ನವದೆಹಲಿ: ನೆದರ್ಲೆಂಡ್ಸ್ನ ಶ್ಯೂರ್ಡ್ ಮರಾಯ್ನೆ ಅವರು ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಆಗಿ ಶುಕ್ರವಾರ ಮರುನೇಮಕಗೊಂಡಿದ್ದಾರೆ.

51 ವರ್ಷ ವಯಸ್ಸಿನ ಮರಾಯ್ನೆ ಅವರು ಹರೇಂದ್ರ ಸಿಂಗ್ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಅವರು ಇದೇ 14ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನ ‘ಸಾಯ್’ ಕೇಂದ್ರದಲ್ಲಿ 19ರಿಂದ ಆರಂಭವಾಗಲಿರುವ ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

‘ಭಾರತ ಮಹಿಳಾ ತಂಡದ ಕೋಚ್ ಆಗಿ ಮರಳುತ್ತಿರುವ ಬಗ್ಗೆ ಹೆಮ್ಮೆ ಇದೆ. ಹೊಸ ಶಕ್ತಿ ಹಾಗೂ ಸ್ಪಷ್ಟ ಗುರಿಯೊಂದಿಗೆ ತಂಡದ ಬೆಳವಣಿಗೆಗೆ ಶ್ರಮಿಸುವೆ. ಜಾಗತಿಕ ಮಟ್ಟದ ಟೂರ್ನಿಗಳಲ್ಲಿ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯುವಂತೆ ಆಟಗಾರ್ತಿಯರನ್ನು ಸಜ್ಜುಗೊಳಿಸುವ ಯೋಜನೆ ಇದೆ’ ಎಂದಿದ್ದಾರೆ.

ಮರಾಯ್ನೆ ಅವರು 2017ರಿಂದ 2021ರ ಅವಧಿಯಲ್ಲಿ ಭಾರತ ಮಹಿಳಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದ ತಂಡವು ಟೋಕಿಯೊ ಒಲಿಂಪಿಕ್ಸ್ನಲ್ಲಿ ನಾಲ್ಕನೇ ಸ್ಥಾನ ಪಡೆದು ಐತಿಹಾಸಿಕ ಸಾಧನೆ ಮಾಡಿತ್ತು. ವಿಶ್ವ ರ್ಯಾಂಕಿಂಗ್ನಲ್ಲಿ ಮೊದಲ ಬಾರಿಗೆ ಎಂಟನೇ ಸ್ಥಾನ ಪಡೆದಿತ್ತು.

ಅರ್ಜೆಂಟೀನಾದ ಮತೀಯಾಸ್ ವೀಲಾ ಅವರು ವಿಶ್ಲೇಷಣಾತ್ಮಕ (ಅನಾಲಿಟಿಕಲ್) ಕೋಚ್ ಆಗಿ ಹಾಗೂ ದಕ್ಷಿಣ ಆಫ್ರಿಕಾದ ವೇಯ್ನ್ ಲೊಂಬಾರ್ಡ್ ಅವರು ವೈಜ್ಞಾನಿಕ ಸಲಹೆಗಾರ ಮತ್ತು ‘ಅಥ್ಲೆಟಿಕ್ ಪರ್ಫಾಮೆನ್ಸ್’ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮಿಡ್ ಫೀಲ್ಡರ್ ಆಗಿದ್ದ ವೀಲಾ ಅವರು 2000 ಮತ್ತು 2004ರ ಒಲಿಂಪಿಕ್ಸ್ನಲ್ಲಿ ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ್ದರು. ಕಳೆದೆರಡು ದಶಕಗಳಿಂದ ವಿವಿಧ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2024ರ ಏಪ್ರಿಲ್ನಿಂದ ಕೋಚ್ ಆಗಿದ್ದ ಹರೇಂದ್ರ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ, ಡಿಸೆಂಬರ್ನಲ್ಲಿ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹರೇಂದ್ರ ಅವರು ಕೋಚ್ ಆಗಿದ್ದ ಅವಧಿಯಲ್ಲಿ ಭಾರತ ತಂಡವು ಕಳಪೆ ಪ್ರದರ್ಶನ ತೋರಿತ್ತು. 2025ರಲ್ಲಿ ನಡೆದ ಎಫ್ಐಎಚ್ ಪ್ರೊ ಲೀಗ್ ಎಲೀಟ್ ಟೂರ್ನಿಯಲ್ಲಿ 16 ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಹೀಗಾಗಿ, ನೇಷನ್ಸ್ ಕಪ್ ಟೂರ್ನಿಗೆ ಹಿಂಬಡ್ತಿ ಪಡೆದಿತ್ತು. 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿತ್ತು. ಅವರ ಕೋಚಿಂಗ್ ವೈಖರಿಯ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು.

ಮರಾಯ್ನೆ ಮುಂದಿದೆ ಹಲವು ಸವಾಲು: ಹೈದರಾಬಾದ್ನಲ್ಲಿ ಮಾರ್ಚ್ 8ರಿಂದ 14ರ ವರೆಗೆ ನಡೆಯಲಿರುವ ವಿಶ್ವಕಪ್ ಕ್ವಾಲಿಫೈಯರ್ಸ್ ಪಂದ್ಯಗಳು ಮರಾಯ್ನೆ ಅವರ ಮುಂದಿರುವ ಮೊದಲ ಸವಾಲು.

ಅನುಭವಿ ಆಟಗಾರ್ತಿಯರಾದ ರಾಣಿ ರಾಂಪಾಲ್, ವಂದನಾ ಕಟಾರಿಯಾ ಹಾಗೂ ದೀಪ್ ಗ್ರೇಸ್ ಎಕ್ಕಾ ಅವರು ಟೋಕಿಯೊ ಒಲಿಂಪಿಕ್ಸ್ ಬಳಿಕ ಆಟದಿಂದ ನಿವೃತ್ತಿ ಪಡೆದಿದ್ದಾರೆ. ಆಟಗಾರ್ತಿಯರ ವಿಶ್ವಾಸ ಗಳಿಸಿ, ಅವರಿಂದ ಉತ್ತಮ ಆಟವನ್ನು ಹೊರತೆಗೆಯುವ ಸವಾಲು ಮರಾಯ್ನೆ ಅವರ ಮುಂದಿದೆ. ತಂಡದ ಸಂರಚನೆಯ ಬಗ್ಗೆಯೂ ಅವರು ಶ್ರಮ ಹಾಕಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.