ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌ ?

Last Updated 2 ಜುಲೈ 2020, 8:35 IST
ಅಕ್ಷರ ಗಾತ್ರ

ಕೊಲಂಬೊ: ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಲಂಕಾ ಪ್ರೀಮಿಯರ್‌ ಲೀಗ್‌ (ಎಲ್‌ಪಿಎಲ್‌) ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಲು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ತೀರ್ಮಾನಿಸಿದೆ.

ಚೊಚ್ಚಲ ಆವೃತ್ತಿಯ ಈ ಲೀಗ್‌ ಆಗಸ್ಟ್‌ 8ರಿಂದ 22ರವರೆಗೆ ನಡೆಯುವ ನಿರೀಕ್ಷೆ ಇದೆ.

‘ಲೀಗ್‌ ಆಯೋಜಿಸಲು ಕ್ರೀಡಾ ಸಚಿವಾಲಯವು ಅನುಮತಿ ನೀಡಿದೆ. ಶ್ರೀಲಂಕಾ ಸರ್ಕಾರವು ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ನಿರ್ಬಂಧ ಹೇರಿದೆ. ಹೀಗಾಗಿ ಆಗಸ್ಟ್‌ ಒಂದರವರೆಗೂ ಯಾರೂ ಶ್ರೀಲಂಕಾಕ್ಕೆ ಬರುವಂತಿಲ್ಲ. ಈ ವಿಚಾರವಾಗಿ ಅಧ್ಯಕ್ಷ ಗೋಟಬಯ ರಾಜ‍ಪಕ್ಷೆ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಎಸ್‌ಎಲ್‌ಸಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆ್ಯಷ್ಲೆ ಡಿಸಿಲ್ವಾ ತಿಳಿಸಿದ್ದಾರೆ.

‘ಒಟ್ಟು 23 ಪಂದ್ಯಗಳನ್ನು ಆಯೋಜಿಸಬೇಕೆಂಬ ಆಲೋಚನೆ ಇದೆ. ಆಗಸ್ಟ್‌ನಲ್ಲಿ ಭಾರತ ತಂಡವು ಕ್ರಿಕೆಟ್‌ ಸರಣಿಯನ್ನು ಆಡಲು ಶ್ರೀಲಂಕಾ ಪ್ರವಾಸ ಕೈಗೊಳ್ಳುವುದು ಖಾತರಿಯಾದರೆ ಎಲ್‌ಪಿಎಲ್‌ ಪಂದ್ಯಗಳ ಸಂಖ್ಯೆಯನ್ನು 13ಕ್ಕೆ ಇಳಿಸಲಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಭಾಗವಹಿಸುವ ಸಾಧ್ಯತೆ ಇದೆ. ಹರಾಜಿನಲ್ಲಿ ತಂಡವೊಂದು ಗರಿಷ್ಠ ಆರು ಮಂದಿ ವಿದೇಶಿ ಆಟಗಾರರನ್ನು ಸೆಳೆದುಕೊಳ್ಳಬಹುದು. ಆದರೆ, ಆಡುವ ಬಳಗದಲ್ಲಿ ನಾಲ್ಕು ಮಂದಿಗೆ ಮಾತ್ರ ಅವಕಾಶ ನೀಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT