ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಕೀಬ್‌ ಫಿಟ್‌ ಆಗಿದ್ದಾರೆ’

Last Updated 27 ಮೇ 2019, 19:51 IST
ಅಕ್ಷರ ಗಾತ್ರ

ಕಾರ್ಡಿಫ್‌: ‘ಶಕೀಬ್‌ ಅಲ್ ಹಸನ್‌ ಫಿಟ್‌ ಆಗಿದ್ದಾರೆ. ಈ ಸಲದ ವಿಶ್ವಕಪ್‌ನಲ್ಲಿ ದಿಟ್ಟ ಆಟ ಆಡಿ ಎಲ್ಲರ ಮೆಚ್ಚುಗೆ ಗಳಿಸಲಿದ್ದಾರೆ’ ಎಂದು ಬಾಂಗ್ಲಾದೇಶ ತಂಡದ ಮುಖ್ಯ ಕೋಚ್‌ ಸ್ಟೀವ್‌ ರೋಡ್ಸ್‌ ತಿಳಿಸಿದ್ದಾರೆ.

ಏಕದಿನ ಮಾದರಿಯಲ್ಲಿ 198 ಪಂದ್ಯಗಳನ್ನು ಆಡಿರುವ ಶಕೀಬ್‌, 5,717ರನ್‌ ಗಳಿಸಿದ್ದು, 249 ವಿಕೆಟ್‌ ಉರುಳಿಸಿದ್ದಾರೆ. ಐಸಿಸಿ, ಇತ್ತೀಚೆಗೆ ಬಿಡುಗಡೆ ಮಾಡಿದ್ದ ಆಲ್‌ರೌಂಡರ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೇರಿದ್ದರು.

‘ಈ ತಿಂಗಳ ಆರಂಭದಲ್ಲಿ ನಡೆದಿದ್ದ ಐರ್ಲೆಂಡ್‌ ಎದುರಿನ ಪಂದ್ಯದ ವೇಳೆ ಶಕೀಬ್‌ ಗಾಯಗೊಂಡಿದ್ದರು. ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿ ಯುವ ಆಟಗಾರರಲ್ಲಿ ಹೊಸ ಚೈತನ್ಯ ತುಂಬಲಿದ್ದಾರೆ’ ಎಂದು ಐಸಿಸಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಸ್ಟೀವ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT