ವೆಸ್ಟ್‌ ಇಂಡೀಸ್‌ ಸಾಧಾರಣ ಮೊತ್ತ

7

ವೆಸ್ಟ್‌ ಇಂಡೀಸ್‌ ಸಾಧಾರಣ ಮೊತ್ತ

Published:
Updated:
ವೆಸ್ಟ್‌ ಇಂಡೀಸ್‌ ತಂಡದ ಜೇಸನ್‌ ಹೋಲ್ಡರ್‌ ಔಟಾದಾಗ ಶ್ರೀಲಂಕಾ ಆಟಗಾರರು ಸಂಭ್ರಮಿಸಿದರು ಎಎಫ್‌ಪಿ ಚಿತ್ರ

ಬ್ರಿಜ್‌ಟೌನ್‌ : ಶೇನ್‌ ಡೌರಿಚ್‌ (71; 132ಎ, 9ಬೌಂ) ಮತ್ತು ನಾಯಕ ಜೇಸನ್‌ ಹೋಲ್ಡರ್‌ (74; 123ಎ, 13ಬೌಂ) ಅವರ ಅರ್ಧಶತಕಗಳ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಶ್ರೀಲಂಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸಾಧಾರಣ ಮೊತ್ತ ಕಲೆಹಾಕಿದೆ.

ಕೆನ್ಸಿಂಗ್‌ಟನ್‌ ಓವಲ್‌ ಕ್ರೀಡಾಂಗಣದಲ್ಲಿ 5 ವಿಕೆಟ್‌ಗೆ 132 ರನ್‌ಗಳಿಂದ ಭಾನುವಾರ ಆಟ ಮುಂದುವರಿಸಿದ ವೆಸ್ಟ್‌ ಇಂಡೀಸ್‌, ಮೊದಲ ಇನಿಂಗ್ಸ್‌ನಲ್ಲಿ 69.3 ಓವರ್‌ಗಳಲ್ಲಿ 204ರನ್‌ ಗಳಿಸಿದೆ.

ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಶ್ರೀಲಂಕಾ ತಂಡ ದಿನದಾಟದ ಅಂತ್ಯಕ್ಕೆ 36 ಓವರ್‌ಗಳಲ್ಲಿ 5 ವಿಕೆಟ್‌ಗೆ 99ರನ್‌ ಪೇರಿಸಿದೆ.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌, ಮೊದಲ ಇನಿಂಗ್ಸ್‌, 69.3 ಓವರ್‌ಗಳಲ್ಲಿ 204 (ಶೇನ್ ಡೌರಿಚ್‌ 71, ಜೇಸನ್‌ ಹೋಲ್ಡರ್‌ 74, ಕೆಮರ್‌ ರೋಚ್‌ ಔಟಾಗದೆ 11; ಸುರಂಗ ಲಕ್ಮಲ್‌ 52ಕ್ಕೆ2, ಲಾಹಿರು ಕುಮಾರ 58ಕ್ಕೆ4, ಕಸುನ್‌ ರಜಿತಾ 68ಕ್ಕೆ3, ದಿಲ್ರುವಾನ ಪೆರೇರಾ 16ಕ್ಕೆ1).

ಶ್ರೀಲಂಕಾ: ಪ್ರಥಮ ಇನಿಂಗ್ಸ್‌, 36 ಓವರ್‌ಗಳಲ್ಲಿ 5 ವಿಕೆಟ್‌ಗೆ 99 (ಧನುಷ್ಕಾ ಗುಣತಿಲಕ 29, ಕುಶಾಲ್‌ ಮೆಂಡಿಸ್‌ 22, ನಿರೋಷನ್‌ ಡಿಕ್ವೆಲ್ಲಾ ಬ್ಯಾಟಿಂಗ್‌ 13; ಕೆಮರ್‌ ರೋಚ್‌ 13ಕ್ಕೆ2, ಶಾನನ್‌ ಗೇಬ್ರಿಯಲ್‌ 42ಕ್ಕೆ2, ಜೇಸನ್‌ ಹೋಲ್ಡರ್‌ 11ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !