗಿಂತಲೂ ಹೆಚ್ಚಿನ ತಂಡಗಳು, ಹೆಚ್ಚಿನ ಪಂದ್ಯಗಳನ್ನು  ನೋಡುತ್ತೇವೆ’  ಎಂದು ಅಫ್ರಿದಿ ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT